
ಬೆಂಗಳೂರು(ಜೂ.16): ಸಾರ್ವಜನಿಕರೇ ಎಚ್ಚರ.. ಎಚ್ಚರ.. ಇಂದು ಆಸ್ಪತ್ರೆಗಳು ಸೇವೆ ನೀಡಲ್ಲ.. ಯಾಕಪ್ಪಾ ಅಂದ್ರಾ? ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆ ವೈದ್ಯರು ಬೀದಿಗಿಳಿದು ಧರಣಿ ನಡೆಸಲಿದ್ದಾರೆ. ಹೀಗಾಗಿ ಆರೋಗ್ಯದಲ್ಲಿ ಏರುಪೇರು ಬಂದ್ರೆ ಪಡಿಪಾಟಲು ಖಚಿತ. ಹಾಗಾದ್ರೆ ವೈದ್ಯರ ಪ್ರತಿಭಟನೆಗೆ ಕಾರಣ ಏನು? ಬೇಡಿಕೆಗಳೇನು? ಇಲ್ಲಿದೆ ಸಂಪೂರ್ಣ ವಿವರ
ಕರ್ನಾಟಕ ಖಾಸಗಿ ವೈದ್ಯಕೀಯ ಕಾಯ್ದೆ 2017ನ್ನು ರಾಜ್ಯದ ಖಾಸಗಿ ಆಸ್ಪತ್ರೆ ವೈದ್ಯರು ವಿರೋಧಿಸಿದ್ದಾರೆ. ಯಾಕೆಂದರೆ ಹೊಸ ಕಾಯ್ದೆಯನ್ನು ಒಪ್ಪಲು ಸುತಾರಾಂ ಒಪ್ಪುತ್ತಿಲ್ಲ.
2017ರ ಕಾಯ್ದೆ ತಿದ್ದುಪಡಿ ಆದ್ರೆ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ಚಿಕಿತ್ಸಾ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುವಂತಿಲ್ಲ. ಒಂದು ವೇಳೆ ಹೆಚ್ಚು ದರ ವಸೂಲಿ ಮಾಡಿದರೆ 5 ಲಕ್ಷ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ. ಹೀಗಾಗಿ ಕರ್ನಾಟಕ ಖಾಸಗಿ ವೈದ್ಯಕೀಯ ತಿದ್ದುಪಡಿ ಕಾಯ್ದೆ 2017 ಬದಲಾಗಿ ಕರ್ನಾಟಕ ಕ್ಲಿನಿಕ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆ ಜಾರಿಗೆ ತರಲಿ ಅಂತ ಒತ್ತಾಯಿಸಿದ್ದಾರೆ. ಅಲ್ಲದೆ ವೈದ್ಯರ ತಪ್ಪುಗಳಿಗೆ ದೂರು ಸಲ್ಲಿಸಲು ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಕೌಂಟರ್ ತೆರೆಯುವುದಕ್ಕೂ ಖಾಸಗಿ ವೈದ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ದೂರುಗಳನ್ನು ಸಲ್ಲಿಸಲು ಮೆಡಿಕಲ್ ಕೌನ್ಸಿಲ್ ಇದೆ ಬದಲಾಗಿ ಹೊಸ ಕೌಂಟರ್ ಸ್ಥಾಪನೆ ಕೂಡ ಸರಿಯಿಲ್ಲ ಅಂತಿದ್ದಾರೆ.
ಇಂದಿನ ಪ್ರತಿಭಟನೆಯಲ್ಲಿ 15 ಸಾವಿರಕ್ಕೂ ಹೆಚ್ಚು ವೈದ್ಯರು ಭಾಗವಹಿಲಿದ್ದಾರೆ. ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಜಾಥಾ ನಡೆಯಲಿದೆ. ಹೀಗಾಗಿ ತುರ್ತು ಸೇವೆ ಹೊರತುಪಡಿಸಿ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ OPD ಅಂದ್ರೆ ಹೊರ ರೋಗಿಗಳ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ತಿದ್ದುಪಡಿ ಕಾಯ್ದೆಯನ್ನ ವಿಧಾನಸಭೆಯಲ್ಲಿ ಮಂಡಿಸಲು ಬಿಡಲ್ಲ ಅಂತ ಪಟ್ಟು ಹಿಡಿದಿರುವ ವೈದ್ಯರು ಇಂದು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ. ಇದ್ರಿಂದಾಗಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಗ್ಯಾರಂಟಿಯಾಗಿದ್ದು ಸಾರ್ವಜನಿಕರು ಎಚ್ಚರ ವಹಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.