
ಬೆಂಗಳೂರು : ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ನಿರ್ದೇಶಕ ಪ್ರೇಮ್ ಹಾಗೂ ನಿರ್ಮಾಪಕ ಕನಕಪುರ ಶ್ರೀನಿವಾಸ್ ನಡುವೆ ಗುರುವಾರ ಜಟಾಪಟಿ ನಡೆದಿದೆ. ಈ ಸಂದರ್ಭದಲ್ಲಿ ಶ್ರೀನಿವಾಸ್ ಅವರನ್ನು ಮನವೊಲಿಸಲು ಆಗದೆ, ಅತ್ತ ಪ್ರೇಮ್ ತಮ್ಮನ್ನು ತೇಜೋವಧೆ ಮಾಡಿದ್ದಾರೆಂದು ಪಟ್ಟು ಸಡಿಲಿಸದ ಕಾರಣ ಇಬ್ಬರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.
ಬೆಂಗಳೂರಿನ ಚಂದ್ರಲೇಔಟ್‌ನಲ್ಲಿರುವ ಪ್ರೇಮ್ ಮನೆ ಮುಂದೆ ಗುರುವಾರ ಸಂಜೆ ಇಷ್ಟೆಲ್ಲ ಗಲಾಟೆ ನಡೆದಿದೆ. ಪುನೀತ್ ರಾಜ್‌ಕುಮಾರ್ ನಟನೆಯ ‘ರಾಜ್’ ಸಿನಿಮಾ ನಂತರ ಕನಕಪುರ ಶ್ರೀನಿವಾಸ್ ಅವರಿಗೆ ಸಿನಿಮಾ ಮಾಡಿಕೊಡುವುದಕ್ಕಾಗಿ .9 ಲಕ್ಷವನ್ನು ಶ್ರೀನಿವಾಸ್ ಅವರಿಂದ ಪ್ರೇಮ್ ಮುಂಗಡವಾಗಿ ಪಡೆದಿದ್ದರು. ಈ ಪೈಕಿ .4 ಲಕ್ಷ ನಗದು ರೂಪದಲ್ಲಿ, .5 ಲಕ್ಷಗಳ ಚೆಕ್ ನೀಡಲಾಗಿತ್ತು.
ಆದರೆ, ತಮಗೆ ಪ್ರೇಮ್ ಸಿನಿಮಾನೂ ಮಾಡಿಕೊಟ್ಟಿಲ್ಲ, ಮುಂಗಡ ಹಣವೂ ವಾಪಸ್ಸು ನೀಡಿಲ್ಲ ಎಂದು ಕನಕಪುರ ಶ್ರೀನಿವಾಸ್ ಅವರು ಅರೋಪಿಸಿದ್ದಾರೆ. ಹೀಗಾಗಿ ಹಣ ಕೊಡಲೇಬೇಕೆಂದು ಪ್ರೇಮ್ ಮನೆ ಮುಂದೆ ಬಂದಾಗ ಇಬ್ಬರ ನಡುವೆ ಜಟಾಪಟಿ ನಡೆದಿದೆ ಎನ್ನಲಾಗಿದೆ.
ಶ್ರೀನಿವಾಸ್ ಬಳಿ ಅಡ್ವಾನ್ಸ್ ತೆಗೆದುಕೊಂಡಿದ್ದು ನಿಜ. ಆದರೆ, ಒಂದೂವರೆ ವರ್ಷ 12 ಜನ ತಂಡ ಕಟ್ಟಿಕೊಂಡು ಸಿನಿಮಾಗಾಗಿ ಕೆಲಸ ಮಾಡಿದ್ದೇವೆ. ಶ್ರೀನಿವಾಸ್ ಅವರು ಸಿನಿಮಾ ಮಾಡೋಕೆ ಮುಂದೆ ಬರಲಿಲ್ಲ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ನನ್ನ ತೇಜೋವಧೆಯಾಗಿದೆ ಎಂದು ದೂರಿದ್ದಾರೆ. ನನ್ನಿಂದ ತಪ್ಪಾಗಿದ್ದರೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡಲಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.