ಕಾರ್ಮಿಕರ ಭವಿಷ್ಯ ನಿಧಿ ವೆಬ್'ಸೈಟ್ ಹ್ಯಾಕ್

First Published May 3, 2018, 12:02 AM IST
Highlights

2017ರ ಏಪ್ರಿಲ್‌ನಿಂದ 2018ರ ಜನವರಿ ವರೆಗೆ ಸರ್ಕಾರಿ ವಲಯದ  114  ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಾಗಿರುವುದಾಗಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಕೆಲ ತಿಂಗಳ ಹಿಂದೆ ಲೋಕಸಭೆಗೆ ತಿಳಿಸಿತ್ತು.

ನವದೆಹಲಿ(ಮೇ.02): ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ವೆಬ್‌ಸೈಟ್‌ ಹ್ಯಾಕ್ ಆಗಿದ್ದು 2.7 ಕೋಟಿ ಸದಸ್ಯರ ಮಾಹಿತಿ ಕಳವಾಗಿರುವ ಆತಂಕ ಎದುರಾಗಿದೆ.
ವೆಬ್'ಸೈಟ್ನಲ್ಲಿರುವ ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯ ಆಧಾರ್ ಜೋಡಣೆಯ  ವೆಬ್‌ಪೋರ್ಟಲ್‌ಗೆ ಕನ್ನ ಹಾಕಲಾಗಿದೆ.  ಈ ಕುರಿತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಇಪಿಎಫ್‌ಒ ಆಯುಕ್ತರು ಪತ್ರ ಬರೆದಿದ್ದು ಪೋರ್ಟಲ್‌ನ ದೋಷಗಳನ್ನು ಸರಿಪಡಿಸಲು ತಾಂತ್ರಿಕ ತಂಡದ ನೆರವು ಕೋರಿದ್ದಾರೆ. 
2017ರ ಏಪ್ರಿಲ್‌ನಿಂದ 2018ರ ಜನವರಿ ವರೆಗೆ ಸರ್ಕಾರಿ ವಲಯದ  114  ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಾಗಿರುವುದಾಗಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಕೆಲ ತಿಂಗಳ ಹಿಂದೆ ಲೋಕಸಭೆಗೆ ತಿಳಿಸಿತ್ತು.

click me!