ಲಕ್ಷಾಂತರ ರು. ಮೌಲ್ಯದ ಚೆಕ್ ಮರಳಿಸಿ ಪ್ರಮಾಣಿಕತೆ ಮೆರೆದ ಆಟೋ ಚಾಲಕ

Published : Dec 20, 2018, 03:42 PM IST
ಲಕ್ಷಾಂತರ ರು. ಮೌಲ್ಯದ ಚೆಕ್ ಮರಳಿಸಿ  ಪ್ರಮಾಣಿಕತೆ ಮೆರೆದ ಆಟೋ ಚಾಲಕ

ಸಾರಾಂಶ

 ಪುಣೆಯ ಆಟೋ ಚಾಲಕರೋರ್ವರು ಕೂಡ ತಮ್ಮ ಪ್ರಾಮಾಣಿಕತೆ ಮೆರೆದಿದ್ದು, ಪ್ರಯಾಣಿಕರೋರ್ವರು ತಮ್ಮ ಆಟೋದಲ್ಲಿ ಮರೆತು ಹೋಗಿದ್ದ 4 ಲಕ್ಷ ರು. ಚೆಕ್ ಮರಳಿಸಿದ್ದಾರೆ. 

ಪುಣೆ :  ಅನೇಕ ಬಾರಿ ಆಟೋ ಚಾಲಕರು, ಬಸ್ ಚಾಲಕರ ಪ್ರಮಾಣಿಕತೆಯ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಅದರಂತೆ ಪುಣೆಯ ಆಟೋ ಚಾಲಕರೋರ್ವರು ಕೂಡ ತಮ್ಮ ಪ್ರಾಮಾಣಿಕತೆ ಮೆರೆದಿದ್ದು, ಪ್ರಯಾಣಿಕರೋರ್ವರು ತಮ್ಮ ಆಟೋದಲ್ಲಿ ಮರೆತು ಹೋಗಿದ್ದ 4 ಲಕ್ಷ ರು. ಚೆಕ್ ಮರಳಿಸಿದ್ದಾರೆ. 

ಅವಿನಾಶ್ ಬೊಕಾರೆ ಎನ್ನುವ  ವ್ಯಕ್ತಿಯ ಆಟೋದಲ್ಲಿ  ಡಿಸೆಂಬರ್ 14ರಂದು ವ್ಯಕ್ತಿಯೋರ್ವರು 4 ಲಕ್ಷ ರು. ಮೌಲ್ಯದ ಚೆಕ್ ಮರೆತು ತೆರಳಿದ್ದರು. ಇದನ್ನು ಕಂಡ ಅವಿನಾಶ್ ಪೊಲೀಸರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. 

ಬ್ಯಾಗ್ ಮರೆತು ತೆರಳಿದ್ದ ಪ್ರಯಾಣಿಕರನ್ನೇ ಹುಡುಕಲು ಯತ್ನಿಸಿದ್ದು, ಆ ವ್ಯಕ್ತಿ ಪತ್ತೆಯಾಗದಿದ್ದಾಗ ಪೊಲೀಸರಿಗೆ ಅದನ್ನು ನೀಡಿದ್ದಾರೆ. ಪೊಲೀಸರು ಬ್ಯಾಗ್ ಮಾಲಿಕ ಯುವರಾಜ್ ಮಾನೆಯನ್ನು ಪತ್ತೆ ಹಚ್ಚಿ ಅವರಿಗೆ ಹಸ್ತಾಂತರಿಸಿದ್ದಾರೆ. 

ಪುಣೆಯ ಆಟೋ ಚಾಲಕ ಅವಿನಾಶ್ ಈ ರೀತಿಯ ಬ್ಯಾಗ್ ಮರಳಿಸಿದ ವಿಚಾರ ಸುದ್ದಿಯಾಗುತ್ತಿದ್ದಂತೆ ಅವರ ಪ್ರಮಾಣಿಕತೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬ್ಯಾಗ್ ಮಾಲಿಕ ಮಾನೇ ಕೂಡ ಅವರಿಗೆ ತಮ್ಮ ಧನ್ಯವಾಧ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

28 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ, 'ಇದು ಸೂಕ್ತ ಸಮಯವಲ್ಲ' ವಾರ್ನಿಂಗ್‌ ನೀಡಿದ IMD
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?