
ಮಂಡ್ಯ, [ಫೆ.16]: ಉಗ್ರರ ಶಿಕಂಡಿ ದಾಳಿಗೆ ಹುತಾತ್ಮರಾದ ಮಂಡ್ಯದ ಗಂಡುಗಲಿ ಎಚ್. ಗುರು ಪಂಚಭೂತಗಳಲ್ಲಿ ಲೀನರಾದರು.
ಮಂಡ್ಯದ ಕೆ.ಎಂ. ದೊಡ್ಡಿಯಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಇಂದು [ಶನಿವಾರ] ಅಂತ್ಯಕ್ರಿಯೆ ನೆರವೇರಿಸಲಾಯಿತು. ಸಹೋದರ ಮಧು ಅಣ್ಣ ಗುರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ವೇಳೆ ‘ಗುರು ಮತ್ತೆ ಹುಟ್ಟಿ ಬಾ’, ವಂದೇ ಮಾತರಂ ಎಂಬ ಘೋಷಣೆಗಳು ಮೊಳಗಿದವು.
ಈ ವೇಳೆ ಅಂತ್ಯಕ್ರಿಯೆಯಲ್ಲಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವ ಡಿವಿ ಸದಾನಂದಗೌಡ, ಮಾಜಿ ಸಿಎಂ ಎಸ್.ಎಂ.ಕೃಷ್ಣ ಸೇರಿದಂತೆ ಅನೇಕ ಗಣ್ಯರು ಸೇರಿದಂತೆ ಸಾವಿರಾರು ಮಂದಿ ಸಾರ್ವಜನಿಕರು ಭಾಗಿಯಾಗಿದ್ರು.
ಮಲೇಷ್ಯಾದಿಂದಲೇ ಹುತಾತ್ಮ ಗುರು ಕುಟುಂಬಕ್ಕೆ ಜಮೀನು ನೆರವು ಘೋಷಿಸಿದ ಸುಮಲತಾ ಅಂಬರೀಶ್
ಇದಕ್ಕೂ ಮುನ್ನ ಪಾರ್ಥಿವ ಶರೀರ ಸ್ವಗ್ರಾಮ ಗುಡಿಗೆರೆಯ ನಿವಾಸಕ್ಕೆ ಬರುತ್ತಿದ್ದಂತೆ ಹುತಾತ್ಮ ಗುರು ಅವರ ಪತ್ನಿ ಕಲಾವತಿ ಭಾವುಕ ಸೆಲ್ಯೂಟ್ ಮಾಡಿದರು. ಈ ದೃಶ್ಯ ಎಲ್ಲರ ಕಣ್ಣಂಚಿನಲ್ಲಿ ನೀರು ತರಿಸಿತು.
ಮನ ಕಲಕುವಂತಿದೆ ಹುತಾತ್ಮ ಯೋಧ ಗುರುವಿನ ಕಥೆ
“ವಾಪಾಸು ಬಂದೆ ಬರುತ್ತೇನೆ!! ಒಂದೋ ತ್ರಿವರ್ಣ ಧ್ವಜ ಹಾರಿಸಿ ಬರುತ್ತೇನೆ, ಇಲ್ಲ ತ್ರಿವರ್ಣ ಧ್ವಜದಲ್ಲಿ ಅಲಂಕೃತನಾಗಿ ಬರುತ್ತೇನೆ!!” ಕಾರ್ಗಿಲ್ ಹೀರೋ ಕಾಪ್ಟನ್ ವಿಕ್ರಮ್ ಬಾತ್ರಾ ಮಾತಿನಂತೆ ಉಗ್ರರ ರಣಹೇಡಿ ಕೃತ್ಯದಿಂದ ಮಂಡ್ಯದ ಗಂಡುಗಲಿ ಎಚ್. ಗುರು ತ್ರಿವರ್ಣ ಧ್ವಜದಲ್ಲಿ ಅಲಂಕೃತನಾಗಿ ಪ್ರತಿಯೊಬ್ಬರಲ್ಲಿ ದೇಶಪ್ರೇಮ ಜಾಗೃತಿಗೊಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.