
ಸೋನಮುರ (ತ್ರಿಪುರಾ): ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ತ್ರಿಪುರಾದಲ್ಲಿನ ಸಿಎಂ ಮಾಣಿಕ್ ಸರ್ಕಾರ್ ನೇತೃತ್ವದ ಎಡಪಂಥೀಯ ಸರ್ಕಾರವನ್ನು ಕಿತ್ತೆಸೆಯುವಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ.
ಇಲ್ಲಿನ ರಂಗಮಾಟಿಯಾ ಮದ್ರಸಾ ಮೈದಾನದಲ್ಲಿ ಚುನಾವಣಾ ರಾರಯಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ತಮ್ಮ ಭವಿಷ್ಯವನ್ನು ಬದಲಾಯಿಸಿಕೊಳ್ಳಲು ‘ನೀವು ನಕಲಿ ಮಾಣಿಕ್ಯ (ಮಾಣಿಕ್ ಸರ್ಕಾರ್) ಬಿಟ್ಟು ಅಸಲಿ ಹೀರಾ(ವಜ್ರ)’ ಆಯ್ಕೆ ಮಾಡಿ, ಎಂದು ಪರೋಕ್ಷವಾಗಿ ಹಾಲಿ ಸಿಎಂ ಮಾಣಿಕ್ ಸರ್ಕಾರ್ ಆಡಳಿತವನ್ನು ವ್ಯಂಗ್ಯವಾಡಿದ್ದಾರೆ.
ಹೀರಾ ಪದದ ಪೂರ್ಣಾರ್ಥ ತಿಳಿಸಿದ ಮೋದಿ, ‘ಎಚ್’ ಎಂದರೆ ಹೆದ್ದಾರಿ, ‘ಐ’ ಎಂದರೆ ಇಂಟರ್ನೆಟ್, ‘ಆರ್’ ಎಂದರೆ ರಸ್ತೆ ಸಾರಿಗೆ, ‘ಎ’ ಎಂದರೆ ವಿಮಾನ ಮಾರ್ಗಗಳು ಎಂದು ವಿವರಿಸಿದರು. ಫೆ. 18ರಂದು 60 ಸದಸ್ಯ ಬಲದ ತ್ರಿಪುರಾ ವಿಧಾನಸಭಾ ಚುನಾವಣೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.