
ನವದೆಹಲಿ[ನ.23]: ಪಂಜಾಬ್‌ನ ಅಮೃತಸರದಲ್ಲಿ ಏರ್ಪಡಿಸಲಾಗಿದ್ದ ದಸರಾ ಕಾರ್ಯಕ್ರಮದ ವೇಳೆ ರಾವಣನ ದಹನ ವೀಕ್ಷಿಸುತ್ತಿದ್ದ 60 ಮಂದಿ ಬಲಿಪಡೆದ ರೈಲು ಅಪಘಾತದ ಸಂಬಂಧ ರೈಲ್ವೆ ಸುರಕ್ಷತಾ ಆಯೋಗ(ಸಿಸಿಆರ್) ವರದಿ ಸಲ್ಲಿಸಿದೆ. ರೈಲ್ವೆ ಹಳಿಗಳ ಮೇಲೆಯೇ ನಿಂತು ರಾವಣನ ದಹನ ವೀಕ್ಷಿಸುತ್ತಿದ್ದ ಜನರ ಅಜಾಗರೂಕತೆಯೇ ಈ ದುರ್ಘಟನೆಗೆ ಕಾರಣವಾಗಿದ್ದು, ಇದರಲ್ಲಿ ರೈಲ್ವೆ ಇಲಾಖೆಯದ್ದು ಯಾವುದೇ ತಪ್ಪು ಇಲ್ಲ ಎಂದು ತಿಳಿಸಿದೆ. ಈ ಮೂಲಕ ರೈಲ್ವೆ ಇಲಾಖೆಗೆ ಆಯೋಗ ಕ್ಲೀನ್ ಚಿಟ್ ನೀಡಿದೆ.
‘ಜನರು ದಸರಾ ಉತ್ಸವದ ಸಂಭ್ರಮಾಚರಣೆಯಲ್ಲಿದ್ದಾಗ ದುರಾದೃಷ್ಟಾವಶತ್ ರೈಲ್ವೆ ಅಪಘಾತದ ಸಂಭವಿಸಿದೆ. ಆದರೆ, ಇದರಲ್ಲಿ ರೈಲ್ವೆಯದ್ದು ಯಾವುದೇ ಪಾತ್ರವಿಲ್ಲ. ಲಭ್ಯವಾದ ಸಾಕ್ಷ್ಯಾಧಾರಗಳನ್ನು ವಿಚಾರ ಮಾಡಿದಾಗ, ಸಾರ್ವಜನಿಕರ ಅಜಾಗರೂಕತೆಯೇ ದುರಂತಕ್ಕೆ ಕಾರಣ. ಅಲ್ಲದೆ, ಈ ಭಾಗದಲ್ಲಿ ಎಸ್ ಆಕಾರದ ಡೊಂಕಾದ ಹಳಿಯಿರುವುದರಿಂದ ವ್ಯಕ್ತಿಯೊಬ್ಬರ 20 ಮೀಟರ್ ಹತ್ತಿರ ಆಗಮಿಸುವವರೆಗೂ ರೈಲು ಕಾಣಿಸುತ್ತಿರಲಿಲ್ಲ,’ ಎಂದು ಸಿಸಿಆರ್‌ಎಸ್ ಎಸ್.ಕೆ. ಪಠಾಕ್ ಅವರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಮುಂಬರುವ ದಿನಗಳಲ್ಲಿ ಇಂಥ ದುರಂತಗಳನ್ನು ತಡೆಯುವ ನಿಟ್ಟಿನಲ್ಲಿ ರೈಲ್ವೆ ಹಳಿಗಳ ಪಕ್ಕದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಳ್ಳದಂತೆ ಶಿಫಾರಸು ಮಾಡಿದ್ದಾರೆ. ಅಮೃತಸರದ ಬಳಿಯಿರುವ ಜವುರಾ-ಫತಾಕ್ ರೈಲ್ವೆ ನಿಲ್ದಾಣಗಳ ಮಧ್ಯೆ 2018ರ ಅಕ್ಟೋಬರ್ 19ರಂದು ಸಂಜೆ 6.55ಕ್ಕೆ ಸಂಭವಿಸಿದ ರೈಲು ದುರಂತದಲ್ಲಿ 60 ಮಂದಿ ಸಾವನ್ನಪ್ಪಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