ಗೋಮಾಂಸ ಭಕ್ಷಿಸಿ ಸಂವಾದ ಉದ್ಘಾಟಿಸಿದ ಭಗವಾನ್!

Published : Jun 26, 2017, 11:20 AM ISTUpdated : Apr 11, 2018, 01:13 PM IST
ಗೋಮಾಂಸ ಭಕ್ಷಿಸಿ ಸಂವಾದ ಉದ್ಘಾಟಿಸಿದ ಭಗವಾನ್!

ಸಾರಾಂಶ

ಕೇಂದ್ರ ಸರ್ಕಾರ ಜಾರಿ ತಂದಿರುವ ಜಾನುವಾರುಗಳ ಮಾರಾಟ ನಿರ್ಬಂಧ ನಿಯಮಾವಳಿ ವಿರೋಧಿಸಿ ಆಯೋಜಿಸಿದ್ದ ‘ಆಹಾರದ ಹಕ್ಕು- ವ್ಯಕ್ತಿ ಸ್ವಾತಂತ್ರ್ಯ' ಸಂವಾದ ಕಾರ್ಯಕ್ರಮವನ್ನು ಗೋಮಾಂಸ, ಚಿಕನ್‌ ಕಬಾಬ್‌ ಸೇವನೆ ಮಾಡುವ ಮೂಲಕ ವಿಚಾರವಾದಿ ಪ್ರೊ. ಕೆ.ಎಸ್‌. ಭಗವಾನ್‌ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋವು ಪವಿತ್ರವಾದ್ದರಿಂದಲೇ ಅದನ್ನು ಭಕ್ಷಣೆ ಮಾಡಬೇಕು ಎಂದರು. 

ಬೆಂಗಳೂರು(ಜೂ.26): ಕೇಂದ್ರ ಸರ್ಕಾರ ಜಾರಿ ತಂದಿರುವ ಜಾನುವಾರುಗಳ ಮಾರಾಟ ನಿರ್ಬಂಧ ನಿಯಮಾವಳಿ ವಿರೋಧಿಸಿ ಆಯೋಜಿಸಿದ್ದ ‘ಆಹಾರದ ಹಕ್ಕು- ವ್ಯಕ್ತಿ ಸ್ವಾತಂತ್ರ್ಯ' ಸಂವಾದ ಕಾರ್ಯಕ್ರಮವನ್ನು ಗೋಮಾಂಸ, ಚಿಕನ್‌ ಕಬಾಬ್‌ ಸೇವನೆ ಮಾಡುವ ಮೂಲಕ ವಿಚಾರವಾದಿ ಪ್ರೊ. ಕೆ.ಎಸ್‌. ಭಗವಾನ್‌ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋವು ಪವಿತ್ರವಾದ್ದರಿಂದಲೇ ಅದನ್ನು ಭಕ್ಷಣೆ ಮಾಡಬೇಕು ಎಂದರು. 

ಗೋವು ದೇಹಕ್ಕೆ ಅತ್ಯುತ್ತಮ ಆಹಾರವೆಂದು ವೈದಿಕರು ಹಿಂದೆಯೇ ಹೇಳಿದ್ದಾರೆ. ಅಂಬೇಡ್ಕರ್‌ ರಚಿಸಿರುವ 7ನೇ ಸಂಪುಟದ 324, 327, 328ನೇ ಪುಟಗಳಲ್ಲಿ ಗೋವು ಮಾಂಸದ ಬಗ್ಗೆ ಬರೆದಿದ್ದಾರೆ. ಅಸಸ್ತಂಭ ಸೂತ್ರದಲ್ಲಿ ‘ಹಸು ಮತ್ತು ಗೂಳಿ ಪವಿತ್ರವಾದದು. ಅದರ ಮಾಂಸವನ್ನು ಭಕ್ಷಿಸಿದರೆ ದೇಹಕ್ಕೆ ಒಳ್ಳೆಯದು. ಶಕ್ತಿ, ಉತ್ಸಾಹ ಹೆಚ್ಚಾಗುತ್ತದೆ' ಎಂದಿದ್ದಾರೆ. ಶತಪಥ ಬ್ರಾಹ್ಮಣ ದಲ್ಲೂ ಇದೇ ಮಾತುಗಳು ಉಲ್ಲೇಖವಾಗಿವೆ. ಗೋಮಾಂಸವನ್ನು ಹೆಚ್ಚಾಗಿ ತಿನ್ನುತ್ತಿದ್ದ ಬ್ರಾಹ್ಮಣರು, ಬೌದ್ಧ ಧಮ್ಮ ಉದಯವಾದಾಗ ಅವರ ಮುಂದೆ ತಾವು ಕೀಳಾಗುತ್ತೇವೆ ಎಂಬ ಕಾರಣಕ್ಕೆ ಗೋ ಮಾಂಸ ಸೇವನೆ ನಿಲ್ಲಿಸಿದರು ಎಂ ದರು. ಉಪಹಾರವಾಗಿ ಕೇಸರಿಬಾತ್‌, ಉಪ್ಪಿಟ್ಟು, ಪೊಂಗಲ್‌, ಗೋಮಾ ಂಸ, ಚಿಕನ್‌ ಕಬಾಬ್‌; ಊಟವಾಗಿ ಬೀಫ್‌ ಬಿರಿಯಾನಿ, ಕೇಸರಿ ಬಾತ್‌ ನೀಡಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನ್ನನ್ನು ಯಾರೂ ಅಲುಗಾಡಿಸಲು ಆಗೋದಿಲ್ಲ : ಸಿಎಂ ಖಡಕ್‌ ನುಡಿ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!