Sharath Sharma   | stockphoto
Published : Jun 20, 2022, 10:21 AM ISTUpdated : Jun 20, 2022, 04:02 PM IST

PM Modi Karnataka Visit LIVE: ಆತ್ಮನಿರ್ಭರ ಭಾರತಕ್ಕೆ ಬೆಂಗಳೂರೇ ಪ್ರೇರಣೆ: ಬೆಂಗಳೂರು ಹೊಗಳಿದ ಮೋದಿ

ಸಾರಾಂಶ

Prime Minister Narendra Modi Karnataka visit on Yoga Day: ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸಿದ್ದಾರೆ. ಎರಡು ದಿನಗಳ ಕಾಲ ರಾಜ್ಯ ಪ್ರವಾಸದಲ್ಲಿರಲಿದ್ದಾರೆ. ಈಗಾಗಲೇ ಐಐಎಸ್‌ಸಿಯಲ್ಲಿ ಮೆದುಳು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದ ಮೋದಿ, ಇನ್ನೂ ಹಲವು ಯೋಜನೆಗಳ ಅನುಷ್ಠಾನಕ್ಕೆ ಚಾಲನೆ ಕೊಡಲಿದ್ದಾರೆ. ಅವರು ಮೈಸೂರಿನಲ್ಲಿ ಜೂನ್‌ 21ರಂದು ನಡೆಯಲಿರುವ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯೋಗ ದಿನಾಚರಣೆಯ ಆಚರಣೆಗಾಗಿ ಸಾಂಸ್ಕೃತಿಕ ನಗರಿ ಮೈಸೂರು ಸಿದ್ಧವಾಗಿದೆ. ಒಂದೆಡೆ ಪ್ರಧಾನಿ ಭೇಟಿಗೆ ರಾಜ್ಯ ಸಿದ್ಧವಾಗಿದ್ದರೆ, ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆಗೆ ಕಾಂಗ್ರೆಸ್‌ ಕರೆಕೊಟ್ಟಿದೆ. ಮೋದಿ ಭೇಟಿ ವೇಳೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸುವ ಸುಳಿವು ರಾಜ್ಯ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿಯವರೇ ಬಂದೋಬಸ್ತಿನ ಬಗ್ಗೆ ನಿಗಾವಹಿಸಿದ್ದಾರೆ. ಈ ಹಿಂದೆ ಪಂಜಾಬಿನ ಚುನಾವಣೆಗೂ ಮುನ್ನ ಮೋದಿ ವಿರುದ್ಧ ಪ್ರತಿಭಟನೆ ಮಾಡಲಾಗಿತ್ತು. ದೇಶದ ಪ್ರಧಾನಿಯವರ ಭದ್ರತೆಯ ಕುರಿತಾಗಿ ಆ ಸಂದರ್ಭದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇದೇ ಕಾರಣದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರವಹಿಸಿದ್ದಾರೆ. ಪ್ರಧಾನಿ ಮೋದಿಯವರ ಕರ್ನಾಟಕ ಭೇಟಿಯ ಕ್ಷಣಕ್ಷಣದ ಮಾಹಿತಿ ಇಲ್ಲಿ ಲಭ್ಯವಾಗಲಿದೆ.

PM Modi Karnataka Visit LIVE: ಆತ್ಮನಿರ್ಭರ ಭಾರತಕ್ಕೆ ಬೆಂಗಳೂರೇ ಪ್ರೇರಣೆ: ಬೆಂಗಳೂರು ಹೊಗಳಿದ ಮೋದಿ

04:02 PM (IST) Jun 20

ಆತ್ಮ ನಿರ್ಭರ ಭಾರತಕ್ಕೆ ಬೆಂಗಳೂರೇ ಪ್ರೇರಣೆ: ಪ್ರಧಾನಿ ಮೋದಿ

ಆತ್ಮ ನಿರ್ಭರ ಭಾರತಕ್ಕೆ ಬೆಂಗಳೂರಿಗರೇ ಪ್ರೇರಣೆ

ಭಾರತದ ಸ್ಟಾರ್ಟಪ್‌ಗೆ ಬೆಂಗಳೂರು ಅತ್ಯುತ್ತಮ ನಗರ

ಕಳೆದ ಎಂಟು ವರ್ಷದಲ್ಲಿ ನೂರಕ್ಕೂ ಹೆಚ್ಚು ಸ್ಟಾರ್ಟಪ್‌ ಯೂನಿಕಾರ್ನ್‌ಗಳು ಹುಟ್ಟಿಕೊಂಡಿದ್ದಾರೆ

ಇಸ್ರೋ, ಡಿಆರ್‌ಡಿಒ ಭಾರತದ ಹೆಮ್ಮೆಯ ಗುರುತು

ತಿಂಗಳಿಗೊಂದು ಯೂನಿಕಾರ್ನ್‌ ಬೆಂಗಳೂರಿನಲ್ಲಿ ಹುಟ್ಟಿಕೊಳ್ಳುತ್ತಿವೆ

ಇವು ನಿಜವಾದ ವೆಲ್ತ್‌ ಮತ್ತು ಹೊಸ ಉದ್ಯೋಗದ ಕ್ರಿಯೇಟರ್‌ಗಳಾಗುತ್ತಿವೆ

ಈ ಕಾರಣಕ್ಕಾಗಿಯೇ ದೇಶದಲ್ಲಿ ಭಾರತ ಸ್ಟಾರ್ಟಪ್‌ ಕ್ಯಾಪಿಟಲ್‌ ಅನಿಸಿಕೊಂಡಿದೆ

 

