ಮೇಕೆದಾಟು ಯೋಜನೆಗೆ ಮತ್ತೊಂದು ರಾಜ್ಯದಿಂದಲೂ ವಿರೋಧ..!

By Kannadaprabha NewsFirst Published Jul 15, 2021, 8:10 AM IST
Highlights

* ಪ್ರಧಾನಿ ಮೋದಿಗೆ ದೂರಲು ನಿರ್ಧಾರ
* ಯೋಜನೆಗೆ ತಡೆಯೊಡ್ಡುವಂತೆ ಮನವಿ 
* ಪುದುಚೇರಿ ಕೂಡ ಕಾವೇರಿ ಕಣಿವೆ ರಾಜ್ಯ 
 

ಪುದುಚೇರಿ(ಜು.15): ತಮಿಳುನಾಡು ಬಳಿಕ ಪುದುಚೇರಿ ಸಹ ಕರ್ನಾಟಕ ಸರ್ಕಾರ ಕಾವೇರಿ ನದಿಗೆ ಅಡ್ಡಲಾಗಿ ಬಳಿ ನಿರ್ಮಿಸಲು ಹೊರಟಿರುವ ಅಣೆಕಟ್ಟೆಗೆ ವಿರೋಧ ವ್ಯಕ್ತಪಡಿಸಿ, ಈ ವಿಷಯವನ್ನು ಕೇಂದ್ರದ ಬಳಿ ಕೊಂಡೊಯ್ಯಲು ನಿರ್ಧರಿಸಿದೆ. 

ಬುಧವಾರ ಮುಖ್ಯಮಂತ್ರಿ ಎನ್‌.ರಂಗಸಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಅಲ್ಲದೆ ಈ ಸಂಬಂಧ ಶೀಘ್ರವೇ ಪ್ರಧಾನಿ ಮೋದಿ, ಕೇಂದ್ರ ಜಲ ಸಚಿವ ಗಜೇಂದ್ರ ಶೆಖಾವತ್‌ ಅವರಿಗೆ ಪತ್ರ ಬರೆದು ಮಧ್ಯಪ್ರವೇಶಕ್ಕೆ ಒತ್ತಾಯಿಸಲಿದ್ದಾರೆ. ಹಾಗೂ 9000 ಕೋಟಿ ವೆಚ್ಚದ ಯೋಜನೆಗೆ ತಡೆಯೊಡ್ಡುವಂತೆ ಮನವಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪುದುಚೇರಿ ಕೂಡ ಕಾವೇರಿ ಕಣಿವೆ ರಾಜ್ಯವಾಗಿದ್ದು, ಕಾರೈಕಲ್‌ ಪ್ರದೇಶವು ಮೇಲೆ ಅವಲಂಬಿಸಿದೆ.

ಕರ್ನಾಟಕದ ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸರ್ವಪಕ್ಷ ಸಭೆಯಲ್ಲಿ ಮಹತ್ವದ 3 ನಿರ್ಧಾರ!

ಆದರೆ ಪ್ರಸ್ತಾಪಿತ ಯೋಜನೆಯಿಂದ ನೆರೆಯ ರಾಜ್ಯಗಳಿಗೆ ಯಾವುದೇ ಹಾನಿ ಇಲ್ಲ ಎಂದು ಕರ್ನಾಟಕ ಸರ್ಕಾರ ಈಗಾಗಲೇ ಹೇಳಿದೆ.
 

click me!