
ಪಂಜಾಬ್(ನ.11): ಪಂಜಾಬ್ ಸರ್ಕಾರ ನೆರೆಯ ಹರಿಯಾಣದೊಂದಿಗೆ ನೀರು ಹಂಚಿಕೊಳ್ಳಬೇಕು ಎಂದು ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಸಟ್ಲೇಜ್ ಮತ್ತು ಯಮುನಾ ನದಿ ಜೋಡಿಸುವ ಕಾಲುವೆ ನಿರ್ಮಾಣದ ಯೋಜನೆಯನ್ನೇ ರದ್ದುಪಡಿಸಿ ಪಂಜಾಬ್ ವಿಧಾನಸಭೆ ಅಂಗೀಕರಿಸಿದ ನಿರ್ಣಯ ಅಸಾಂವಿಧಾನಿಕ ಕ್ರಮ ಎಂದಿದೆ.
ಸಟ್ಲೆಜ್-ಯಮುನಾ ನದಿಗಳನ್ನು ಸಂಪರ್ಕಿಸುವ ಕಾಲುವೆ ನಿರ್ಮಾಣ ವಿವಾದದ ವಿಚಾರಣೆ ನಡೆಸಿದ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ, ಹರ್ಯಾಣದ ಜೊತೆಗಿನ ನೀರು ಹಂಚಿಕೆ ಒಪ್ಪಂದವನ್ನು ಮುರಿಯುವ ಯಾವುದೇ ಅಧಿಕಾರ ಪಂಜಾಬ್ ಸರ್ಕಾರಕ್ಕಿಲ್ಲ ಎಂದಿದೆ. ಅಲ್ಲದೆ ಕಾಲುವೆ ಕಾಮಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದೆ.
ಇನ್ನು ಸುಪ್ರೀಂ ಕೋಟ್ ತೀರ್ಪು ವಿರೋಧಿಸಿ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯಾಧ್ಯಕ್ಷ, ಸಂಸದ ಅಮರಿಂದರ್ ಸಿಂಗ್ ಅವರು ಸೇರಿದಂತೆ ಎಲ್ಲಾ ಶಾಸಕರು ಸಾಮೂಹಿಕ ರಾಜಿನಾಮೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.