ಬೆಂಗಳೂರಿಗರೇ ಎಚ್ಚರ! ಇಂದು ನಮ್ಮ ಮೆಟ್ರೋ ಸಂಚಾರ ಸಂಪೂರ್ಣ ಸ್ಥಗಿತ!

Published : Jul 07, 2017, 08:26 AM ISTUpdated : Apr 11, 2018, 12:36 PM IST
ಬೆಂಗಳೂರಿಗರೇ ಎಚ್ಚರ! ಇಂದು ನಮ್ಮ ಮೆಟ್ರೋ ಸಂಚಾರ ಸಂಪೂರ್ಣ ಸ್ಥಗಿತ!

ಸಾರಾಂಶ

ನಿನ್ನೆ ಬೆಳಗ್ಗೆ ಸಿಟಿ ಸಿವಿಲ್​ ಕೋರ್ಟ್​​​ನ ಮೆಟ್ರೋ ಪ್ರವೇಶ ದ್ವಾರದಲ್ಲಿ ನಿಂತಿದ್ದ ಎಸ್ಕಿಲೇಟರ್​ ಮೇಲೆ ಹೋಗಬೇಡಿ ಎಂದಿದ್ದಕ್ಕೆ  ಮೆಟ್ರೋ ಸಿಬ್ಬಂದಿಗಳು ಹಾಗೂ ಪೊಲೀಸರ ನಡುವೆ ಜಗಳವೇರ್ಪಟ್ಟಿತ್ತು.

ಬೆಂಗಳೂರು(ಜು.07): ನಿನ್ನೆ ಬೆಳಗ್ಗೆ ಸಿಟಿ ಸಿವಿಲ್​ ಕೋರ್ಟ್​​​ನ ಮೆಟ್ರೋ ಪ್ರವೇಶ ದ್ವಾರದಲ್ಲಿ ನಿಂತಿದ್ದ ಎಸ್ಕಿಲೇಟರ್​ ಮೇಲೆ ಹೋಗಬೇಡಿ ಎಂದಿದ್ದಕ್ಕೆ  ಮೆಟ್ರೋ ಸಿಬ್ಬಂದಿಗಳು ಹಾಗೂ ಪೊಲೀಸರ ನಡುವೆ ಜಗಳವೇರ್ಪಟ್ಟಿತ್ತು.

ಈ ಮಾರಾಮಾರಿಯಲ್ಲಿ ಭಾಗಿಯಾಗಿದ್ದ ಆರು ಜನ ಮೆಟ್ರೋ ಸಿಬ್ಬಂದಿಯನ್ನ ಆಲಸೂರು ಗೇಟ್ ಪೊಲೀಸಲು ಬಂದಿಸಿದ್ದಾರೆ. ಇದನ್ನ ವಿರೋದಿಸಿ ಬಿಎಂಆರ್‌ಡಿಸಿ ಸಿಬ್ಬಂದಿಗಳು ಬೈಯಪ್ಪನಹಳ್ಳಿ ಮೆಟ್ರೋ ಡಿಪೋದಲ್ಲಿ ಅಹೋರಾತ್ರಿ ಧರಣಿ ಮಾಡಿದ್ದು, ಬಂಧಿಸಿರುವ ಸಿಬ್ಬಂದಿಗಳನ್ನ ಬಿಡುಗಡೆ ಮಾಡುವವರೆಗೆ ನಾವು ಯಾರು ಕೆಲಸ ಮಾಡಲ್ಲ ಅಂತಾ ಪಟ್ಟುಹಿಡಿದು ಕುಳಿತಿದ್ದಾರೆ. ಆರೆ ಮೆಟ್ರೋ ಎಂಡಿ ಪ್ರತಿಭಟನೆ ಕೈಬಿಡುವಂತೆ ಸಿಬ್ಬಂದಿಗಳ ಮನವೊಲಿಸಲು ಪ್ರಯತ್ನಿಸಿದ್ದಾರೆ

ಸುಮಾರು 5೦೦ಕ್ಕೂ ಹೆಚ್ಚು ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಇದೇ ಮೊಟ್ಟ ಮೊದಲ ಬಾರಿಗೆ ಪ್ರತಿಭಟನೆಯಿಂದ ಮೆಟ್ರೋ ಸಂಚಾರ ಸಂಪೂರ್ಣವಾಗಿ ಸ್ಥಬ್ದವಾಗಿದೆ.

ಇನ್ನು ಮೆಟ್ರೋ ಸಿಬ್ಬಂದಿಗಳು ಯಾವುದೇ ​ಹೇಳಿಕೆ ನೀಡದೆ ಏಕಾಏಕಿ ಸಂಚಾರ ಸ್ಥಗಿತಗೊಳಿಸಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಳಂದ ಮತಚೋರಿ ಆರೋಪ ರಾಜಕೀಯ ಪ್ರೇರಿತ: ಎಸ್‌ಐಟಿ ಕ್ರಮದ ವಿರುದ್ಧ ಸುಭಾಷ್ ಗುತ್ತೇದಾರ್ ಕಿಡಿ
ಪಶ್ಚಿಮ ಬಂಗಾಳದಲ್ಲಿ 1 ಕೋಟಿ ನಕಲಿ ಮತದಾರರಿಗೆ ಕೊಕ್ ಸಾಧ್ಯತೆ