ವಿಕೃತ ಕಾಮಿ ಸೈಕೋ ಜಯಶಂಕರ್ ಜೈಲಿನಲ್ಲಿ ಆತ್ಮಹತ್ಯೆ

Published : Feb 27, 2018, 09:12 AM ISTUpdated : Apr 11, 2018, 12:36 PM IST
ವಿಕೃತ ಕಾಮಿ ಸೈಕೋ ಜಯಶಂಕರ್ ಜೈಲಿನಲ್ಲಿ ಆತ್ಮಹತ್ಯೆ

ಸಾರಾಂಶ

ಪರಪ್ಪನ ಅಗ್ರಹಾರ ಬಳಿ ಇರುವ ಕೇಂದ್ರ ಕಾರಾಗೃಹದಲ್ಲಿ ಸಜಾ ಖೈದಿಯಾಗಿದ್ದ ವಿಕೃತ ಕಾಮಿ ಸೈಕೋ ಜಯಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಬೆಂಗಳೂರು (ಫೆ. 27): ಪರಪ್ಪನ ಅಗ್ರಹಾರ ಬಳಿ ಇರುವ ಕೇಂದ್ರ ಕಾರಾಗೃಹದಲ್ಲಿ ಸಜಾ ಖೈದಿಯಾಗಿದ್ದ ವಿಕೃತ ಕಾಮಿ ಸೈಕೋ ಜಯಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಬ್ಲೇಡ್ ನಿಂದ ಕತ್ತುಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಎರಡು ಗಂಟೆಯಲ್ಲಿ ಈ  ಘಟನೆ ನಡೆದಿದೆ. ಕೂಡಲೇ ಜಯಶಂಕರ್’ರವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ದಾರಿಯ ಮಧ್ಯೆ ಜಯಶಂಕರ್ ಸಾವನ್ನಪ್ಪಿದ್ದಾರೆ. 

ಕಳೆದ ಎರಡು ವರ್ಷಗಳ ಹಿಂದೆ ಜೈಲಿನಿಂದ ಎಸ್ಕೇಪ್ ಅಗಲು ಪ್ರಯತ್ನಿಸಿ  ಜೈಲಿನ ರಕ್ಷಣಾ ಗೋಡೆ ಹಾರಿ ಸೊಂಟ ಮುರಿದುಕೊಂಡಿದ್ದ.  ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶಂಕರನಿಗೆ ಪ್ರತ್ಯೇಕ ಸೆಲ್ ನೀಡಲಾಗಿತ್ತು.  ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಕುಖ್ಯಾತಿಗಳಿಸಿದ್ದ ಜಯಶಂಕರ್ 19 ಕ್ಕೂ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ. 

ತಮಿಳುನಾಡಿನ ಸೇಲಂ ಮೂಲದವನಾದ ಸೈಕೋ ಜಯಶಂಕರ್ ಕೊಯಮತ್ತೂರಿನಲ್ಲಿ ಲಾರಿಚಾಲಕನಾಗಿ ಕೆಲಸ ಮಾಡುತ್ತಿದ್ದ.  ತಮಿಳುನಾಡಿನಲ್ಲಿ 11 ಮಹಿಳೆಯರು , ಕರ್ನಾಟಕದ ಲ್ಲಿ 4 ಮಹಿಳೆಯರ ಅತ್ಯಾಚಾರ, ಕೊಲೆ,  ಪೊಲೀಸ್ ಪೇದೆಯ ಪತ್ನಿಯನ್ನೇ ಅತ್ಯಾಚಾರ ಎಸಗಿದ್ದ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

5 ಸಾವಿರ ಕೊಡ್ತೀನಿ ರೂಮ್‌ಗೆ ಬಾ ಅಂದ್ರು? ಬ್ರಹ್ಮಾನಂದ ಗುರೂಜಿಯ ವಿಡಿಯೋ ವೈರಲ್
ಬೆಂಗಳೂರಿಗಾಗಿ ಶ್ರಮಿಸಿದೆವು ಆದ್ರೂ ತಮ್ಮನನ್ನು ಸೋಲಿಸಿದ್ರಿ: ಅಪಾರ್ಟ್‌ಮೆಂಟ್‌ ನಿವಾಸಿಗಳ ವಿರುದ್ಧ ಕಿಡಿಯಾದ ಡಿಕೆಶಿ