
ಬೆಂಗಳೂರು(ಅ. 26): ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ರೈಲುಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ರಜೆಯಲ್ಲಿ ಊರಿಗೆ, ಪ್ರವಾಸಕ್ಕೆಂದು ಹೋಗುವವರ ಸಂಖ್ಯೆ ಹೆಚ್ಚಾಗಿರುವಾಗ ಅದರ ಲಾಭವನ್ನು ಖಾಸಗಿ ಬಸ್ಸುಗಳ ನಿರ್ವಾಹಕರು ಮಾಡಿಕೊಳ್ಳುತ್ತಿದ್ದಾರೆ. ಪ್ರತಿವರ್ಷವೂ ಇದೇ ಕಥೆ. ಹಬ್ಬಗಳು, ಸರ್ಕಾರಿ ರಜೆ ಬಂದ್ರೆ ದೂರದೂರಿಗೆ ಪ್ರಯಾಣಿಸುವ ಪ್ರಯಾಣಿಕರಿಂದ ಖಾಸಗಿ ಬಸ್ ಮಾಲೀಕರು ಹಣ ಕಿತ್ತುಕೊಳ್ಳೊಕ್ಕೆ ಪ್ರಾರಂಭಿಸುತ್ತಾರೆ. ಬೆಂಗಳೂರಿನಿಂದ ಹೊರ ರಾಜ್ಯ ಸೇರಿದಂತೆ ಬೇರೆ ಬೇರೆ ನಗರಗಳಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಬೇಕೆಂದರೆ ಸಾವಿರಾರೂ ರೂಪಾಯಿ ಹಣವನ್ನು ಟಿಕೆಟ್'ಗೆ ವೆಚ್ಚಮಾಡಬೇಕು. ಹಬ್ಬದ ಪ್ರಯುಕ್ತ ಊರಿಗೆ ಹೋಗುವ ಅನಿವಾರ್ಯತೆ ಇರುವ ಪ್ರಯಾಣಿಕರು ಡಬ್ಬಲ್ ದುಡ್ಡು ಕೊಟ್ಟು ಪ್ರಯಾಣ ಬೆಳೆಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಸಾಮಾನ್ಯ ದಿನದ ದರಕ್ಕಿಂತ ಎರಡು ಪಟ್ಟು ಹೆಚ್ಚಳ..!
| ಬಸ್ ಮಾರ್ಗ | ನಿತ್ಯದ ದರ (ರೂಗಳಲ್ಲಿ) | ಹಬ್ಬಕ್ಕೆ ಹೆಚ್ಚಿದ ದರ (ರೂಗಳಲ್ಲಿ) |
| ಬೆಂಗಳೂರು - ಹುಬ್ಬಳ್ಳಿ | 700 | 1200 |
| ಬೆಂಗಳೂರು - ಮಂಗಳೂರು | 550 | 1200 |
| ಬೆಂಗಳೂರು - ಹೈದರಾಬಾದ್ | 900 | 2200 |
| ಬೆಂಗಳೂರು - ಬೀದರ್ | 1000 | 2000 |
| ಬೆಂಗಳೂರು - ಶಿವಮೊಗ್ಗ | 700 | 1100 |
| ಬೆಂಗಳೂರು - ವಿಜಯಪುರ | 850 | 1495 |
ಇದೇ ವೇಳೆ, ಈ ಬಾರಿ ಕೆಎಸ್ಸಾರ್ಟಿಸಿ ನಿಗಮವು ಹಬ್ಬದ ಪ್ರಯುಕ್ತ 1500 ವಿಶೇಷ ಬಸ್'ಗಳನ್ನ ಬಿಟ್ಟಿದ್ದಾರೆ. ಇವು ಪ್ರಯಾಣಿಕರ ನೆರವಿಗೆ ಬರಬಲ್ಲುದಾ ಎಂಬುದನ್ನು ಕಾದುನೋಡಬೇಕು.
ವರದಿ: ಮತ್ತಪ್ಪ ಲಮಾಣಿ, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.