ತೃತೀಯ ಲಿಂಗಿ ವಿದ್ಯಾರ್ಥಿಗಳಿಗಾಗಿ ವಿಶೇಷ ಹಾಸ್ಟೆಲ್| ಖಾಸಗಿ ಶಾಲೆಯಿಂದ ಕ್ರಾಂತಿಕಾರಕ ಹೆಜ್ಜೆ| ತಮಿಳುನಾಡಿನ ತಿರುಚಿ ಜಿಲ್ಲೆಯ ಸೋಮರಸಂಪೆಟ್ಟೈನ ಶಿವಾನಂದ ಬಾಲಾಲಯ| ರೋಟರಿ ಕ್ಲಬ್ ಸಹಾಯದಿಂದ ವಿಶೇಷ ಹಾಸ್ಟೆಲ್ ನಿರ್ಮಾಣ| 40 ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಇಲ್ಲಿ ವಸತಿ ಸೌಲಭ್ಯ|
ತಿರುಚಿ(ಜು.25): ಖಾಸಗಿ ಶಾಲೆಯೊಂದು ತೃತೀಯ ಲಿಂಗಿ ವಿದ್ಯಾರ್ಥಿಗಳಿಗಾಗಿ ವಿಶೇಷ ಹಾಸ್ಟೇಲ್ ವ್ಯವಸ್ಥೆ ಕಲ್ಪಿಸುವ ನಿರ್ಧಾರ ಕೈಗೊಂಡಿದೆ.
ತಮಿಳುನಾಡಿನ ತಿರುಚಿ ಜಿಲ್ಲೆಯ ಸೋಮರಸಂಪೆಟ್ಟೈನ ಶಿವಾನಂದ ಬಾಲಾಲಯ ಖಾಸಗಿ ಶಾಲೆ, ತೃತೀಯ ಲಿಂಗಿ ವಿದ್ಯಾರ್ಥಿಗಳಿಗಾಗಿ ವಿಶೇಷ ಹಾಸ್ಟೇಲ್ ವ್ಯವಸ್ಥೆ ಕಲ್ಪಿಸಲಿದೆ. ಇದಕ್ಕೆ ಸ್ಥಳೀಯ ರೋಟರಿ ಕ್ಲಬ್ ಸಹಾಯ ಮಾಡಲಿದೆ ಎಂಬುದು ವಿಶೇಷ.
ಒಟ್ಟು 32 ಲಕ್ಷ ರೂ. ವೆಚ್ಚದಲ್ಲಿ ಹಾಸ್ಟೇಲ್ ನಿರ್ಮಾಣವಾಗುತ್ತಿದ್ದು, ಒಟ್ಟು 40 ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಇಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಮುಂದಿನ ಜನವರಿ 2020ರಲ್ಲಿ ಹಾಸ್ಟೇಲ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, 2020-21 ರ ಶೈಕ್ಷಣಿಕ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುದು ಎನ್ನಲಾಗಿದೆ.