03:57 PM (IST) Jun 20

ಬೆಂಗಳೂರು ದೇಶಕ್ಕೇ ಮಾದರಿ ನಗರ, ಉದ್ಯೋಗ ಮತ್ತು ಆರ್ಥಿಕತೆ ಸೃಷ್ಟಿಸುವ ನಗರ: ಮೋದಿ

16 ವರ್ಷಗಳಿಂದ ಈ ಎಲ್ಲಾ ಯೋಜನೆಗಳು ಫೈಲ್‌ನಲ್ಲೇ ಇದ್ದವು. ನಮ್ಮ ಸರ್ಕಾರ ಈ ಯೋಜನೆಗೆ ಕಾಯಕಲ್ಪ ನೀಡಿದೆ. ಬೆಂಗಳೂರಲ್ಲಿ ದುಡಿಯುವವರು ಬೆಂಗಳೂರಲ್ಲೇ ಇರಬೇಕು ಎಂಬ ಅನಿವಾರ್ಯತೆಯನ್ನು ಈ ರೈಲ್ವೆ ಯೋಜನೆಗಳು ಹೋಗಲಾಡಿಸುತ್ತದೆ. ಕನೆಕ್ಟಿವಿಟಿ ನಿರ್ಮಾಣವಾದ ನಂತರ ಜನರ ದೈನಂದಿನ ಬದುಕಿಗೆ ಸಹಕಾರಿಯಾಗಲಿದೆ. 40 ವರ್ಷಗಳಲ್ಲಿ ಎಲ್ಲ ಕೆಲಸಗಳೂ ಕೇವಲ ಚರ್ಚೆಯಲ್ಲೇ ಕಳೆದುಹೋಗಿವೆ. ರೈಲ್ವೆ ಕನೆಕ್ಟಿವಿಟಿ ನಿರ್ಮಾಣ ದೇಶದ ಆರ್ಥಿಕ ಕ್ರಾಂತಿಗೆ ಮುನ್ನುಡಿಯಾಗುತ್ತದೆ. ಕ್ರಾಮಂತಿಕಾರಕ ಬೆಳವಣಿಗೆಗೆ ಇದು ಅತ್ಯಂತ ಸಹಕಾರಿಯಾಗಿದೆ. 1,200 ಕಿಲೋಮೀಟರ್‌ನಷ್ಟು ಉದ್ದ ರೈಲ್ವೆ ಸಂಪರ್ಕ ಕರ್ನಾಟಕದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿದೆ. ವಿಮಾನದಲ್ಲಿ ಕೊಡುತ್ತಿದ್ದ ಸವಲತ್ತುಗಳನ್ನು ರೈಲ್ವೆಯಲ್ಲೂ ಕೊಡುತ್ತಿದ್ದೇವೆ. ಬೆಂಗಳೂರಿನ ಎಲ್ಲಾ ರೈಲ್ವೇ ನಿಲ್ದಾಣಗಳನ್ನೂ ಸ್ಮಾರ್ಟ್‌ ನಿಲ್ದಾಣಗಳನ್ನಾಗಿ ಮಾಡಲಾಗುವುದು. ಬೆಂಗಳೂರು ವೆಲ್ತ್‌ ಕ್ರಿಯೇಟರ್‌ ಮತ್ತು ಜಾಬ್‌ ಕ್ರಿಯೇಟರ್‌ಗಳ ನಗರ. ದೇಶಕ್ಕೆ ಬೆಂಗಳೂರು ಕೊಡುಗೆ ಅಪಾರ. ಖಾಸಗಿ ಕ್ಷೇತ್ರದ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ಬೆಂಗಳೂರು ಜನ ತಕ್ಕ ಉತ್ತರ ಕೊಡುತ್ತಾರೆ. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳ ಸಮ್ಮಿಲನವೇ ಬೆಂಗಳೂರು ಬೆಳವಣಿಗೆಗೆ ಕಾರಣ. ಬೆಂಗಳೂರು ಪ್ರತಿಯೊಬ್ಬರ ಮೈಂಡ್‌ಸೆಟ್‌ ಬದಲಾಯಿಸುವ ಅವಕಾಶ ಮಾಡಿಕೊಡುತ್ತದೆ. ಖಾಸಗಿ ಕ್ಷೇತ್ರದ ಬಗ್ಗೆ ತಪ್ಪು ಕಲ್ಪನೆ ಹೊಂದಿದವರ ಮೈಂಡ್‌ ಸೆಟ್‌ ಬದಲಾಗುತ್ತದೆ. 

03:46 PM (IST) Jun 20

ಬೆಂಗಳೂರು ಟ್ರಾಫಿಕ್‌ ಜಾಮ್‌ಗೆ ಮುಕ್ತಿ ಕೊಡಲಿದೆ ಡಬಲ್‌ ಇಂಜಿನ್‌ ಸರ್ಕಾರ: ಪ್ರಧಾನಿ ಮೋದಿ ಮಾತು

ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ: ಏನು ಹೇಳಿದ್ರು ಪ್ರಧಾನಿ?:

ಎಲ್ಲರಿಗೂ ನಮಸ್ಕಾರಗಳು, ಕರ್ನಾಟಕ ರಾಜ್ಯದ ಪಾಲಿಗೆ ಇಂದು ಮಹತ್ವದ ದಿನ

ರಾಜ್ಯದಲ್ಲಿ ಹಲವು ಮೂಲಭೂತ ಸೌಲಭ್ಯಗಳು ಕಲ್ಪಿಸುವ ಯೋಜನೆಗಳಿಗೆ ಇಂದು ಚಾಲನೆ ಸಿಕ್ಕಿದೆ

ಯೋಜನೆಗಳನ್ನು ಜಾರಿಗೊಳಿಸಲು ನನಗೆ ಸಂತೋಷವಾಗುತ್ತದೆ

ವೇದಿಕೆಯ ಮೇಲಿರುವ ಎಲ್ಲರಿಗೂ ಆತ್ಮೀಯ ಧನ್ಯವಾದಗಳು

ಡಬಲ್‌ ಇಂಜಿನ್‌ ಸರ್ಕಾರ ಕರ್ನಾಟಕದ ತ್ವರಿತ ಅಭಿವೃದ್ಧಿಯ ಭರವಸೆ ನೀಡಿತ್ತು

ಆದ ಭರವಸೆಯನ್ನು ಮತ್ತೊಮ್ಮೆ ನಾವು ಸಾಧಿಸುತ್ತಿದ್ದೇವೆ

೨೭ ಸಾವಿರ ಕೋಟಿರೂ ಮೌಲ್ಯದ ಅಭಿವೃದ್ಧಿ ಕಾರ್ಯವನ್ನು ಉದ್ಘಾಟಿಸಲಾಗಿದೆ

ಕೊಮ್ಮಘಟ್ಟಕ್ಕೆ ಬರುವ ಮುನ್ನ ನಾನು ಐಐಎಸ್‌ಸಿಗೆ ಭೇಟಿ ನೀಡಿದೆ

ವಿಜ್ಞಾನ ತಂತ್ರಜ್ಞಾನದ ಕ್ಷೇತ್ರದಲ್ಲಿನ ಪ್ರಗತಿಯನ್ನು ನೋಡಲು ನನಗೆ ಸಂತಸವಾಗುತ್ತಿದೆ

ಬೆಂಗಳೂರಿನಲ್ಲಿ ಇದು ನನ್ನ ಕಡೆಯ ಕಾರ್ಯಕ್ರಮವಾಗಿ ಇದಾದ ನಂತರ ನಾನು ಮೈಸೂರಿಗೆ ಹೋಗುತ್ತಿದ್ದೇನೆ

ಕರ್ನಾಟಕದಲ್ಲಿ ಐದು ನ್ಯಾಷನಲ್‌ ಹೈವೇ ಮತ್ತು ಏಳು ರೈಲ್ವೇ ಯೋಜನೆಗಳಿಗೆ ಚಾಲನೆ ನೀಡಲಾಗಿದೆ

ಮೈಸೂರಿನಲ್ಲೂ ಕರ್ನಾಟಕದ ಅಭಿವೃದ್ಧಿ ಯಾತ್ರೆ ಮುಂದುವರೆಯುತ್ತದೆ

ಇಲ್ಲಿಂದ ಹೊಸ ಶಕ್ತಿ ಪಡೆದು ಹೊರಡುತ್ತಿದ್ದೇನೆ

ಬೆಂಗಳೂರು ದೇಶದ ಲಕ್ಷಾಂತರ ಯುವಕರಿಗೆ ಭವಿಷ್ಯದ ಕನಸು ಕಲ್ಪಿಸುವ ನಗರವಾಗಿದೆ

ಬೆಂಗಳೂರಿನಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಬರುವ ಮಂದಿಗೆ ಸಹಾಯವಾಗಬೇಕು

ಬೆಂಗಳೂರಿನ ಟ್ರಾಫಿಕ್‌ ಜಾಮ್‌ನಿಂದ ಮುಕ್ತಿ ಪಡೆಯಲು ಮೆಟ್ರೊ, ಸಬ್‌ ಅರ್ಬನ್‌ ರೈಲು, ಉತ್ತಮ ರಸ್ತೆ ಎಲ್ಲವನ್ನೂ ಡಬಲ್‌ ಇಂಜಿನ್‌ ಸರ್ಕಾರ ಮಾಡುತ್ತದೆ.

ಇದರಿಂದ ಜನರಿಗೆ ಸಂಚಾರದಲ್ಲಿ ಕಿರಿಕಿರಿ ಕಡಿಮೆಯಾಗುತ್ತದೆ. 

03:36 PM (IST) Jun 20

ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆಯ ಅಂಚೆ ಸ್ಟಾಂಪ್‌ ಬಿಡುಗಡೆ

ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆಗೆ ಚಾಲನೆ ನೀಡಿದ ನಂತರ ಗೌರವಸೂಚಕವಾಗಿ ಅಂಚೆ ಇಲಾಖೆ ಬೆಂಗಳೂರು ಅರ್ಬನ್‌ ರೈಲಿನ ಧ್ಯೋತಕವಾಗಿ ಪೋಸ್ಟ್‌ ಸ್ಟಾಂಪ್‌ ಬಿಡುಗಡೆ ಮಾಡಲಾಯಿತು. 

