
ಬೆಂಗಳೂರು (ಅ.16): ರಾಜ್ಯದಲ್ಲಿ ಮಳೆಯ ಆರ್ಭಟ ಇನ್ನೂ ಕಮ್ಮಿಯಾಗಿಲ್ಲ. ಹಲವು ಜಿಲ್ಲೆಗಳಲ್ಲಿ ವರುಣ ಭಾರೀ ಆವಾಂತರ ಸೃಷ್ಟಿದ್ದಾನೆ. ಒಂದೆಡೆ ಕೆರೆಗಳು ತುಂಬಿ ಹರಿಯುತ್ತಿರುವುದು ರೈತರಿಗೆ ಖುಷಿಯಾದರೆ ಭಾರೀ ಮಳೆಯಿಂದ ಬೆಳೆ, ಮನೆ, ಕಟ್ಟಡ, ಆಸ್ಪತ್ರೆಗಳಿಗೆ ನೀರು ನುಗ್ಗಿ ಜನರು ಅವ್ಯವಸ್ಥೆ ಪಡುವಂತಾಗಿದೆ.
ರಾಜ್ಯದ ಕೆಲವೆಡೆ ಮಳೆ ಆರ್ಭಟಿಸ್ತಿದೆ. ಅದರಲ್ಲೂ ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಮಳೆಯಿಂದಾಗಿ ಮನೆ ಮೇಲ್ಛಾವಣಿ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಗಡಿನಾಡು ಬೆಳಗಾವಿ, ಚಿಕ್ಕೋಡಿಯಲ್ಲಿ ಮಳೆ ಆರ್ಭಟ ಜೋರಾಗಿದೆ. ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿರೋದ್ರಿಂದ ಚಿಕ್ಕೋಡಿಯ ಬಹುತೇಕ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ಭಾರೀ ತೊಂದೆಯಾಗಿದೆ. ಮೂಡಿಗೆರೆಯಿಂದ ಧರ್ಮಸ್ಥಳ, ಮಂಗಳೂರು, ಮಣಿಪಾಲ್‍ಗೆ ಸಂಪರ್ಕ ಕಲ್ಪಿಸೋ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ. ಗುಡ್ಡ ಕುಸಿತದಿಂದಾಗಿ ಸುಮಾರು ಎರಡು ಕಿ.ಮೀ.ನಷ್ಟು ವಾಹನಗಳು ಜಾಮ್ ಆಗಿತ್ತು.
ರಾಯಚೂರಿನಲ್ಲೂ ಭಾರೀ ಮಳೆಯಾಗಿ ಅವಾಂತರ ಸೃಷ್ಟಿಸಿದೆ. ಓಪೆಕ್ ಆಸ್ಪತ್ರೆಗೆ ಭಾರೀ ಪ್ರಮಾಣದ ನೀರು ಒಳ ನುಗ್ಗಿದ್ದು, ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳು ಪರದಾಡುವಂತಾಗಿದೆ. ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಮಳೆಯಿಂದಾಗಿ ಬೋರವೆಲ್ ಗಳಲ್ಲಿ ನೀರು ಉಕ್ಕಿ ಹರಿಯುತ್ತಿವೆ.
ಬೆಂಗಳೂರಿನಲ್ಲೂ ಮಳೆ ಅವಾಂತರ ಕಮ್ಮಿಯಾಗಿಲ್ಲ. ಕಳೆದ 15 ವರ್ಷದ ನಂತರ ಜಿಗಣಿ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಹೀಗಾಗಿ ಜಿಗಣಿಯ ಲಿಂಕ್ ರಸ್ತೆಯ ಸೆಲೆಬ್ರಿಟಿ ಮತ್ತು ಮದುಮಿತ್ರ ಬಡಾವಣೆಗಳು ಸಂಪೂರ್ಣ ಜಲಾವೃತವಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.