ಡಿಕೆಶಿ ಮೇಲಿನ ಐಟಿ ದಾಳಿಯಿಂದ ಸಿಎಂ ಸಿದ್ದು ಬಣಕ್ಕೆ ಏನು ಲಾಭ-ನಷ್ಟ?

Published : Aug 03, 2017, 02:32 PM ISTUpdated : Apr 11, 2018, 01:02 PM IST
ಡಿಕೆಶಿ ಮೇಲಿನ ಐಟಿ ದಾಳಿಯಿಂದ ಸಿಎಂ ಸಿದ್ದು ಬಣಕ್ಕೆ ಏನು ಲಾಭ-ನಷ್ಟ?

ಸಾರಾಂಶ

ಬೆಂಗಳೂರು(ಆ.03): ಕರ್ನಾಟಕದಲ್ಲಿ ತೆರಿಗೆ ಇಲಾಖೆ ದಾಳಿ ಹೊಸತೇನಲ್ಲ. ಆದರೆ, ಇದೊಂದು ದಾಳಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಅಂಥದೊಂದು ಶಿಕಾರಿಯನ್ನು ಆದಾಯ ತೆರಿಗೆ ಇಲಾಖೆ ಬು‘ವಾರ ಕರ್ನಾಟಕದಲ್ಲಿ ಮಾಡಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಅತ್ಯಂತ ಪ್ರಭಾವಿ ಮಂತ್ರಿಗಳಲ್ಲಿ ಅಗ್ರಪಂಕ್ತಿಯಲ್ಲಿರುವ ಇಂ‘ನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರ ಮೇಲೆ ಐಟಿ ಬೇಟೆ ನಡೆದಿದೆ. ಕರ್ನಾಟಕವಷ್ಟೇ ಅಲ್ಲ, ಹೊರರಾಜ್ಯಗಳಲ್ಲೂ ಏಕಕಾಲಕ್ಕೆ ನಡೆದ ಈ ದಾಳಿ ಇಡೀ ದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. 64 ಕಡೆ ದಾಳಿ ನಡೆದಿದ್ದು, ಕೋಟಿಗಟ್ಟಲೆ ಮೌಲ್ಯದ ನಗ-ನಗದು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ಸೂಟ್‌ಕೇಸ್‌ಗಟ್ಟಲೆ ಆಸ್ತಿ ದಾಖಲೆ ಪತ್ರಗಳನ್ನೂ ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಐಟಿ ದಾಳಿ ನಡೆಸಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದಲ್ಲೂ, ದೆಹಲಿ ಮಟ್ಟದಲ್ಲೂ ಕಾಂಗ್ರೆಸ್ ಮುಗಿಬಿದ್ದಿದೆ. ಇದು ರಾಜಕೀಯ ಸೇಡಿನ ಕ್ರಮ, ಷಡ್ಯಂತ್ರ. ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಆಶ್ರಯ ನೀಡಿದ್ದಕ್ಕೆ ಪ್ರತೀಕಾರ ಎಂದು ಸಂಸತ್ತಲ್ಲೇ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಗುಜರಾತ್ ಶಾಸಕರಿಗೂ ದಾಳಿಗೂ ಸಂಬಂಧವಿಲ್ಲ. ಇದೊಂದು ಆರ್ಥಿಕ ಅಪರಾ‘ದ ಮೇಲೆ ನಡೆದ ದಾಳಿ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ದಾಳಿ ರಾಜಕೀಯ ಮಹತ್ವವನ್ನೂ ಪಡೆದಿದೆ. ಆ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರ ಇಂತಿದೆ.

-ಶಿವಕುಮಾರ್ ಐಟಿ ಸಂಕಷ್ಟಕ್ಕೆ ಸಿಲುಕಿ ಕಳಂಕಿತರಾದರೆ ಪಕ್ಷದಲ್ಲಿ ತಮಗೆ ಸವಾಲಾಗುವ ಸಾಧ್ಯತೆಯಿದ್ದ ನಾಯಕ ದುರ್ಬಲಗೊಂಡಂತಾಗಬಹುದು

-ಐಟಿ ದಾಳಿಯಿಂದಾಗಿ ಶಿವಕುಮಾರ್ ಆರ್ಥಿಕ ಸಂಪನ್ಮೂಲಕ್ಕೆ ಕಡಿ ವಾಣಬಿದ್ದರೆ ಹೈಕಮಾಂಡ್‌ಗೆ ಸಂಪ ನ್ಮೂಲ ಒದಗಿಸುವ ಪರ್ಯಾಯ ಮೂಲಕ್ಕೆ ಕುಂದು ಬರಬಹುದು

-ಮುಂದಿನ ಚುನಾವಣೆಯಲ್ಲಿ ಹೆಚ್ಚು ಹಣ ವೆಚ್ಚ ಮಾಡುವ ಸಾಧ್ಯತೆಯಿದ್ದ ಒಬ್ಬ ನಾಯಕನ ಬಲ ಕಳೆದುಕೊಂಡಂತಾಗುತ್ತದೆ

-ಇದರಿಂದ ಸಂಪನ್ಮೂಲಕ್ಕೆ ಇಡೀ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣವನ್ನೇ ನೆಚ್ಚಿಕೊಳ್ಳುವಂತಾಗುತ್ತದೆ

-ಈ ಆದಾಯ ತೆರಿಗೆ ಇಲಾಖೆ ದಾಳಿಯನ್ನೇ ಬಳಸಿಕೊಂಡು ಪಕ್ಷದ ಹೈಕಮಾಂಡ್‌ಗೆ ಶಿವಕುಮಾರ್ ಹತ್ತಿರವಾಗಬಹುದು

-ಹೀಗಾದಲ್ಲಿ ಕಾಂಗ್ರೆಸ್ ಹೈಕಮಾಂಡ್, ಪಕ್ಷದ ವಿಷಯಗಳಲ್ಲಿ ಶಿವಕುಮಾರ್‌ಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬಹುದು

-ಶಿವಕುಮಾರ್ ಬಯಕೆಯ ಖಾತೆ, ಪಕ್ಷದಲ್ಲಿ ಸ್ಥಾನವನ್ನು ಅನಿವಾರ್ಯವಾಗಿ ನೀಡಬೇಕಾಗಿ ಬರಬಹುದು

-ಮುಂದಿನ ಚುನಾವಣೆಗೆ ಟಿಕೆಟ್ ಹಂಚಿಕೆ ವೇಳೆ ಶಿವಕುಮಾರ್ ಮಾತಿಗೆ ಹೆಚ್ಚಿನ ಪ್ರಾಧಾನ್ಯತೆ ದೊರೆಯಬಹುದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bhatkal: ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ
'ನಾಯಿ-ನರಿಗಳು ಕರವೇ ಬಗ್ಗೆ ಮಾತಾಡಿದ್ರೆ ಏನ್‌ ಹೇಳೋಕೆ ಆಗುತ್ತೆ..' ಸುದೀಪ್‌ ಭೇಟಿ ಕುರಿತ ವಿವಾದದ ಬಗ್ಗೆ ನಾರಾಯಣ ಗೌಡ ತಿರುಗೇಟು