03:23 PM (IST) Jun 20

ಹಲವು ರೈಲ್ವೇ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ

ವರ್ಚುವಲ್‌ ಆಗಿ ಹಲವು ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಕೊಮ್ಮಘಟ್ಟದ ವೇದಿಕೆಯಿಂದ ಚಾಲನೆ ನೀಡಿದರು. 

03:14 PM (IST) Jun 20

ಮೋದಿ ದೇಶಕಂಡ ಮಹಾನ್‌ ನಾಯಕ, ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ: ಬೊಮ್ಮಾಯಿ

"ಭಾರತ ಕಂಡ ಅತ್ಯಂತ ಶ್ರೇಷ್ಟ, ಧಕ್ಷ ಪ್ರಧಾನಿ ನರೇಂದ್ರ ಮೋದಿ. ಇಂದು ಕರ್ನಾಟಕದ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ಮೂವತ್ಮೂರು ಸಾವಿರ ಕೋಟಿ ರೂಪಾಯಿಗಳ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ. ನಮ್ಮೆಲ್ಲರ ಬಹುದಿನಗಳ ಕನಸು, ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆಗೆ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಇತಿಹಾಸದಲ್ಲಿ ಈ ದಿನವನ್ನು ಬರೆದಿಡಲೇಬೇಕಾದ ದಿನ. ಏಳು ನೂರಕ್ಕೂ ಹೆಚ್ಚು ಕಿಲೋಮೀಟರ್‌ ದೂರದ ರೈಲ್ವೇ ನಿರ್ಮಾಣ ಯೋಜನೆಗೆ ಇಂದು ಕಾಯಕಲ್ಪ ಸಿಕ್ಕಿದೆ. ನರೇಂದ್ರ ಮೋದಿಯವರ ದೂರದೃಷ್ಟಿಯಿಂದಲೇ ಈ ಯೋಜನೆಗಳಿಗೆ ಚಾಲನೆ ಸಿಕ್ಕಿವೆ. ರಾಜಕಾರಣಿಗಳ ಕಣ್ಣು ಮುಂದಿನ ಚುನಾವಣೆಯ ಮೇಲಿರುತ್ತದೆ. ಆದರೆ ಒಬ್ಬ ನಿಜವಾದ ನಾಯಕನ ಕಣ್ಣು ಮುಂದಿನ ಪೀಳಿಗೆಯ ಭವಿಷ್ಯದ ಮೇಲಿರುತ್ತದೆ. ನರೇಂದ್ರ ಮೋದಿ ಒಬ್ಬರು ದೇಶಕಂಡ ದಾರ್ಶನಿಕ ನಾಯಕ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಅವರು ಶ್ರಮಿಸುತ್ತಿದ್ದಾರೆ. ಈ ದೇಶವನ್ನು ಯಾವ ರೀತಿ ಮುನ್ನಡೆಸಬೇಕು ಎಂಬುದು ಅವರಿಗೆ ತಿಳಿದಿದೆ," ಎಂದು ಬಸವರಾಜ ಬೊಮ್ಮಾಯಿ ಹೇಳಿದರು. 

03:07 PM (IST) Jun 20

ಕೊಮ್ಮಘಟ್ಟದಲ್ಲಿ ನರೇಂದ್ರ ಮೋದಿಗೆ ಸನ್ಮಾನ

ವೇದಿಕೆಯಲ್ಲಿ ಸಿಎಂ, ಜೋಶಿ, ರಾಜ್ಯಪಾಲರು, ಸೋಮಣ್ಣ ಪಿಸಿ ಮೋಹನ್ ,ತೇಜಸ್ವಿ ಸೂರ್ಯ, ಡಿವಿ ಸದಾನಂದ ಗೌಡ ಭಾಗಿ. ವೇದಿಕೆಯ ಮೇಲೆ ನರೇಂದ್ರ ಮೋದಿಯವರಿಗೆ ಮೈಸೂರು ನಾಲ್ವಡಿ ಕೃಷ್ಣ ದೇವರಾಜ ವಡೆಯರ್‌ ಅವರ ಪೇಠ ತೊಡಿಸಿ ಸನ್ಮಾನಿಸಲಾಯಿತು. 

02:22 PM (IST) Jun 20

ಕೊಮ್ಮಘಟ್ಟದಲ್ಲಿ ಹಲವು ರೈಲ್ವೆ ಯೋಜನೆಗಳ ಉದ್ಘಾಟನೆ

ಕೊಮ್ಮಘಟ್ಟದಲ್ಲಿ  ಪ್ರಧಾನಿ ಮೋದಿಯಿಂದ ವರ್ಚುವಲ್​ ಉದ್ಘಾಟನೆ
ಹಲವು ರೈಲ್ವೆ ಯೋಜನೆಗಳನ್ನು ಪ್ರಧಾನಿ ಮೋದಿ ಲೋಕಾರ್ಪಣೆ
ಸಂಪೂರ್ಣ ವಿದ್ಯುದೀಕರಣಗೊಂದ ಕೊಂಕಣ್​ ರೈಲು ಮಾರ್ಗ
1.287  ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡ ಕೊಂಕಣ ರೈಲ್ವೆ

02:17 PM (IST) Jun 20

ಎಂಟಿಬಿ ನಾಗರಾಜ್‌ ಆರೋಗ್ಯದ ಗುಟ್ಟೇನು ಎಂದು ಕೇಳಿದ ಮೋದಿ

ಸಚಿವ ಎಂಟಿಬಿ ನಾಗರಾಜ್ ಭುಜದ ಮೇಲೆ ಕೈ  ಬೆರಳಿಟ್ಟು ಆರೋಗ್ಯದ ಗುಟ್ಟು ಕೇಳಿದ ಪ್ರಧಾನಿ ಪ್ರಧಾನಿ ಮೋದಿ. "ಕ್ಯಾ ಆಪ್ ಇತನಾ ಪತ್ಲಾ ಹೋ ಎಂದ ಪಿಎಂ. ಅದಕ್ಕೆ ಉತ್ತರಿಸಿದ ಎಂಟಿಬಿ, "ಯೋಗ ಔರ್ ಸ್ವಿಮ್ಮಿಂಗ್ ಕರ್ ರಹಾ ಹೂ ಇಸ್ ಲಿಯೇ ಮೇ ಪತ್ಲಾ ಲಗ್ತಾ ಹೂ," ಎಂದ ಎಂಟಿಬಿ ನಾಗರಾಜ್.

ಅದಕ್ಕೆ ಅಚ್ಚಾ ಹೈ ಎಂದು ನಕ್ಕ ಪಿಎಂ. ಯಲಹಂಕ ಏರ್ ಬೇಸ್ ನಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಆಗಮಿಸಿದ್ದ ಸಚಿವ ಎಂಟಿಬಿ ನಾಗರಾಜ್. ಈ ಸಂದರ್ಭದಲ್ಲಿ ಎಂಟಿಬಿ ಸಣ್ಣಗೆ ಇರೋದನ್ನು ನೋಡಿ ಹೇಗೆ ಇಷ್ಟೂಂದು ಸಣ್ಣ ಇದ್ದೀರೆಂದು ಕೇಳಿದ ಪಿಎಂ. ಯೋಗ ಮತ್ತು ಸ್ವಿಮ್ಮಿಂಗ್ ಮಾಡ್ತೀನಿ, ಹಾಗಾಗಿ ಸಣ್ಣ ಇದ್ದೀನಿ ಎಂದು ಉತ್ತರಿಸಿದ ಎಂಟಿಬಿ. ಒಳ್ಳೆಯದು ಎಂದು ನಕ್ಕ ಮೋದಿ.

