ಪುಣೆಯ ಚಾಯ್ ವಾಲಾಗೆ ತಿಂಗಳಿಗೆ 12 ಲಕ್ಷ ಆದಾಯ..!

By Suvarna Web DeskFirst Published Mar 5, 2018, 8:51 AM IST
Highlights

ಚಾಯ್‌ವಾಲಾ ಹಿನ್ನೆಲೆ ಮತ್ತು ಪಕೋಡಾ ಮಾರುವ ವೃತ್ತಿಯ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಹೇಳಿಕೆಗಳು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವಾಗಲೇ, ಪುಣೆಯ ವ್ಯಾಪಾರಿಯೊಬ್ಬರು ಕೇವಲ ಚಹಾ ಮಾರಿಕೊಂಡೇ ಮಾಸಿಕ 12 ಲಕ್ಷ ರು. ಆದಾಯ ಪಡೆಯುತ್ತಿರುವ ಪ್ರೇರಣಾದಾಯಕ ಘಟನೆ ಯೊಂದು ಬೆಳಕಿಗೆ ಬಂದಿದೆ.

ನವದೆಹಲಿ: ಚಾಯ್‌ವಾಲಾ ಹಿನ್ನೆಲೆ ಮತ್ತು ಪಕೋಡಾ ಮಾರುವ ವೃತ್ತಿಯ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಹೇಳಿಕೆಗಳು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವಾಗಲೇ, ಪುಣೆಯ ವ್ಯಾಪಾರಿಯೊಬ್ಬರು ಕೇವಲ ಚಹಾ ಮಾರಿಕೊಂಡೇ ಮಾಸಿಕ 12 ಲಕ್ಷ ರು. ಆದಾಯ ಪಡೆಯುತ್ತಿರುವ ಪ್ರೇರಣಾದಾಯಕ ಘಟನೆ ಯೊಂದು ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಪುಣೆಯಲ್ಲಿರುವ ಜನಪ್ರಿಯವಾದ ‘ಯೆವ್ಲೆ’ ಟೀ ಅಂಗಡಿಗಳ ಮಾಲೀಕ ನವನಾಥ್ ಯೆವ್ಲೆಯೇ ಈ ಸ್ಟೋರಿಯ ಹೀರೋ. ಕೆಲ ವರ್ಷಗಳ ಹಿಂದಷ್ಟೇ ನವನಾತ್ ಆರಂಭಿಸಿದ್ದ ‘ಯೆವ್ಲೆ’ ಚಹಾ ಅಂಗಡಿ ಇದೀಗ ಭರ್ಜರಿ ಯಶಸ್ಸು ಗಳಿಸಿದ್ದು, ಅಂಗಡಿಗಳ ಸಂಖ್ಯೆ 3ಕ್ಕೆ ಏರಿದೆ.

ಈ ಮೂರು ಚಹಾ ಹೋಟೆಲ್‌ಗಳ ಮೂಲಕ ಅವರು ಮಾಸಿಕ 112 ಲಕ್ಷ ರು. ಆದಾಯಗಳಿಸುತ್ತಿದ್ದಾರೆ. ತಮ್ಮ ಚಹಾ ವ್ಯಾಪಾರದ ಪ್ರತಿಕ್ರಿಯಿಸಿರುವ ನವನಾಥ್ ಯೆವ್ಲೆ, ‘ಸಮೋಸ ವ್ಯಾಪಾರದ ರೀತಿಯಾಗಿ ಟೀ ಮಾರಾಟವೂ ದೇಶದಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತಿದೆ. ಈ ಉದ್ಯಮವು ಶರವೇಗದಲ್ಲಿ ಬೆಳವಣಿಗೆಯಾಗುತ್ತಿದ್ದು, ನಾನಂತೂ ತುಂಬಾ ಖುಷಿಯಾಗಿದ್ದೇನೆ ಎಂದಿದ್ದಾರೆ.

click me!