ಕಂಬಳಕ್ಕೆ ರಾಘವೇಶ್ವರ ಶ್ರೀ ಬೆಂಬಲ

Published : Jan 24, 2017, 03:22 PM ISTUpdated : Apr 11, 2018, 12:54 PM IST
ಕಂಬಳಕ್ಕೆ ರಾಘವೇಶ್ವರ ಶ್ರೀ ಬೆಂಬಲ

ಸಾರಾಂಶ

ಕೃಷಿ ಸಂಸ್ಕೃತಿಯೂ ಸಮೃದ್ಧವಾಗಿದೆ. ಹೀಗಾಗಿ ಜಾನಪದ ಹಾಗೂ ಸಾಂಸ್ಕೃತಿಕ ಪರಂಪರೆ ದೃಷ್ಟಿಯಿಂದಲೂ ಕಂಬಳ ಆಚರಣೆ ನಡೆಯಬೇಕು ಎಂದು ರಾಘವೇಶ್ವರ ಶ್ರೀ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು (ಜ.24): ಕರಾವಳಿಯ ಜಾನಪದ ಕ್ರೀಡೆ ಕಂಬಳ ಉಳಿಸಿ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಯವರು ಕಂಬಳ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ.

ಗೋಮಂಗಲ ಯಾತ್ರೆಯ ಸಮಾರೋಪ ಪ್ರಯುಕ್ತ ಮಂಗಳೂರಿನಲ್ಲಿ ಮಾತನಾಡಿದ ಅವರು, ಕಂಬಳದಿಂದಾಗಿ ಗೋ ತಳಿ ಉಳಿಯುವಂತಾಗಿದೆ.

ಕೃಷಿ ಸಂಸ್ಕೃತಿಯೂ ಸಮೃದ್ಧವಾಗಿದೆ. ಹೀಗಾಗಿ ಜಾನಪದ ಹಾಗೂ ಸಾಂಸ್ಕೃತಿಕ ಪರಂಪರೆ ದೃಷ್ಟಿಯಿಂದಲೂ ಕಂಬಳ ಆಚರಣೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಸುವರ್ಣ ನ್ಯೂಸ್ ಅಭಿಯಾನಕ್ಕೆ ಭಾರೀ ಬೆಂಬಲ

ಸುವರ್ಣನ್ಯೂಸ್​ ‘ಕಂಬಳ ಕಾಪಾಡಿ’ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜಾನಪದ ಕ್ರೀಡೆ ಕಂಬಳ ಉಳಿವಿಗಾಗಿ ಮಂಗಳೂರಿನಲ್ಲಿ ವಿವಿಧ ಸಂಘಟನೆಗಳು ಇಂದು ಹೋರಾಟ ನಡೆಸಿದವು.  ತುಳುನಾಡ ರಕ್ಷಣಾ ವೇದಿಕೆ ಕಂಬಳ ಉಳಿಸಿ ಅಭಿಯಾನ ನಡೆಸಿ ಕಂಬಳ ಕ್ರೀಡೆ ನಿಷೇಧ ತೆರವಿಗೆ ಆಗ್ರಹಿಸಿತು.  ನಗರದ ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಯುತ್ತಿದ್ದು ವಿದ್ಯಾರ್ಥಿಗಳು, ಕಾರ್ಮಿಕರೂ ಹೋರಾಟದಲ್ಲಿ ಪಾಲ್ಗೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿಕೆಟ್ ಇಲ್ಲದ ಪ್ರಯಾಣಿಕರಿಂದ ಈ ವರ್ಷ ಭಾರತೀಯ ರೈಲ್ವೇ ವಸೂಲಿ ಮಾಡಿದ ದಂಡ ಎಷ್ಟು?
ರಾಯಚೂರು ಲೋಕಾ ದಾಳಿ, ಎಇಇ ವಿಜಯಲಕ್ಷ್ಮಿ ಮನೆಯಲ್ಲಿ ಸಿಕ್ತು ಲೆಕ್ಕವಿಲ್ಲದಷ್ಟು ಆಸ್ತಿ, ಚಿನ್ನ! ಬೆಳಗ್ಗಿನಿಂದ ಇನ್ನೂ ಮುಗಿಯದ ಶೋಧ!