02:12 PM (IST) Jun 20

ಮೋದಿ ಭೇಟಿ ಸಂದರ್ಭದಲ್ಲಿ ಸಿದ್ದರಾಮಯ್ಯ ಪತ್ರಿಕಾಗೋಷ್ಟಿ

ಸಿದ್ದರಾಮಯ್ಯ ಹೇಳಿದ್ದೇನು?:

ಇವತ್ತು ಅಂಬೇಡ್ಕರ್ ವಿವಿ ಉದ್ಘಾಟನೆ ಮಾಡ್ತಿದ್ದಾರೆ
ಇದನ್ನ ಜಾರಿಗೆ ತಂದಿದ್ದು ಯಾರು, ನಾವು
ನಮ್ಮ ಅವಧಿಯಲ್ಲೇ ಜಮೀನು‌ ಕೊಟ್ಟು ತಂದಿದ್ದು 
ಈಗ ಅದನ್ನ ಉದ್ಘಾಟನೆ ಮಾಡ್ತಿದ್ದಾರೆ 
ಮೈಸೂರು ಬೆಂಗಳೂರು ಅಷ್ಟಪಥದ ರಸ್ತೆ ಮಾಡಿದ್ದು ಯಾರು..?
ನಾನು ನಾನು ಅಂತ ಪ್ರತಾಪ್ ಸಿಂಹ ಓಡಾಡ್ತಿದ್ದಾರೆ
ಪ್ರಾಜೆಕ್ಟ್ ಅಪ್ರೂವ್ ಮಾಡಿದ್ದು ಆಸ್ಕರ್ ಫರ್ನಾಂಡಿಸ್
ಮಹದೇವಪ್ಪ ಕಾಳಜಿಯಿಂದ ರಸ್ತೆ ಆಗ್ತಿದೆ
ಈಗ ಪ್ರತಾಪ್ ಸಿಂಹ ನನ್ನದು ಅಂತ ಓಡಾಡ್ತಿದ್ದಾರೆ
ನಿರುದ್ಯೋಗ ಇನ್ನೂ‌ಹೆಚ್ಚುತ್ತಿದೆ
ಯುವಕರ ಹೋರಾಟಕ್ಕೆ ನಮ್ಮ‌ ಬೆಂಬಲವಿದೆ
ಹಿಂಸಾತ್ಮಕ‌ ಹೋರಾಟಕ್ಕೆ ನಮ್ಮ‌ಬೆಂಬಲವಿಲ್ಲ
ನ್ಯಾಯಯುತ ಹೋರಾಟಕ್ಕೆ ಬೆಂಬಲವಿದೆ

ಕೇಂದ್ರದ ಅಗ್ನಿಪಥ್ ಯೋಜನೆ ವಿಚಾರ
ನಾಲ್ಕು ವರ್ಷದವರೆಗೆ ಸೇರಿಸಿಕೊಳ್ತೇವೆ ಅಂತಾರೆ
ನಾಲ್ಕು ವರ್ಷದ ನಂತರ ಪಿಂಚಣಿ ಸಿಗಲ್ಲ
ಮುಂದೆ ನಮ್ಮ ಕಥೆ ಹೇಗೆ ಅಂತ ಅವರು ಕೇಳ್ತಿದ್ದಾರೆ
ದೇಶದ ಯುವಕರು ಕೇಳ್ತಿದ್ದಾರೆ
ಇವರು ಯೋಜನೆ ಬಗ್ಗೆ ಹಠ ಹಿಡಿದು ಕೂತಿದ್ದೇಕೆ...?
ನಾಲ್ಕು ವರ್ಷದ ನಂತರ ತೆಗೆದುಬಿಡ್ತಾರೆ
ಆ ನಂತರ ಅವರಿಗೆ ಕೆಲಸ ಕೊಡಲ್ಲ
ಸೇನೆಗೆ ಸೇರುವವರು ಏನು ಮಾಡಬೇಕು
ನಾಲ್ಕು ವರ್ಷ ಮಾತ್ರ ಕೊಡ್ತಾರೆ....?
೬ ತಿಂಗಳು ತರಬೇತಿಗೆ ಮುಗಿಯುತ್ತದೆ
ಉಳಿಯೋದು ಮೂರುವರೆ ವರ್ಷ ಮಾತ್ರ
ಉದ್ಯೋಗಿಗಳು ಆಮೇಲೆ ಏನು ಮಾಡ್ಬೇಕು..?
ರಿಟೈರ್ಡ್ ಬೆನಿಫಿಟ್ ಏನೂ ಸಿಗಲ್ಲ
ಅದಕ್ಕೆ ಹಠ ಹಿಡಿಯೋದು ಯಾಕೆ..?ಕೈಬಿಡಿ
ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಕರ್ನಾಟಕದಲ್ಲಿ ಪ್ರವಾಹ ಬಂದಾಗ ಬಾರದ ಮೋದಿ, ಈಗ ಯೋಗ ಮಾಡಲು ಬಂದಿದ್ದಾರೆ- ಸಿದ್ದು

02:04 PM (IST) Jun 20

ಐಟಿ ಹಬ್‌ ಉದ್ಘಾಟಿಸಿದ ಮೋದಿ

ಬೆಂಗಳೂರಿನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಐಟಿ ಹಬ್‌ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ. ಇದಕ್ಕೂ ಮೊದಲು ಅಂಬೇಡ್ಕರ್‌ ಪ್ರತಿಮೆಯನ್ನು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವಥನಾರಾಯಣ್‌ ಉಡುಗೊರೆಯಾಗಿ ಮೋದಿಯವರಿಗೆ ನೀಡಿದರು. 

01:50 PM (IST) Jun 20

ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಉದ್ಘಾಟಿಸಿದ ಮೋದಿ

ಪ್ರಧಾನಿ ಮೋದಿ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ್ನು ಉದ್ಘಾಟನೆ ಮಾಡಿದರು. 

ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ವಿಶ್ವ ವಿದ್ಯಾಲಯ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ..

ಅಂಬೇಡ್ಕ‌ ಸ್ಕೂಲ್ ಆಫ್ ಎಕನಾಮಿಕ್ ಕ್ಯಾಂಪಸ್ ಲೋಕಾರ್ಪಣೆ..

ಅಂಬೇಡ್ಕರ್ 125 ನೇ ಜನ್ಮದಿನದ ಅಂಗವಾಗಿ ಸಮರ್ಪಿಸುತ್ತಿರುವ ಒಂದು ಅರ್ಥಪೂರ್ಣ ಕೊಡುಗೆ..

ಅಂಬೇಡ್ಕರ್ ಅವರ 22 ಅಡಿ ಎತ್ತರದ ಕಂಚಿನ ಪ್ರತಳಿಯನ್ನೂ ಅನಾವರಣ..

43 ಎಕರೆ ಪ್ರದೇಶದಲ್ಲಿ ತಲೆಯೆತ್ತಿರುವ ಬೇಸ್ ಸಂಸ್ಥೆ.

ಉನ್ನತ ಮಟ್ಟದ ಅರ್ಥಶಾಸ್ತ್ರಮತ್ತು ಸಮಾಜ ವಿಜ್ಞಾನಗಳ ಅಧ್ಯಯನಕ್ಕೆ ಸಂಸ್ಥೆಯಲ್ಲಿ ಅವಕಾಶ.‌

250 ಕೋಟಿ ರೂ ಗಳನ್ನು ವಿನಿಯೋಗಿಸಲಾಗಿದೆ..

