ಕಸ ಆಯುತ್ತಿದ್ದ ವ್ಯಕ್ತಿ ಈಗ ಅದೇ ನಗರಕ್ಕೆ ಮೇಯರ್

By Web DeskFirst Published Jan 21, 2019, 4:54 PM IST
Highlights

ಒಂದು ಕಾಲದಲ್ಲಿ ಈ ನಗರದಲ್ಲಿ ಕಸ ಆಯುತ್ತಿದ್ದ ವ್ಯಕ್ತಿ ಇದೀಗ ಅದೇ ನಗರದಲ್ಲಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ರಾಜೇಶ್ ಕಾಲಿಯಾ ಚಂಡೀಗಢ ಮೇಯರ್ ಆಗಿದ್ದಾರೆ. 

ಚಂಡೀಗಢ : ಬಿಜೆಪಿ ಪಕ್ಷದಿಂದ ಚಂಡೀಗಢಕ್ಕೆ ನೂತನ ಮೇಯರ್  ಆಯ್ಕೆಯಾಗಿದ್ದಾರೆ. 

ಬಂಡಾಯ ಮುಖಂಡನಿಗಿಂತ 16 ಹೆಚ್ಚು ಮತಗಳನ್ನು ಪಡೆದು ರಾಜೇಶ್ ಕಾಲಿಯಾ ಮೇಯರ್ ಹುದ್ದೆ ಅಲಂಕರಿಸಿದ್ದಾರೆ. 

ಮೇಯರ್‌ ಆದರೂ ಮನೆಗೆ ಹಾಲು ಹಾಕೋದು ಬಿಡಲ್ಲ

ಬಡ ಕುಟುಂಬಂದಿಂದ ಬಂದ ಕಾಲಿಯಾ ತಂದೆ ಸ್ವೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ತಂದೆಯೊಂದಿಗೆ ಕಾಲಿಯಾ ಕೂಡ ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ಇಂದು ಇದೇ ನಗರಕ್ಕೆ ಮೊದಲ ಪ್ರಜೆಯಾಗಿ ಆಯ್ಕೆಯಾಗಿರುವುದು ಇವರ ಹೆಗ್ಗಳಿಗೆಯಾಗಿದೆ. 

ಆಟೋ ಚಾಲಕನ ಪತ್ನಿ ಈಗ ಶಿವಮೊಗ್ಗ ಮೇಯರ್

ಸಹೋದರ ಮೇಯರ್ ಆಗಿದ್ದರೂ ಕೂಡ ಕಾಲಿಯಾ ಸಹೋದರ ಇಂದಿಗೂ ಇಲ್ಲಿ ಕಸ ಗುಡಿಸುವ ಕೆಲಸ ಮುಂದುವರಿಸಿದ್ದಾರೆ.  

ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ತನ್ನ ರಾಜಕೀಯವನ್ನು ಆರಂಭಿಸಿದ ಕಾಲಿಯಾ 1996ರಲ್ಲಿ ಚಂಡೀಗಢದ ಮುನಿಸಿಪಲ್ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು. ಬಳಿಕ ಒಮ್ಮೆ ಚುನಾವಣೆ ಸೋತಿದ್ದು, ಇದೀಗ ಮತ್ತೆ ಅಧಿಕಾರದ ಗದ್ದುಗೆ ಏರಿದ್ದಾರೆ. 

click me!