
ಕೊಲಂಬೋ[ಏ.24]: ಶ್ರೀಲಂಕಾದಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಮತ್ತೊಬ್ಬ ಕನ್ನಡಿಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮೃತ ನಾಗರಾಜ್ ರೆಡ್ಡಿ ಜೊತೆಗೆ ಬಿಸಿನೆಸ್ ಟೂರ್ ಗೆ ಪುರುಷೋತ್ತಮ್ ರೆಡ್ಡಿ ಕುರಿತಾಗಿ ಮಾಹಿತಿ ನೀಡಿ ಎಂದು ಅವರ ಸ್ನೇಹಿತ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಶ್ರೀಲಂಕಾದಲ್ಲಿರುವ ರಾಯಭಾರಿ ಕಚೇರಿ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದೆ.
ಶ್ರೀಲಂಕಾದಲ್ಲಿರುವ ರಾಯಭಾರಿ ಕಚೇರಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ಪುರುಷೋತ್ತಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುರುಷೋತ್ತಮ್ ಜೊತೆ ಅವರ ಕುಟುಂಬದ ಸದಸ್ಯರು ಕೂಡ ಇದ್ದಾರೆ ಎಂದು ಮಾಹಿತಿ ನೀಡಿದೆ.
ನಾಗರಾಜ್ ರೆಡ್ಡಿ, ಪುರುಷೋತ್ತಮ್ ರೆಡ್ಡಿ ಸೇರಿ ಒಟ್ಟು 4 ಮಂದಿ ವ್ಯಾಪಾರದ ವಿಚಾರವಾಗಿ ಶ್ರೀಲಂಕಾಗೆ ತೆರಳಿದ್ದರು. ಸ್ಫೋಟ ನಡೆದಾಗ ಇಬ್ಬರು ಹೋಟೆಲ್ ಕೊಠಡಿಯಲ್ಲಿ ಉಳಿದುಕೊಂಡಿದ್ದರೆ ಉಳಿದಿಬ್ಬರು ತಿಂಡಿಗೆ ಬಂದಿದ್ದರು. ಈ ವೇಳೆ ಸ್ಫೋಟ ,ಸಂಭವಿಸಿದ್ದು, ತಿಂಡಿ ತಿನ್ನಲು ಬಂದಿದ್ದ ನಾಗರಾಜ್ ರೆಡ್ಡಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಶ್ರೀಲಂಕಾದಲ್ಲ ಸರಣಿ ಬಾಂಬ್ ಸ್ಪೋಟ ಪ್ರಕರಣದ ಕುರಿತಾಗಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸುತ್ತಾ ಬಾಂಬ್ ಬ್ಲಾಸ್ಟ್ ವೇಳೆ ಮೃತ ನಾಗರಾಜ್ ರೆಡ್ಡಿ ಜೊತೆಗಿದ್ದ ಪುರುಷೋತ್ತಮ್ ರೆಡ್ಡಿಗೆ ಸದ್ಯ ಶ್ರೀಲಂಕಾದ ಕೊಲೊಂಬೊದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡುತ್ತೇವೆ. ದೇಹಕ್ಕೆ ಹೊಕ್ಕಿರುವ ಗಾಜಿನ ಚೂರು, ಕಬ್ಬಿಣದ ಚೂರನ್ನ ಹೊರತೆಗೆಯಬೇಕಿದೆ. ಘಟನೆ ನಡೆದ 20 ನಿಮಿಷದಲ್ಲಿ ಪುರುಷೋತ್ತಮ್ ರನ್ನ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣವೇ ಚಿಕಿತ್ಸೆ ದೊರೆತಿದ್ರಿಂದ ಪುರುಷೋತ್ತಮ್ ಬದುಕುಳಿದಿದ್ದಾರೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.