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿರುವ ಬೇಸ್

01:48 PM (IST) Jun 20

ಹಲವು ಕಾಮಗಾರಿಗಳ ಉದ್ಘಾಟನೆ

ಕೊಮ್ಮಘಟ್ಟದಲ್ಲಿ  ಪ್ರಧಾನಿ ಮೋದಿಯಿಂದ ವರ್ಚುವಲ್​ ಉದ್ಘಾಟನೆ
ಹಲವು ರೈಲ್ವೆ ಯೋಜನೆಗಳನ್ನು ಪ್ರಧಾನಿ ಮೋದಿ ಲೋಕಾರ್ಪಣೆ
ಸಂಪೂರ್ಣ ವಿದ್ಯುದೀಕರಣಗೊಂದ ಕೊಂಕಣ್​ ರೈಲು ಮಾರ್ಗ
1.287  ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡ ಕೊಂಕಣ ರೈಲ್ವೆ

ಬೈಯಪ್ಪನಹಳ್ಳಿಯ ಸರ್​. ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್​​
ದಕ್ಷಿಣ ಭಾರತದ ಮೊದಲ  ಏರ್​ಕಂಡೀಶನ್ಡ್​​ ರೈಲ್ವೆ ನಿಲ್ದಾಣ ಉದ್ಘಾಟನೆ
314 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡಿರುವ ರೈಲ್ವೆ ನಿಲ್ದಾಣ

ಅರಸೀಕೆರೆ-ತುಮಕೂರು ಜೋಡಿ ರೈಲು ಮಾರ್ಗದ ಉದ್ಘಾಟನೆ
ಯಲಹಂಕ-ಪೆನುಕೊಂಡ ಜೋಡಿ ರೈಲುಮಾರ್ಗದ ಲೋಕಾರ್ಪಣೆ
ಹೊಸ ರೈಲು ಸೇವೆಗಳಿಗೂ ಚಾಲನೆ ನೀಡಲಿರುವ ಪ್ರಧಾನಿ ಮೋದಿ

ಬೆಂಗಳೂರು ಸಬ್​​ಅರ್ಬನ್​ ರೈಲು ಯೋಜನೆಗೆ ಶಂಕು ಸ್ಥಾಪನೆ
470 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಕಂಟೋನ್ಮೆಂಟ್​​ ನಿಲ್ದಾಣ 
400 ಕೋಟಿ ರೂ. ವೆಚ್ಚದಲ್ಲಿ ಯಶವಂತಪುರ ನಿಲ್ದಾಣಗಳ ಪುನರಾಭಿವೃದ್ಧಿ

5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ
ಬೆಂಗಳೂರು ಮಲ್ಟಿಮೋಡಲ್​ ಲಾಜಿಸ್ಟಿಕ್ಸ್​​ ಪಾರ್ಕ್​ಗೆ ಶಂಕು
ಒಟ್ಟು 7,231 ಕೋಟಿ ರೂ ವೆಚ್ಚದ ಕಾಮಗಾರಿ ಚಾಲನೆ ನೀಡಲಿರುವ ಮೋದಿ

01:39 PM (IST) Jun 20

ಶೇ.40 ಕಮಿಷನ್ ದೂರು ಕೊಟ್ಟರೂ ಕ್ಯಾರೇ ಎನ್ನದ ಮೋದಿ: ಸಿದ್ದರಾಮಯ್ಯ

40% ಕಮೀಷನ್ ಬಗ್ಗೆ ದೂರು ಕೊಟ್ರು. ಗುತ್ತಿಗೆದಾರರ ಸಂಘ ಪ್ರಧಾನಿಗೆ ದೂರು ನೀಡಿತ್ತು. ಯಾಕೆ‌ ಚೌಕಿದಾರ್ ಇಲ್ಲಿಯವರೆಗೆ ಉತ್ತರ ಕೊಟ್ಟಿಲ್ಲ. ಸಬ್ ಅರ್ಬನ್ ಯೋಜನೆ ಹೇಳುತ್ತಲೇ ಬರ್ತಿದ್ದಾರೆ. ಅನಂತ್ ಕುಮಾರ್ ಕಾಲದಿಂದ ಹೇಳ್ತಿದ್ದಾರೆ, ಆದರೆ ಯೋಜನೆ ಮಾತ್ರ ಏನೂ ಆಗಿಲ್ಲ. ಮೋದಿಯವರಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. ಅವರ ಸರ್ಕಾರ ಕರ್ನಾಟಕದಲ್ಲಿದೆ. ಲೂಟಿ ಹೊಡೆಯುತ್ತಿದೆ, ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆಲ್ಲ ಪ್ರಧಾನಿಯವರು ಅನುಮತಿ ಕೊಟ್ಟಿದ್ದಾರಾ?

 

01:36 PM (IST) Jun 20

ಪ್ರವಾಹ ಬಂದಾಗ ಬಾರದ ಮೋದಿ, ಯೋಗ ಮಾಡಲು ಬಂದಿದ್ದಾರೆ: ಸಿದ್ದರಾಮಯ್ಯ

ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ. ರಾಜ್ಯದಲ್ಲಿ ಬಾರಿ ಪ್ರವಾಹ ಬಂದಾಗ, ಪ್ರಧಾನಿಯವರು ಇಲ್ಲಿಗೆ ಬರಲಿಲ್ಲ. ರಾಜ್ಯಕ್ಕೆ ವಿಶೇಷ ಅನುದಾನ ಕೊಡಲಿಲ್ಲ. ಈಗ ಅವರಿಗೆ ರಾಜ್ಯದ ನೆನಪಾಗಿದೆ. ಮೈಸೂರು ಬ್ಯಾಂಕ್ ಸ್ಥಾಪನೆ ಮಾಡಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್. ಈಗ ಮೈಸೂರು ಬ್ಯಾಂಕ್ ಇದ್ಯಾ..? ಕೆನರಾ, ಸಿಂಡಿಕೇಟ್, ವಿಜಯಾ ಬ್ಯಾಂಕ್ ಇದ್ಯಾ? ಈ ನಾಲ್ಕೂ ಬ್ಯಾಂಕುಗಳನ್ನ ಬೇರೆ ಬ್ಯಾಂಕ್ ಸೇರಿಸಿದ್ದಾರೆ. 317 ಕೋಟಿ ವಹಿವಾಟು ನಡೆಯುತ್ತೆ. 75 ಸಾವಿರ ಸಿಬ್ಬಂದಿಗಳು ಇಲ್ಲಿದ್ದಾರೆ. ಈ ನಾಲ್ಕು ಬ್ಯಾಂಕ್ ಕನ್ನಡಿಗರಿಗೆ ಕೆಲಸ ಕೊಡ್ತಿದ್ವು. ಈಗ ಕನ್ನಡಿಗರಿಗೆ ಉದ್ಯೋಗ ಕೊಡ್ತಿಲ್ಲ. ಬೇರೆ ಬ್ಯಾಂಕ್ ಗಳು ದಿವಾಳಿಯಾಗಿದ್ದವು. ಅವುಗಳಿಗೆ ಈ ಬ್ಯಾಂಕ್ ಮರ್ಜ್ ಮಾಡಿದ್ದಾರೆ. ಮರ್ಜ್ ಮಾಡೋದಕ್ಕೆ ಕಾರಣವೇನು? ಕರ್ನಾಟಕಕ್ಕೆ ಮಾಡಿರುವ ದೊಡ್ಡ ಅನ್ಯಾಯವಾಗಿದೆ. ಈ ಅನ್ಯಾಯ ಮಾಡಿದ್ದು ಮಿಸ್ಟರ್ ನರೇಂದ್ರ ಮೋದಿ. ಆಕ್ಸಿಜನ್ ಕೊಡೋಕೆ‌ ಆಗದವರು, ಈಗ ಯೋಗ ಮಾಡೋಕೆ ಬಂದಿದ್ದಾರೆ. ಆಕ್ಸಿಜನ್ ಬಗ್ಗೆ ಪ್ರದಾನಿಯವರು ಹೇಳಬೇಕು.

 

 

01:25 PM (IST) Jun 20

ಮೋದಿಗೆ ಎಸ್.ಎಲ್.ಭೈರಪ್ಪ ಅವರ ಮಂದ್ರ ಕಾದಂಬರಿ ನೀಡಿದ ಸಿಎಂ

ಪ್ರಧಾನಿ ಮೋದಿ ಎರಡು ದಿನಗಳ ಪ್ರವಾಸಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದು. ಇಂದು ಬೆಂಗಳೂರಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ.  ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ರಾಜ್ಯಪಾಲರಾದ ಗೆಹ್ಲೋಟ್ ಅವರೊಂದಿಗೆ ಮೋದಿಯನ್ನು ಸ್ವಾಗತಿಸಿದ ಸಿಎಂ ಬೊಮ್ಮಾಯಿ ಖ್ಯಾತ ಲೇಖಕ ಎಸ್.ಎಲ್.ಭೈರಪ್ಪ ಅವರ ಮಂದ್ರ ಕಾದಂಬರಿಯನ್ನು ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ. 

