
ಬೆಂಗಳೂರು: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿರುದ್ಧ ಕರಪತ್ರಗಳನ್ನು ಮುದ್ರಿಸಿ ಬುಧವಾರ ವಿಧಾನಸೌಧದ ಶೌಚಾಲಯಗಳಲ್ಲಿ ಹಾಕಿ ಪ್ರತಿಭಟಿಸಲಾಗಿದೆ.
ಸಚಿವರು ಶಿವಮೊಗ್ಗದ ಸಾಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಬ್ರಾಹ್ಮಣರೂ ಮಾಂಸ ತಿನ್ನುತ್ತಿದ್ದರು’ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು ಎನ್ನಲಾಗಿತ್ತು.
ಈ ಹಿನ್ನೆಲೆಯಲ್ಲಿ ಕೆಲವು ಅಪರಿಚಿತರು ವಿಧಾನಸೌಧದ ಎಲ್ಲಾ ಮಹಡಿಗಳ ಶೌಚಾಲಯದಲ್ಲೂ ಸಚಿವರ ವಿರುದ್ಧದ ಕರಪತ್ರಗಳನ್ನು ಹಾಕಿ ಹೋಗಿದ್ದಾರೆ.
ಆ ಕರಪತ್ರಗಳಲ್ಲಿ ಸಚಿವ ಕಾಗೋಡು ಅವರು ಚಿತ್ರ ಪ್ರಕಟಿಸಿದ್ದಾರೆ. ಅದರ ಮೇಲೆ ‘ಬ್ರಾಹ್ಮಣರನ್ನು ನಿಂದಿಸಿದ್ದಕ್ಕೆ’ ಎಂದು ಬರೆಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.