ಮೋದಿಗೆ ಟ್ರಂಪ್ ಆಹ್ವಾನ: 25-26 ವಾಷಿಂಗ್ಟನ್’ಗೆ ಪ್ರಧಾನಿ

Published : Jun 12, 2017, 01:23 PM ISTUpdated : Apr 11, 2018, 12:41 PM IST
ಮೋದಿಗೆ ಟ್ರಂಪ್ ಆಹ್ವಾನ: 25-26 ವಾಷಿಂಗ್ಟನ್’ಗೆ ಪ್ರಧಾನಿ

ಸಾರಾಂಶ

ಕಳೆದ ಜನವರಿಯಲ್ಲಿ  ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಟ್ರಂಪ್’ರೊಂದಿಗೆ ಇದು ಪ್ರಧಾನಿ ಮೋದಿಯವರ ಪ್ರಥಮ ಭೇಟಿಯಾಗಲಿದೆ.  ಆದರೆ ಅವರಿಬ್ಬರು ಈವರೆಗೆ ಟೆಲಿಫೋನ್ ಮೂಲಕ ಮೂರು ಬಾರಿ ಸಂಭಾಷಣೆ ನಡೆಸಿದ್ದಾರೆ.

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಇದೇ ತಿಂಗಳ 25-26ಕ್ಕೆ ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ.

ಕಳೆದ ಜನವರಿಯಲ್ಲಿ  ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಟ್ರಂಪ್’ರೊಂದಿಗೆ ಇದು ಪ್ರಧಾನಿ ಮೋದಿಯವರ ಪ್ರಥಮ ಭೇಟಿಯಾಗಲಿದೆ.  ಆದರೆ ಅವರಿಬ್ಬರು ಈವರೆಗೆ ಟೆಲಿಫೋನ್ ಮೂಲಕ ಮೂರು ಬಾರಿ ಸಂಭಾಷಣೆ ನಡೆಸಿದ್ದಾರೆ.

ಭಾರತದ ಬಗ್ಗೆ ನಕಾರಾತ್ಮಕ ಹೇಳಿಕೆ ನೀಡಿ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಇತ್ತೀಚೆಗೆ ಅಮೆರಿಕಾ ಹೊರನಡೆದಿರುವ ಹಿನ್ನೆಲೆಯಲ್ಲಿ ಈ ಭೇಟಿಯು ಬಹಳ ಮಹತ್ವವನ್ನು ಪಡೆದುಕೊಂಡಿದೆ.

ಹವಾಮಾನ ಒಪ್ಪಂದ ಹೆಸರಿನಲ್ಲಿ ವಿದೇಶಿ ದೇಣಿಗೆಗಳ ಮೂಲಕ ಭಾರತ ಹಾಗೂ ಇತರ ಅಭಿವೃದ್ಧಿಶೀಲ ದೇಶಗಳು, ಅಭಿವೃದ್ಧಿ ಹೊಂದಿದ ದೇಶಗಳಿಂದ ಬಿಲಿಯನ್’ಗಟ್ಟಲೆ ಹಣವನ್ನು ವಸೂಲು ಮಾಡುತ್ತಿದ್ದಾರೆಂದು ಟ್ರಂಪ್ ಆರೋಪಿಸಿದ್ದರು.

ಇದಲ್ಲದೆ ಎಚ್-1ಬಿ ವೀಸಾ ಬಗ್ಗೆ ಅಮೆರಿಕಾ ತಳೆಯುತ್ತಿರುವ ಧೋರಣೆಯು ಭಾರತಕ್ಕೆ ಸವಾಲಾಗಿದ್ದು, ಆ ಬಗ್ಗೆಯೂ ಮಾತುಕತೆ ನಡೆಯುವ ಸಾದ್ಯತೆಗಳಿವೆ ಎನ್ನಲಾಗಿದೆ.

ಅಮೆರಿಕಾ ನಿಕಟಪೂರ್ವ ಅಧ್ಯಕ್ಷ  ಬರಾಕ್ ಒಬಾಮಾರೊಂದಿಗೆ ಪ್ರಧಾನಿ ಮೋದಿ 8 ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಲವ್ ಮಾಡು, ಇಲ್ಲಾಂದ್ರೆ ಸಾಯ್ತೀನಿ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಿರುಕುಳ ಕೊಟ್ಟ ಖತರ್ನಾಕ್ ಲೇಡಿ
ಸರ್ಕಾರಿ ನೇಮಕಾತಿ ವಿಳಂಬ: ಮನನೊಂದು ಧಾರವಾಡ ರೈಲು ಹಳಿಗೆ ಸಿಲುಕಿ ಯುವತಿ ದಾರುಣ ಸಾವು!