ಆಧಾರ್ ಕಾರ್ಡ್ ಫೋಟೋ ಅಪ್ಡೇಟ್ ಮಾಡೋದು ಹೇಗೆ?

By Web DeskFirst Published Apr 29, 2019, 3:48 PM IST
Highlights

ಆಧಾರ್ ಅಪ್ಡೇಟ್ ಮಾಡುವ ವಿಧಾನ ತುಂಬ ಸರಳ| ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಭಾವಚಿತ್ರ ಬದಲಿಸಲು ಇದೆ ಅವಕಾಶ| ಹೊಸ ಭಾವಚಿತ್ರವುಳ್ಳ ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಅರ್ಜಿ ಸಲ್ಲಿಸಿದ 90 ದಿನಗಳೊಳಗಾಗಿ ಹೊಸ ಆಧಾರ್ ಕಾರ್ಡ್|

ಬೆಂಗಳೂರು(ಏ.29): ಆಧಾರ್ ಕಾರ್ಡ್ ಪ್ರಮುಖ ಸರ್ಕಾರದ ಗುರುತಿನ ಪುರಾವೆಗಳಲ್ಲಿ ಒಂದಾಗಿದೆ. ಇದು ವ್ಯಕ್ತಿಯ ಬಯೋಮೆಟ್ರಿಕ್ ಡೇಟಾ ಒಳಗೊಂಡಿದ್ದು, ಸರ್ಕಾರಿ ಸೌಲಭ್ಯ ಪಡೆಯಲು ಅತ್ಯಂತ ಮಹತ್ವದ ಗುರುತಿನ ಚೀಟಿಯಾಗಿದೆ.

ಅದರಂತೆ ಆಧಾರ್ ಕಾರ್ಡ್‌ ನಲ್ಲಿ ವ್ಯಕ್ತಿ ತನ್ನ ವಿವರಗಳನ್ನು ನವೀಕರಿಸಲು ಅವಕಾಶ ಕಲ್ಪಿಸಲಾಗಿದ್ದು, ಪ್ರಮುಖವಾಗಿ ವ್ಯಕ್ತಿ ಈ ಹಿಂದೆ ನೀಡಿದ್ದ ಫೋಟೋ ಕೂಡ ಬದಲಾಯಿಸಬಹುದಾಗಿದೆ.

ಆಧಾರ್ ನ ಸ್ವಯಂ ಸೇವಾ ಅಪ್ಡೇಟ್ ಪೋರ್ಟಲ್ (ಎಸ್‌ಎಸ್‌ಯುಪಿ) ಮೂಲಕ ಅಥವಾ ಆಧಾರ್ ಸೆಂಟರ್‌ಗೆ ಭೇಟಿ ನೀಡುವ ಮೂಲಕ ವ್ಯಕ್ತಿ ತನ್ನ ಆಧಾರ್ ಕಾರ್ಡ್‌ ಮಾಹಿತಿಯನ್ನು ಬದಲಾಯಿಸಬಹುದಾಗಿದೆ.

ಆಧಾರ್ ಮಾಹಿತಿ ಅಪ್ಡೇಟ್ ಮಾಡುವುದು ಹೇಗೆ?

ನಿಮ್ಮ ಹತ್ತಿರದ ಆಧಾರ್ ಸೇವಾ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ.

ಯುಐಎಡಿಐ ವೆಬ್‌ಸೈಟ್‌ನಿಂದ ಆಧಾರ್ ಎನ್ರೋಲ್ ಮೆಂಟ್ ಫಾರ್ಮ್ ಡೌನ್ಲೋಡ್ ಮಾಡಿ.

ನಿಮ್ಮ ಬಯೋಮೆಟ್ರಿಕ್ ಡಿಟೇಲ್ಸ್ ನೀಡಿ ಫಾರ್ಮ್ ಸಬ್ಮಿಟ್ ಮಾಡಿ.

ಆಧಾರ್ ಸೇವಾ ಮಾಹಿತಿ ಕೇಂದ್ರದ ಸಿಬ್ಬಂದಿ ನಿಮ್ಮ ಫೋಟೋ ಕ್ಲಿಕ್ಕಿಸುತ್ತಾರೆ.

ಫೋಟೋ ಅಪ್ಡೇಟ್ ಮಾಡಲು 25 ರೂ. ನೀಡಬೇಕು(GST ಅನ್ವಯ).

ನಿಮಗೆ ಫೋಟೋ ಅಪ್ಡೇಟ್ ಕುರಿತು ಸ್ವೀಕೃತಿ ಪತ್ರ ದೊರೆಯುತ್ತದೆ.

ಇದರೊಂದಿಗೆ ನಿಮಗೆ URN ನಂಬರ್ ದೊರೆಯಲಿದ್ದು, ನೀವು ಆನ್‌ಲೈನ್‌ನಲ್ಲಿ ಈ ಕುರಿತು ಮಾಹಿತಿ ಪಡೆಯಬಹುದು.

ಹೊಸ ಆಧಾರ್ ಕಾರ್ಡ್ ಪಡೆಯುವ ವಿಧಾನ

ಹೊಸ ಅಪ್ಡೇಟ್ ಆದ ಆಧಾರ್ ಕಾರ್ಡ್‌ನ್ನು ನೀವು ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ.

ಯುಐಎಡಿಐ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹೊಸ ಭಾವಚಿತ್ರವುಳ್ಳ ಆಧಾರ್ ಕಾರ್ಡ್ ಪಡೆಯಬಹುದು.

ಸೂಚನೆ: ನೀವು ಹೊಸ ಭಾವಚಿತ್ರವುಳ್ಳ ಆಧಾರ್ ಪಡೆಯಲು ಯಾವುದೇ ವೈಯಕ್ತಿಕ ವಿವರ ಸಲ್ಲಿಸಬೇಕಿಲ್ಲ. ಹೊಸ ಭಾವಚಿತ್ರವುಳ್ಳ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ 90 ದಿನಗಳೊಳಗಾಗಿ ನಿಮಗೆ ಹೊಸ ಆಧಾರ್ ಕಾರ್ಡ್ ದೊರೆಯುತ್ತದೆ.

click me!