ಪೌರತ್ವ ಬಿಲ್‌ಗೆ ವಿರೋಧ: ಸಾಹಿತಿ ಸೇರಿ 3 ಜನರ ಮೇಲೆ ರಾಜದ್ರೋಹ

By Web DeskFirst Published Jan 11, 2019, 11:40 AM IST
Highlights

ಪೌರತ್ವ ತಿದ್ದುಪಡಿ ಬಿಲ್‌ಗೆ ವಿರೋಧ ವ್ಯಕ್ತಪಡಿಸಿದ ಸಾಹಿತಿ ಹಿರೇನ್ ಗೋಹ್ಯಾನ್ ಸೇರಿ ಮೂವರ ಮೇಲೆ ರಾಜದ್ರೋಹ ಕೇಸ್

ಗುವಾಹಟಿ[ಜ.11]: ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೂ ಬುಧವಾರ ಲೋಕಸಭೆಯಲ್ಲಿ ಅಂಗೀಕಾರ ಪಡೆದ ವಿವಾದಿತ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿ ಅಸ್ಸಾಂ ಸಾಹಿತಿ ಹಿರೇನ್‌ ಗೊಹೇನ್‌, ಆರ್‌ಟಿಐ ಕಾರ್ಯಕರ್ತ ಅಖಿಲ್‌ ಗೊಗೋಯ್‌ ಹಾಗೂ ಹಿರಿಯ ಪತ್ರಕರ್ತರ ವಿರುದ್ಧ ರಾಷ್ಟ್ರದ್ರೋಹ ಕೇಸ್‌ ದಾಖಲಾಗಿದೆ.

ಮುಸ್ಲಿಮೇತರರಿಗೆ ಪೌರತ್ವ: ಲೋಕಸಭೆಯಲ್ಲಿ ಅಂಗೀಕಾರ ಸಿಗ್ತಪ್ಪ!

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ರಾಜ್ಯಾದ್ಯಂತ ಕಳೆದ ಮೂರು ದಿನಗಳಿಂದ ಹೋರಾಟ ತೀವ್ರಗೊಂಡಿತ್ತು. ಈ ವೇಳೆ ನಗರದಲ್ಲಿ ನಿಷೇಧಾಜ್ಞೆ ಆದೇಶ ಜಾರಿಯಲ್ಲಿದ್ದರೂ, ಈ ಮೂವರು ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಹೇಳಿಕೆ ನೀಡಿದ್ದರು.

ಪೌರತ್ವ ಕಾಯ್ದೆ ಅಂಗೀಕಾರ ಮಾಡದಿದ್ದಲ್ಲಿ 5 ವರ್ಷದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರು

ಈ ಹಿನ್ನೆಲೆ ಸ್ವಯಂಪ್ರೇರಿತವಾಗಿ ರಾಜದ್ರೋಹದ ಕೇಸ್‌ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

click me!