
ಚಿಕ್ಕಮಗಳೂರು(ಜೂ.16): ಸಾಮಾನ್ಯವಾಗಿ ಎರಡು ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲಾ ಅಂದರೆ ಕನೆಕ್ಷನ್ ಕಟ್ ಮಾಡುವ ಮೆಸ್ಕಾಂ ಅಧಿಕಾರಿಗಳು. ಸರ್ಕಾರಿ ಇಲಾಖೆಗೆಗಳಿಗೆ ಮಾತ್ರ ಈ ನಿಯಮ ಪಾಲನೇ ಮಾಡುವುದಿಲ್ಲ. ಹೌದು, ಇದಕ್ಕೆ ಸಾಕ್ಷಿ ಚಿಕ್ಕಮಗಳೂರಿನ ಸರ್ಕಾರಿ ಕಚೇರಿಗಳು. ಅಧಿಕಾರಿಗಳ ಈ ಬೇಜಾವಾಬ್ದಾರಿಯಿಂದ ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಸ್ಥಳೀಯ ಸಂಸ್ಥೆಗಳಿಂದ ಬಾಕಿ ಇರುವ ಬಿಲ್ ಮೊತ್ತ ಬರೋಬ್ಬರಿ 29 ಕೋಟಿ.
ಕಳೆದ ಐದಾರು ವರ್ಷಗಳಿಂದ ಸರಿಯಾಗಿ ಬಿಲ್ ಪಾವತಿಸದ ಕಾರಣ ಬರೋಬರಿ 29 ಕೋಟಿ ಬಿಲ್ ಬಾಕಿ ಉಳಿದಿದೆ. ಜಿಲ್ಲೆಯ 224 ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 26 ಕೋಟಿ, ನಗರಸಭೆ, ಪುರಸಭೆಗಳಲ್ಲಿ 2 ಕೋಟಿ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ , ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಒಳಗೊಂಡತ್ತೆ ಒಟ್ಟು 29 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿದಿರುವುದು ಮೆಸ್ಕಾಂ ಅಧಿಕಾರಿಗಳಿಗೆ ತಲೆನೋವಾಗಿದೆ.
ಸರ್ಕಾರಿ ಇಲಾಖೆಗಳಲ್ಲಿ ಶೇಕಡಾ 60 ರಷ್ಟು ಹಣ ವಿದ್ಯುತ್ ಬಿಲ್ ಗಾಗಿ ಮೀಸಲಿದ್ದರೂ, ಸರ್ಕಾರಿ ಕಚೇರಿಗಳ ನಿರ್ಲಕ್ಷ್ಯದಿಂದ ಕೋಟಿಗಟ್ಟಲೇ ಬಿಲ್ ಬಾಕಿ ಉಳಿದಿದೆ.
ಒಟ್ಟಾರೆ ಸಾರ್ವಜನಿಕರು ಬಿಲ್ ಪಾವತಿ ಮಾಡದಿದ್ದರೆ ಹೇಳದೆ ಕೇಳದೆ ವಿದ್ಯುತ್ ಕನೆಕ್ಷನ್ ಕಟ್ ಮಾಡುವ ಮೆಸ್ಕಾಂ ಅಧಿಕಾರಿಗಳು ಸರ್ಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.