ಕಾಶ್ಮೀರದಲ್ಲಿ ಬಯಲಾಯ್ತು ಸ್ಫೋಟಕ ಸಂಗತಿ

First Published Jun 24, 2018, 11:35 AM IST
Highlights

ರಾಕ್‌ ಹಾಗೂ ಸಿರಿಯಾದಲ್ಲಿ ರಕ್ತ ಕೋಡಿ ಹರಿಸಿದ್ದ ಕುಖ್ಯಾತ ಉಗ್ರ ಸಂಘಟನೆ ಐಸಿಸ್‌ನ ಜಮ್ಮು-ಕಾಶ್ಮೀರ ಘಟಕದ ಮುಖ್ಯಸ್ಥ ಹತ್ಯೆಯಾದ ಬೆನ್ನಲ್ಲೇ ಸ್ಫೋಟಕ ಸಂಗತಿಯೊಂದು ಬೆಳಕಿಗೆ ಬಂದಿದೆ. 

ನವದೆಹಲಿ: ಇರಾಕ್‌ ಹಾಗೂ ಸಿರಿಯಾದಲ್ಲಿ ರಕ್ತ ಕೋಡಿ ಹರಿಸಿದ್ದ ಕುಖ್ಯಾತ ಉಗ್ರ ಸಂಘಟನೆ ಐಸಿಸ್‌ನ ಜಮ್ಮು-ಕಾಶ್ಮೀರ ಘಟಕದ ಮುಖ್ಯಸ್ಥ ಹತ್ಯೆಯಾದ ಬೆನ್ನಲ್ಲೇ ಸ್ಫೋಟಕ ಸಂಗತಿಯೊಂದು ಬೆಳಕಿಗೆ ಬಂದಿದೆ. ಐಸಿಸ್‌ ಪರ ಒಲವುಳ್ಳ ಮಹಿಳೆಯರ ಗುಂಪೊಂದು ಕಾಶ್ಮೀರದಲ್ಲಿ ಸಕ್ರಿಯವಾಗಿದ್ದು, ಐಸಿಸ್‌ ಉಗ್ರ ಸಂಘಟನೆ ಹಾಗೂ ಅದರ ಸಿದ್ಧಾಂತಗಳ ಪರ ಕಣಿವೆ ರಾಜ್ಯದ ಆಯ್ದ ಭಾಗಗಳಲ್ಲಿ ಉಪನ್ಯಾಸಗಳನ್ನು ನೀಡುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿವೆ.

ದೌಲತ್‌ ಉಲ್‌ ಇಸ್ಲಾಂ ಎಂಬ ಹೆಸರಿನ ಸಂಘಟನೆ ಇದಾಗಿದ್ದು, ಐಸಿಸ್‌ ಪರ ಕಾಶ್ಮೀರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಕಳೆದ ಫೆಬ್ರವರಿಯಲ್ಲಿ ಐಸಾ ಫಾಸಿಲ್‌ ಎಂಬ ಭಯೋತ್ಪಾದಕನೊಬ್ಬನನ್ನು ಫೆ.27ರಂದು ಜಮ್ಮು-ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಹತ್ಯೆ ಮಾಡಿದಾಗ ಈ ಸಂಘಟನೆ ಕುರಿತು ಮಾಹಿತಿ ಬೆಳಕಿಗೆ ಬಂದಿದೆ ಎಂದು ಗುಪ್ತಚರ ಸಂಸ್ಥೆಗಳು ಕೇಂದ್ರ ಗೃಹ ಸಚಿವಾಲಯಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿವೆ ಎಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ.

ಅನಂತನಾಗ್‌ ಜಿಲ್ಲೆಯಲ್ಲಿ ಶುಕ್ರವಾರವಷ್ಟೇ ಭದ್ರತಾ ಪಡೆಗಳು ಜಮ್ಮು-ಕಾಶ್ಮೀರ ಐಸಿಸ್‌ ಸಂಘಟನೆ ಮುಖ್ಯಸ್ಥನಾದ ದಾವೂದ್‌ ಅಹಮದ್‌ ಸೋಫಿ ಎಂಬಾತನನ್ನು ಕೊಂದು ಹಾಕಿದ್ದವು.

click me!