
ಮುಂಬೈ[ಜು.04]: ಅಲಿ ಅಬ್ಬಾಸ್ ನಿರ್ದೆಶನದ ಸಲ್ಮಾನ್ ಖಾನ್ ನಾಯಕನಾಗಿ ಅಭಿನಯಿಸುತ್ತಿರುವ ಬಾಲಿವುಡ್ ಚಿತ್ರ ಭಾರತ್'ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅತೀ ಹೆಚ್ಚು ಸಂಭಾವನೆ ಪಡೆದಿದ್ದಾರೆ.
ಈ ಚಿತ್ರದಲ್ಲಿ 6.5 ಕೋಟಿ ರೂ. ಪಡೆದಿದ್ದು ಅತೀ ಹೆಚ್ಚು ಸಂಭಾವನೆ ಪಡೆದವರಲ್ಲಿ 3ನೇ ಸ್ಥಾನ ಪ್ರಿಯಾಂಕಾ ಅವರದ್ದಾಗಿದೆ. ಈ ಮೊದಲು ದೀಪಿಕಾ ಪಡುಕೋಣೆ ಪದ್ಮಾವತ್ ಚಿತ್ರಕ್ಕಾಗಿ 12 ಕೋಟಿ ಪಡೆದಿದ್ದರೆ, ಕಂಗನಾ ರನಾವತ್ 11 ಕೋಟಿ ಪಡೆದಿದ್ದರು.
ಪ್ರಿಯಾಂಕಾ ಬಾಲಿವುಡ್ ಚಿತ್ರಗಳಲ್ಲದೆ ಹಾಲಿವುಡ್ ನಲ್ಲೂ ಹೆಚ್ಚು ಖ್ಯಾತಿ ಗಳಿಸುತ್ತಿದ್ದು ಅಮೆರಿಕಾದ ರಿಯಾಲಿಟಿ ಶೋಗಳಲ್ಲಿ ಕೂಡ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. 2016ರಲ್ಲಿ ಜೈ ಗಂಗಾಜಲ್ ನಂತರ 2 ವರ್ಷಗಳಲ್ಲಿ ಯಾವುದೇ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಭಾರತ್ ಸಿನಿಮಾ 2104 ರ ಕೊರಿಯನ್ ಚಿತ್ರ ಓಡ್ ತು ಮೈ ಫಾದರ್ ಸಿನಿಮಾದಿಂದ ಸ್ಫೂರ್ತಿ ಪಡೆದಿದ್ದು ಟಬೂ, ಸುನೀಲ್ ಗ್ರೋವರ್, ದಿಶಾ ಪಟಾಣಿ ಪ್ರಮುಖ ತಾರಾ ಬಳಗದಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.