 



 

01:09 PM (IST) Jun 20

ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಕಡೆ ಹೊರಟ ಮೋದಿ

ಮೇಖ್ರಿ ಸರ್ಕಲ್‌ ಏರ್‌ಫೋರ್ಸ್‌ ಟ್ರೈನಿಂಗ್‌ ಪ್ರದೇಶದಿಂದ ಕೊಮ್ಮಘಟ್ಟಕ್ಕೆ ಹೊರಟ ಪ್ರಧಾನಿ ಮೋದಿ. ಅಲ್ಲಿ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಉದ್ಘಾಟನೆ ಮಾಡಲಿದ್ದಾರೆ.

01:03 PM (IST) Jun 20

ಮರಳಿ ಯಲಹಂಕ ಏರ್‌ಬೇಸ್‌ನತ್ತ ಮೋದಿ

ಐಐಎಸ್‌ಸಿ ಮೆದುಳು ಸಂಶೋಧನಾ ಕೇಂದ್ರ ಉದ್ಘಾಟನೆಯ ನಂತರ ಅಂಬೇಡ್ಕರ್‌ ಪುತ್ಥಳಿ ಅನಾವರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಮತ್ತೆ ಯಲಹಂಕ ಏರ್‌ಬೇಸ್‌ಗೆ ವಾಪಸಾಗುತ್ತಿದ್ದಾರೆ. ಅಲ್ಲಿಂದ ಕೊಮ್ಮಘಟ್ಟಕ್ಕೆ ಮತ್ತೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಕೊಮ್ಮಘಟ್ಟದಿಂದ ನಂತರ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ರಸ್ತೆ ಮಾರ್ಗವಾಗಿ ತೆರಳಲಿದ್ದಾರೆ. 

12:59 PM (IST) Jun 20

ಪ್ರಧಾನಿಗೆ ಬೆಳ್ಳಿ ಕಾಮಧೇನು ಉಡುಗೊರೆ

ಕೊಮ್ಮಘಟ್ಟ ಕಾರ್ಯಕ್ರಮದಲ್ಲಿ ಪಿಎಂ ಮೋದಿಗೆ ಬೆಳ್ಳಿಯ ಕಾಮಧೇನು ಉಡುಗೊರೆಯಾಗಿ ನೀಡಲಿರುವ ರಾಜ್ಯ ಸರ್ಕಾರ. 

12:51 PM (IST) Jun 20

IISC ತಲುಪಿದ ಮೋದಿ, ಮೆದುಳು ಸಂಶೋಧನಾ ಕೇಂದ್ರದ ಉದ್ಘಾಟನೆ

ಮೆದುಳು ಸಂಶೋಧನಾ ಕೇಂದ್ರದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ IISCಗೆ ಬಂದು ತಲುಪಿದ್ದಾರೆ. ಸಾವಿರಾರು ಕಾರ್ಯಕರ್ತರು ಮೋದಿ ದರ್ಶನಕ್ಕಾಗಿ ನೆರೆದಿದ್ದು, ಎಲ್ಲರಿಗೂ ಕೈಬೀಸಿ, ನಮಸ್ಕರಿಸಿ ಮೋದಿ ಒಳಗೆ ಹೋದರು. ನಂತರ ಉದ್ಘಾಟನೆ ಮಾಡಿದ್ದಾರೆ.

12:45 PM (IST) Jun 20

ಮಾಜಿ ಸಿಎಂ ಬಿಎಸ್‌ವೈ ಜೊತೆ ಮೋದಿ ಪ್ರತ್ಯೇಕ ಮಾತುಕತೆ

ಮಾಜಿ ಪ್ರಧಾನಿ ಬಿಎಸ್‌ ಯಡಿಯೂರಪ್ಪ ಅವರ ಜೊತೆ ಮೂರು ನಿಮಿಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಪ್ರತ್ಯೇಕವಾಗಿ ಯಲಹಂಕ ಏರ್‌ಬೇಸ್‌ನಲ್ಲಿ ಮಾತನಾಡಿದರು. ಸ್ವಾಗತಿಸಲು ಬಂದಿದ್ದ ಬಿಎಸ್‌ವೈ ಅವರ ಜತೆ ಯಡಿಯೂರಪ್ಪ ಮಾತನಾಡಿದರು. ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್‌ವೈ ಕೆಳಗಿಳಿದ ನಂತರ ಇಬ್ಬರೂ ಭೇಟಿಯಾಗಿರಲಿಲ್ಲ. ಸುಮಾರು ಒಂದು ವರ್ಷದ ಬಳಿಕ ಇಬ್ಬರೂ ಪರಸ್ಪರ ಭೇಟಿಯಾಗಿದ್ದಾರೆ. 

12:34 PM (IST) Jun 20

ಮೂರು ಹೆಲಿಕಾಪ್ಟರ್‌ಗಳಲ್ಲಿ IISC ಕಡೆ ಹೊರಟ ಮೋದಿ, ಬಿಜೆಪಿ ನಾಯಕರು

ಯಲಹಂಕ ಏರ್‌ ಬೇಸ್‌ನಿಂದ ಮೇಖ್ರಿ ಸರ್ಕಲ್‌ ಟ್ರೈನಿಂಗ್‌ ಶಾಲೆಗೆ ಮೂರು ಹೆಲಿಕಾಪ್ಟರ್‌ ಮೂಲಕ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಪ್ರಯಾಣ ಆರಂಭಿಸಿದ್ದಾರೆ. ಅಲ್ಲಿಂದ IISCಗೆ ತೆರಳಲಿರುವ ಅವರು, ಮೆದುಳು ಸಂಶೋಧನಾ ಕೇಂದ್ರದ ಉದ್ಘಾಟನೆ ಮಾಡಲಿದ್ದಾರೆ. 

12:32 PM (IST) Jun 20

ಮೋದಿ ಸ್ವಾಗತಿಸಿದ ಬೊಮ್ಮಾಯಿ, ಯಡಿಯೂರಪ್ಪ ಮತ್ತು ರಾಜ್ಯಪಾಲ ಗೆಹ್ಲೋಟ್‌

ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌

12:26 PM (IST) Jun 20

ಪ್ರಧಾನಿ ಮೋದಿ ಆಗಮನ, ನಗರಾದ್ಯಂತ ಟ್ರಾಫಿಕ್‌ ಜಾಮ್‌

ಪ್ರಧಾನಿ ಮೋದಿ ಆಗಮನದ ಬೆನ್ನಲ್ಲೇ ನಗರದ ಹೆಬ್ಬಾಳ, ಯಶವಂತಪುರ, ಏರ್‌ಪೋರ್ಟ್‌ ರಸ್ತೆ ಸೇರಿದಂತೆ ಹಲವಾರು ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಆಗಿದೆ. 

12:20 PM (IST) Jun 20

ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆ

ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಪ್ರಶ್ನೆಗಳನ್ನು ಪ್ರಧಾನಿಗೆ ಕೇಳಿದ್ದಾರೆ. 

 

12:10 PM (IST) Jun 20

ಪ್ರಧಾನಿ ಮೋದಿ ಸ್ವಾಗತಿಸಿದ ಮುಖ್ಯಮಂತ್ರಿ ಬೊಮ್ಮಾಯಿ

ಯಲಹಂಕ ಏರ್‌ ಬೇಸ್‌ಗೆ ಬಂದಿಳಿದ ಪ್ರಧಾನಿ ಮೋದಿಯವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಸಚಿವ ವಿ ಸೋಮಣ್ಣ ಸೇರಿದಂತೆ ಕೆಲವು ಗಣ್ಯರು ಜತೆಗಿದ್ದರು. ಇಲ್ಲಿಂದ ಪ್ರಧಾನಿ ಮೋದಿ ಕೊಮ್ಮಘಟ್ಟಕ್ಕೆ ಹೋಗಲಿದ್ದಾರೆ.

