ಮುಂಗಾರು ಆರಂಭಕ್ಕೂ ಮುನ್ನವೇ ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದು, ಕೊಡಗಿನಲ್ಲಿ ಮಂಗಳವಾರ ತಡರಾತ್ರು ವರುಣ ಆರ್ಭಟಿಸಿದ್ದಾನೆ.
ಕೊಡಗು : ರಾಜ್ಯದಲ್ಲಿ ಈಗಾಗಲೇ ಹಲವು ಪ್ರದೇಶಗಳಲ್ಲಿ ವರುಣ ಆರ್ಭಟಿಸುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹಲವು ಕಡೆ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದೆ.
ಕೊಡಗಿನಲ್ಲಿ ತಡರಾತ್ರಿ ಬಿರುಗಾಳಿ ಸಹಿತ ಧಾರಾಕಾರವಾಗಿ ಮಳೆ ಸುರಿದಿದ್ದು, ಶಾಲೆಯೊಂದರ ಛಾವಣಿ ಹಾರಿಹೋಗಿದೆ. ಅಲ್ಲದೇ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.
ರಾತ್ರಿ ವೇಳೆ ಮಳೆ ಸುರಿದಿದ್ದು, ಇದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಶಾಲೆಯ ಛಾವಣಿಗೆ ಹಾಕಲಾಗಿದ್ದ 30ಕ್ಕೂ ಹೆಚ್ಚು ಸೀಟುಗಳು ಹಾರಿಹೋಗಿವೆ.
ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ.