ಪುರಿ ಜಗನ್ನಾಥ ಮಂದಿರ ಪ್ರವೇಶಕ್ಕೆ ಸಾಲು ನಿಯಮ ವಿರೋಧಿಸಿ ಭಕ್ತರ ಹಿಂಸಾಚಾರ

By Web DeskFirst Published Oct 4, 2018, 11:35 AM IST
Highlights

ಪುರಿ ಜಗನ್ನಾಥ ಮಂದಿರದಲ್ಲಿ ವರ್ಷಕ್ಕೊಮ್ಮೆ ನಡೆಯುವ ರಥಯಾತ್ರೆ ವೇಳೆ ದುರ್ಘಟನೆಗಳು ನಡೆದಿದ್ದು ಇದೆ. ಹಲವು ಪವಾಡಗಳು ನಡೆಯುವ ಈ ದೇವಾಲಯಕ್ಕೆ ಭಕ್ತರ ದಂಡೇ ಭೇಟಿ ನೀಡುತ್ತದೆ. ಆದ್ದರಿಂದ ಭಕ್ತರ ಪ್ರವಾಹವನ್ನು ನಿಯಂತ್ರಿಸಲು ಆಡಳಿತ ಮಂಡಳಿ ಸರದಿ ನಿಯಮ ಜಾರಿಗೊಳಿಸಿದೆ. ಇದಕ್ಕೆ ಭಕ್ತರ ವಿರೋಧ ವ್ಯಕ್ತವಾಗುತ್ತಿದೆ.

ಪುರಿ(ಒಡಿಶಾ): ಇಲ್ಲಿನ 12ನೇ ಶತಮಾನದ ಪುರಿ ಜಗನ್ನಾಥ ಮಂದಿರದಲ್ಲಿ ದೇವರ ದರ್ಶನಕ್ಕಾಗಿ ಭಕ್ತಾದಿಗಳು ಸಾಲಾಗಿ ಬರಬೇಕೆಂಬ ನಿಯಮ ಜಾರಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ಸಂಭವಿಸಿದೆ. ಬುಧವಾರ ಹಿಂಸಾಚಾರಕ್ಕೆ ತಿರುಗಿದ ಭಕ್ತರು ಮತ್ತು ಪೊಲೀಸರ ನಡುವಿನ ನೂಕು-ನುಗ್ಗಲಿನಲ್ಲಿ 9 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

"

ಈ ಹಿನ್ನೆಲೆ ಪರಿಸ್ಥಿತಿಯನ್ನು ತಹಬದಿಗೆ ತರಲು ಇಲ್ಲಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಇನ್ನು ಈ ಹಿಂಸಾಚಾರಕ್ಕೆ ಕಾರಣವಾದ ಶ್ರೀ ಜಗನ್ನಾಥ ಸೇನೆಯ ಪ್ರಿಯದರ್ಶನ್‌ ಪಟ್ನಾಯಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಬಿಡುಗಡೆಗೆ ಆಗ್ರಹಿಸಿ, ಶ್ರೀ ಜಗನ್ನಾಥ ಸೇನಾ ಕಾರ್ಯಕರ್ತರು ಆಗ್ರಹಿಸಿದರು. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ದೇವರ ದರ್ಶನಕ್ಕಾಗಿ ಭಕ್ತಾದಿಗಳು ಸಾಲಾಗಿ ಬರಬೇಕೆಂಬ ನಿಯಮವನ್ನು ಪುರಿ ಜಗನ್ನಾಥ ದೇವಸ್ಥಾನದಲ್ಲಿ ಜಾರಿಗೆ ತರಲಾಗಿತ್ತು.

ಪುರಿ ಜಗನ್ನಾಥ ಮಂದಿರದಲ್ಲಿ ಏನೆಲ್ಲಾ ಪವಾಡಗಳು ನಡೆಯುತ್ತೆ ಗೊತ್ತಾ?

click me!