12:04 PM (IST) Jun 20

ಬೆಂಗಳೂರು ತಲುಪಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಈಗತಾನೆ ಬೆಂಗಳೂರು ಯಲಹಂಕ ಏರ್‌ ಬೇಸ್‌ಗೆ ಆಗಮಿಸಿದ್ದಾರೆ. 

11:39 AM (IST) Jun 20

ಮೋದಿ ಕಾರ್ಯಕ್ರಮಕ್ಕೆ ಕೇವಲ 11 ಮಂದಿಗೆ ಅವಕಾಶ

ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟನೆ ಕಾರ್ಯಕ್ರಮಕ್ಕೆ 11 ಗಣ್ಯರಿಗೆ ಮಾತ್ರ ಅವಕಾಶ ಮಾಡಲಾಗಿದೆ. 

ಪ್ರಧಾನಿ ಮೋದಿಗೆ ಸ್ವಾಗತ ಮತ್ತು ಬೀಳ್ಕೊಡುಗೆಗೆ ಗಣ್ಯರ ನಿಯೋಜನೆ:

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ 

ಸಿಎಂ ಬಸವರಾಜ ಬೊಮ್ಮಾಯಿ, 

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ

ಸಚಿವ ಕೋಟ ಶ್ರೀನಿವಾಸ್ ಪೂಜಾರಿ

ಶ್ರೀರಾಮುಲು

ಸುನೀಲ್ ಕುಮಾರ್

ವಿ. ಸೋಮಣ್ಣ

ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ 

ಕೌಶಲ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್

ಪ್ರೊ. ಎನ್.ಆರ್ ಭಾನುಮೂರ್ತಿ, ವಿಸಿ BASE

11:29 AM (IST) Jun 20

1.30ಕ್ಕೆ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಉದ್ಘಾಟನೆ

ಪ್ರಧಾನಿ ಮೋದಿ ಅವ್ರಿಂದ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟನೆ ಹಿನ್ನಲೆ, ಬೇಸ್ ಕ್ಯಾಂಪಸ್ ನಲ್ಲಿ ‌ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಹಿರಿಯ ಪೊಲೀಸ್ ‌ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. 1.30ಕ್ಕೆ ಬೇಸ್ ಕ್ಯಾಂಪಸ್ ಗೆ ಆಗಮಿಸಲಿರೋ ಮೋದಿ, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕ್ಯಾಂಪಸ್ ಉದ್ಘಾಟನೆ ಮಾಡಲಿದ್ದಾರೆ. ನಂತರ ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಲಿದ್ದಾರೆ. 150 ಉನ್ನತೀಕಿಸಿದ  ITI ಕಾಲೇಜುಗಳ ಉದ್ಘಾಟನೆಯನ್ನೂ ಮೋದಿ ಮಾಡಲಿದ್ದಾರೆ. ಸುಮಾರು 200-250 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರೋ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್. ಕಾರ್ಯಕ್ರಮಕ್ಕೆ ಆಗಮಿಸುತ್ತಿರೋ ಸಿಬ್ಬಂದಿಗಳ ಥರ್ಮಲ್ ಸ್ಕ್ಯಾನಿಂಗ್ ಮತ್ತು ಆಕ್ಸಿಜನ್ ಚೆಕ್ ಮಾಡಿ ಒಳಗೆ ಬಿಡಲಾಗ್ತಿದೆ. ಆಯ್ದ ಗಣ್ಯರು, ಆಹ್ವಾನಿತರಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗಿದೆ.

11:28 AM (IST) Jun 20

ಪ್ರಧಾನಿ ಮೋದಿ ಸ್ವಾಗತಕ್ಕೆ ಯಲಹಂಕಾ ಏರ್‌ಫೋರ್ಸ್‌ ತಲುಪಿದ ಬೊಮ್ಮಾಯಿ

ಯಲಹಂಕ ಏರ್ ಫೋರ್ಸ್ಗೆ ಆಗಮಿಸಿದ ಸಿಎಂ: ಸಿಎಂ ಬಸವರಾಜ್ ಬೊಮ್ಮಾಯಿಗೆ ಸಾಥ್ ನೀಡಿದ ಸಿಟಿ ರವಿ, ಆರ್ ಅಶೋಕ್, ಎಸ್ ಟಿಎಸ್, ಅರಗ ಜ್ಞಾನೇಂದ್ರ. ಇನ್ನು ಕೆಲವೇ ನಿಮಿಷಗಳಲ್ಲಿ ಪ್ರಧಾನಿ ಮೋದಿಯವರು ಬಂದಿಳಿಯಲಿದ್ದಾರೆ.

11:28 AM (IST) Jun 20

ಪ್ರಧಾನಿ ಮೋದಿ ಸ್ವಾಗತಕ್ಕೆ ಯಲಹಂಕಾ ಏರ್‌ಫೋರ್ಸ್‌ ತಲುಪಿದ ಬೊಮ್ಮಾಯಿ

ಯಲಹಂಕ ಏರ್ ಫೋರ್ಸ್ಗೆ ಆಗಮಿಸಿದ ಸಿಎಂ: ಸಿಎಂ ಬಸವರಾಜ್ ಬೊಮ್ಮಾಯಿಗೆ ಸಾಥ್ ನೀಡಿದ ಸಿಟಿ ರವಿ, ಆರ್ ಅಶೋಕ್, ಎಸ್ ಟಿಎಸ್, ಅರಗ ಜ್ಞಾನೇಂದ್ರ. ಇನ್ನು ಕೆಲವೇ ನಿಮಿಷಗಳಲ್ಲಿ ಪ್ರಧಾನಿ ಮೋದಿಯವರು ಬಂದಿಳಿಯಲಿದ್ದಾರೆ.

10:54 AM (IST) Jun 20

ಕನ್ನಡದಲ್ಲಿ ಮೋದಿ ಟ್ವೀಟ್‌

ಕರ್ನಾಟಕದ ಪ್ರವಾಸ ಕುರಿತು ಕನ್ನಡದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ. ಎರಡು ದಿನಗಳ ಸಂಪೂರ್ಣ ಕಾರ್ಯಕ್ರಮಗಳ ಬಗ್ಗೆ ಮೋದಿ ಟ್ವೀಟ್‌ ಮಾಡಿದ್ದಾರೆ. 

 

 

10:49 AM (IST) Jun 20

ಪ್ರಧಾನಿ ಹಾದುಹೋಗುವ ರಸ್ತೆಯ ಶಾಲಾ-ಕಾಲೇಜುಗಳಿಗೆ ರಜೆ

ಪಿಎಂ ಮೋದಿ ಆಗಮನ ಹಿನ್ನೆಲೆಯಲ್ಲಿ ಮೋದಿ ಸಾಗುವ ರಸ್ತೆಗಳಲ್ಲಿರುವ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೆದುಳು ಸಂಶೋಧನಾ ಕೇಂದ್ರಕ್ಕೆ ಮೋದಿ ಆಗಮನದ ಹಿನ್ನೆಲೆಯಲ್ಲಿ ಮೇಕ್ರಿ ವೃತ್ತದಿಂದ ಸದಾಶಿವ ನಗರದ ಸಿಗ್ನಲ್ ಬಳಿ ಇರುವ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕೇಂದ್ರೀಯ ವಿದ್ಯಾಲಯ, ಏರ್ ಫೋರ್ಸ್ ಶಾಲೆ ಮತ್ತು ಹೆಚ್ ಕೆ ಇ ಕಾಲೇಜುಗಳು ಸಂಪೂರ್ಣ ಬಂದ್ ಮಾಡಲಾಗಿದೆ.

