
ಬೆಂಗಳೂರು (ಅ.16): ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮವನ್ನ ಸುಮಾರು 27 ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ನಡೆಸುವ ಸಚಿವಾಲಯದ ಪ್ಲಾನ್ ಈಗ ಬೂಮ್ರ್ಯಾಂಗ್ ಆಗಿದೆ. ಶಾಸಕರಿಗೆ ಚಿನ್ನದ ನಾಣ್ಯ ಹಾಗೂ ಸಚಿವಾಲಯದ ಅಧಿಕಾರಿಗಳಿಗೆ ಬೆಳ್ಳಿ ತಟ್ಟೆ ನೀಡುವ ವಿಚಾರವಾಗಿ ಪರ-ವಿರೋಧ ಚರ್ಚೆ ತೀವ್ರಗೊಂಡಿದೆ.
ವಾಯ್ಸ್: ವಿಧಾನಸೌಧದ ವಜ್ರ ಮಹೋತ್ಸವ ಅದ್ದೂರಿಯಾಗಿ ಆಚರಿಸೋಕೆ ಸರ್ಕಾರ ಮುಂದಾಗಿದೆ.. 26 ಕೋಟಿ 87 ಲಕ್ಷ ವೆಚ್ಚದಲ್ಲಿ ವಜ್ರಮಹೋತ್ಸವಕ್ಕೆ ಆಚರಿಸಲು ನಿರ್ಧರಿಸಿದ್ದು, ಸುಮಾರು ಮೂರು ಕೋಟಿ ವೆಚ್ಚದಲ್ಲಿ ಶಾಸಕರಿಗೆ ಚಿನ್ನದ ನಾಣ್ಯ ಹಾಗೂ ಸಚಿವಾಲಯದ ಅಧಿಕಾರಿಗಳಿಗೆ ಬೆಳ್ಳಿ ತಟ್ಟೆ ನೀಡಲು ಮುಂದಾಗಿದ್ದಾರೆ.. ಸರ್ಕಾರದ ಈ ನಿರ್ಧಾರ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
ವಿಧಾನಸೌಧದ ವಜ್ರ ಮಹೋತ್ಸವ ಕಾರ್ಯಕ್ರಮಕ್ಕಾಗಿ ವೆಚ್ಚ ಮಾಡಲು ಉದ್ದೇಶಿಸಿರುವ ಅಂದಾಜು ಪಟ್ಟಿಯ ಪ್ರಕಾರ ವಿಧಾನಸೌಧದ ಅಲಂಕಾರಕ್ಕೆ 75 ಲಕ್ಷ, ಕಾಫೀ-ಟೀ 35 ಲಕ್ಷ, ಭೋಜನ 3 ಕೋಟಿ 75 ಲಕ್ಷ, ವೇದಿಕೆ ಹಾಗೂ ಬೆಳಕಿಗೆ 3 ಕೋಟಿ 50 ಲಕ್ಷ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ50 ಲಕ್ಷ, 3 ಸಾಕ್ಷ್ಯ ಚಿತ್ರಕ್ಕೆ 3 ಕೋಟಿ 60 ಲಕ್ಷ, ಗೌರವಾರ್ಪಣೆಗೆ 10 ಲಕ್ಷ, ಸರ್ಕಾರದ ಸಾಧನೆಗಳ ಪ್ರದರ್ಶನಕ್ಕೆ 3 ಕೋಟಿ 4 ಲಕ್ಷ, ಪ್ರಚಾರಕ್ಕೆ 2 ಕೋಟಿ, ನೆನಪಿನ ಕಾಣಿಕೆ 3 ಕೋಟಿ, ಫೋಟೋ-ವೀಡಿಯೋ 75 ಲಕ್ಷ, ಸ್ವಚ್ಛತೆ-ಸಾರಿಗೆ-ವಸತಿ 50 ಲಕ್ಷ, ಜಿಎಸ್ಟಿ ಮತ್ತು ಇತರೆಗೆ 5 ಕೋಟಿ ಹೀಗೆ ಒಟ್ಟು 26ಕೋಟಿ 87 ಲಕ್ಷ ರೂಪಾಯಿ ಅಂದಾಜು ವೆಚ್ಚದ ಪಟ್ಟಿ ತಯಾರಿಸಲಾಗಿದೆ.
ಒಟ್ಟಾರೆ ವಿಧಾನಸೌಧದ ವಜ್ರಮಹೋತ್ಸವ ಆಚರಣೆಯ ನೆಪದಲ್ಲಿ ದುಂದುವೆಚ್ಚಕ್ಕೆ ಮುಂದಾಗಿರುವದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಸರಳ ಆಚರಣೆಗೆ ಒತ್ತಾಯ ಜೋರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.