ವಿಶ್ವಸಮುದಾಯ ವೇದಿಕೆಗೆ ಒಬಾಮಾ ಗುಡ್‌ ಬೈ

Published : Nov 21, 2016, 04:32 PM ISTUpdated : Apr 11, 2018, 12:41 PM IST
ವಿಶ್ವಸಮುದಾಯ ವೇದಿಕೆಗೆ ಒಬಾಮಾ ಗುಡ್‌ ಬೈ

ಸಾರಾಂಶ

ಪೆರು ರಾಜಧಾನಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಅಮೆರಿಕದಲ್ಲಿ ಉದ್ಯೋಗವಕಾಶದ ಕೊರತೆ ಉಂಟಾದಾಗ ಕಠಿಣ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಜಾಗತಿಕ ಆರ್ಥಿಕತೆಯ ಲಾಭಾಂಶ  ವಿಶ್ವಸಮುದಾಯದೊಂದಿಗೆ ಹಂಚಿಕೆಯಾಗಬೇಕು ಎಂದು ಹೇಳಿದ್ದಾರೆ.

ಲಿಮಾ,ಪೆರು (ನ.21):  2008ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬರಾಕ್ ಒಬಾಮ ಸತತ 8 ವರ್ಷಗಳಿಂದ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಭಾನುವಾರ ಅಧಿಕೃತವಾಗಿ ವಿಶ್ವಸಮುದಾಯದ ವೇದಿಕೆಗೆ ಗುಡ್‌ ಬೈ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಪೆರು ದೇಶದಲ್ಲಿ ಅಂತಿಮ ವಿದೇಶ ಪ್ರವಾಸ ಪೂರ್ಣಗೊಳಿಸಿರುವ ಒಬಾಮ ವಿಶ್ವ ವೇದಿಕೆಗೆ ಅಂತಿಮವಾಗಿ ವಿದಾಯ ಹೇಳಿದ್ದಾರೆ. ಇದೇ ವೇಳೆ ಕಳೆದ 8 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ತಮ್ಮ ಜೀವನದಲ್ಲಿ ನಡೆದ ಕೆಲ ಮಹತ್ವದ ಅಂಶ ಹಂಚಿಕೊಂಡಿದ್ದಾರೆ.

ಪೆರು ರಾಜಧಾನಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಅಮೆರಿಕದಲ್ಲಿ ಉದ್ಯೋಗವಕಾಶದ ಕೊರತೆ ಉಂಟಾದಾಗ ಕಠಿಣ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಜಾಗತಿಕ ಆರ್ಥಿಕತೆಯ ಲಾಭಾಂಶ  ವಿಶ್ವಸಮುದಾಯದೊಂದಿಗೆ ಹಂಚಿಕೆಯಾಗಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್‌ ಬಗ್ಗೆ ಮಾತನಾಡಿ, ಅವರು ಹಾಗೂ ನನ್ನ ನಡುವೆ ಅನೇಕ ಭಿನ್ನಾಭಿಪ್ರಾಯಗಳಿವೆ ಅದರ ವಿರೋಧದ ನಡುವೆ ಸಹ ಏಷ್ಯಾ-ಫೆಸಿಫಿಕ್ ಒಪ್ಪಂದ ಜೀವಂತವಾಗಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

62 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಡೆಸಿ ಗೆದ್ದ 82ರ ವೃದ್ಧ
ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್‌ ನಬೀನ್‌ ನೇಮಕ: ರಾಜಕೀಯ ವಲಯದಲ್ಲಿ ಅಚ್ಚರಿ