10:47 AM (IST) Jun 20

11.55ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ

11.55 ಕ್ಕೆ ಯಲಹಂಕ ವಾಯುನೆಲೆಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಯಲಹಂಕ ವಾಯುನೆಲೆಯಿಂದ ಕೆಲಿಕಾಪ್ಟರ್‌ ಮೂಲಕ ಮೇಕ್ರಿ ಸರ್ಕಲ್ ಬಳಿಯ ಇಂಡಿಯನ್ ಏರ್ ಪೋರ್ಸ್ ಟ್ರೈನಿಂಗ್ ಹೆಲಿಪ್ಯಾಡ್ ಗೆ ಹೋಗಲಿದ್ದಾರೆ. ಇಂಡಿಯನ್ ಏರ್ ಪೂರ್ಸ್ ಟ್ರೈನಿಂಗ್ ಹೆಲಿಪ್ಯಾಡ್ ನಿಂದ ರಸ್ತೆ ಮೂಲಕ ಭಾರತೀಯ ವಿಜ್ಞಾನ ಸಂಸ್ಥೆ ಗೆ ಭೇಟಿ ನೀಡುತ್ತಾರೆ. ಬಳಿಕ ಅಲ್ಲಿಂದ ರಸ್ತೆ ಮೂಲಕ ಇಂಡಿಯನ್ ಏರಪೋರ್ಸ್ ಟ್ರೈನಿಂಗ್ ಹೆಲಿಪ್ಯಾಡ್ ಗೆ ಅಗಮನ. ಅಲ್ಲಿಂದ ಚಾಪರ್ ಮೂಲಕ ಕೊಮ್ಮಘಟ್ಟಗೆ ತೆರಳಲಿದ್ದಾರೆ. ಕೊಮ್ಮಘಟ್ಟದಿಂದ ರಸ್ತೆ ಮಾರ್ಗವಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ ಕೊಡಲಿದ್ದಾರೆ.

10:44 AM (IST) Jun 20

ಮೋದಿ ಉದ್ಘಾಟಿಸುತ್ತಿರುವ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಕಾಂಗ್ರೆಸ್‌ ಸರ್ಕಾರದ ಯೋಜನೆ: ಸಿದ್ದರಾಮಯ್ಯ

ಪ್ರಧಾನಿ ಮೋದಿ ಇಂದು ಉದ್ಘಾಟಿಸಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್  ನೂತನ ಕಟ್ಟಡ ನಮ್ಮ‌ ಸರ್ಕಾರದ ಹೆಮ್ಮೆಯ ಯೋಜನೆ ಎಂದು ಟ್ವೀಟ್ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಯೋಜನೆಗೆ ತಮ್ಮ ಸರ್ಕಾರ ಬಿಡುಗಡೆ ಮಾಡಿದ್ದ ಹಣ ಹಾಗೂ ಜಾಗದ ಬಗ್ಗೆಯು ಟ್ವೀಟ್ ನಲ್ಲಿ ಪ್ರಸ್ತಾಪ. ಟ್ವೀಟ್ ನಲ್ಲೆ ಪ್ರಧಾನಿ ಮೋದಿಗೆ ಶುಭ ಹಾರೈಸಿದ ಸಿದ್ದರಾಮಯ್ಯ

10:30 AM (IST) Jun 20

ಮೋದಿ ಭೇಟಿಗೆ ಭಾರೀ ಭದ್ರತೆ

ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ್‌’ ವಿರೋಧಿಸಿ ಕೆಲ ಸಂಘಟನೆಗಳು ‘ಭಾರತ್‌ ಬಂದ್‌’ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಕಾರ್ಯಕ್ರಮಗಳಿಗೆ ಮುಂಜಾಗ್ರತಾ ಕ್ರಮವಾಗಿ ಸುಮಾರು 10 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ದೆಹಲಿಯಿಂದ ಸೋಮವಾರ ಬೆಳಗ್ಗೆ 11.55ಕ್ಕೆ ಯಲಹಂಕ ವಾಯು ನೆಲೆಗೆ ಬಂದಿಳಿಯುವ ಪ್ರಧಾನ ಮಂತ್ರಿಗಳು, ಮಲ್ಲೇಶ್ವರದ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಡಾ| ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್‌ ಹಾಗೂ ಕೆಂಗೇರಿ ಸಮೀಪದ ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಗಳ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಪ್ರಧಾನಿಗೆ 10,000 ಪೊಲೀಸರ ಭಾರೀ ಭದ್ರತೆ: ಬೆಂಗಳೂರಿನ ಸಂಚಾರ ವ್ಯವಸ್ಥೆ ಬದಲಾವಣೆ, ಹೀಗಿದೆ ಪರ್ಯಾಯ ರಸ್ತೆ

10:29 AM (IST) Jun 20

ಮೋದಿ ಕಾರ್ಯಕ್ರಮದಿಂದ ಕೊರೋನಾ ಹಬ್ಬಲ್ವ?: ಸಿದ್ದರಾಮಯ್ಯ ಪ್ರಶ್ನೆ

ಕಾಂಗ್ರೆಸ್‌ನವರು ಸಭೆ​-ಸಮಾರಂಭ ಮಾಡಿದರೆ ಕೊರೋನಾ ಬರುತ್ತದೆ ಎಂದು ಬಿಜೆಪಿ ಸರ್ಕಾರ ಹೇಳುತ್ತದೆ. ಈಗ ಅವರೇ ಸಭೆ, ಸಮಾರಂಭ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಕೊರೋನಾ ಹಬ್ಬಲ್ವಾ? ಪ್ರಧಾನಿ ಮೋದಿ ಕಂಡು ಕೊರೋನಾ ಓಡಿ ಹೋಗುತ್ತಾ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮೋದಿ ಕಾರ್ಯಕ್ರಮದಲ್ಲಿ ಕೊರೋನಾ ಹಬ್ಬಲ್ವಾ?, ಪ್ರಧಾನಿ ಕಂಡು ವೈರಸ್‌ ಓಡಿ ಹೋಗುತ್ತಾ?: ಸಿದ್ದು

10:27 AM (IST) Jun 20

ಕರ್ನಾಟಕದಲ್ಲಿಂದು ಮೋದಿ ಹವಾ

ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಸೋಮವಾರ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರು ಒಟ್ಟು 20 ಗಂಟೆಗಳ ಅವಧಿಯಲ್ಲಿ ಬೆಂಗಳೂರು ಮತ್ತು ಮೈಸೂರಿನ 10 ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಒಟ್ಟು 27 ಸಾವಿರ ಕೋಟಿ ರು. ವೆಚ್ಚದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ನೆರವೇರಿಸಲಿದ್ದಾರೆ.

ಕರ್ನಾಟಕದಲ್ಲಿಂದು ಮೋದಿ ಹವಾ: ಒಂದೂವರೆ ವರ್ಷದ ಬಳಿಕ ರಾಜ್ಯಕ್ಕೆ ಆಗಮನ

10:26 AM (IST) Jun 20

ಒಂದೂವರೆ ವರ್ಷಗಳ ನಂತರ ರಾಜ್ಯಕ್ಕೆ ಮೋದಿ

ಪ್ರಧಾನಿ ನರೇಂದ್ರ ಮೋದಿ ಸತತ ಒಂದೂವರೆ ವರ್ಷಗಳ ನಂತರ ರಾಜ್ಯಕ್ಕೆ ಇಂದು ಭೇಟಿ ನೀಡಲಿದ್ದಾರೆ. ಇಂದು ಮತ್ತು ನಾಳೆ ರಾಜ್ಯ ಪ್ರವಾಸದಲ್ಲಿರುವ ಅವರು ಹವಲು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಜತೆಗೆ ಮುಖ್ಯವಾಗಿ ನಾಳೆ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಚರಿಸಲಿದ್ದಾರೆ. ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ರಾಣಿ ಪ್ರಮೋದಾದೇವಿ ಮತ್ತು ಯದುವೀರ್‌ ಅವರಿಗೂ ಆಮಂತ್ರಣ ನೀಡಲಾಗಿದೆ. 


More Trending News