ನೊಟು ನಿಷೇಧ: ಹೆಲಿಕಾಪ್ಟರ್​, ವಿಮಾನಗಳಲ್ಲಿ ಹಣ ರವಾನೆ

Published : Nov 21, 2016, 04:12 PM ISTUpdated : Apr 11, 2018, 12:36 PM IST
ನೊಟು ನಿಷೇಧ: ಹೆಲಿಕಾಪ್ಟರ್​, ವಿಮಾನಗಳಲ್ಲಿ ಹಣ ರವಾನೆ

ಸಾರಾಂಶ

ನೋಟು ಮುದ್ರಣದಿಂದ ತೊಡಗಿ ಅದನ್ನು ವಿತರಣ ಕೇಂದ್ರಗಳಿಗೆ ತಲುಪಿಸುವ ತನಕದ 21 ದಿನಗಳ ಸಾರಿಗೆ ಅವಧಿ ಇದೀಗ ಕೇವಲ ಆರು ದಿನಗಳಿಗೆ ಇಳಿದಿದೆ. ಮುಂದಿನ ದಿನಗಳಲ್ಲಿ ಈ ಅವಧಿಯನ್ನು ಇನ್ನೂ ಕಡಿತಗೊಳಿಸಲು ಸರಕಾರ ಉದ್ದೇಶಿಸಿದೆ

ನವದೆಹಲಿ  (ನ.21): 500 ರೂ. ಮತ್ತು 1,000 ರೂ. ಕರೆನ್ಸಿ ನೋಟುಗಳ ನಿಷೇಧದಿಂದ ದೇಶಾದ್ಯಂತ ಉಂಟಾಗಿರುವ ನಗದು ಹಣದ ತೀವ್ರ ಕೊರತೆಯನ್ನು ಸಮರೋಪಾದಿಯಲ್ಲಿ ನಿಭಾಯಿಸುವ ನಿಟ್ಟಿನಲ್ಲಿ ಸರಕಾರ ಇದೀಗ ಹೆಲಿಕಾಪ್ಟರ್‌ ಹಾಗೂ ವಾಯು ಪಡೆ ವಿಮಾನಗಳನ್ನು ಬಳಸಿಕೊಳ್ಳಲು ಮುಂದಾಗಿದೆ.

ಇದರಿಂದಾಗಿ ನೋಟು ಮುದ್ರಣದಿಂದ ತೊಡಗಿ ಅದನ್ನು ವಿತರಣ ಕೇಂದ್ರಗಳಿಗೆ ತಲುಪಿಸುವ ತನಕದ 21 ದಿನಗಳ ಸಾರಿಗೆ ಅವಧಿ ಇದೀಗ ಕೇವಲ ಆರು ದಿನಗಳಿಗೆ ಇಳಿದಿದೆ. ಮುಂದಿನ ದಿನಗಳಲ್ಲಿ ಈ ಅವಧಿಯನ್ನು ಇನ್ನೂ ಕಡಿತಗೊಳಿಸಲು ಸರಕಾರ ಉದ್ದೇಶಿಸಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.  

ದೇಶದ ನಗರ ಪ್ರದೇಶಗಳಲ್ಲೀಗ ಹೊಸ ನೋಟುಗಳ ಪರ್ಯಾಪ್ತ ಲಭ್ಯತೆಯು ಗಮನಾರ್ಹವಾಗಿ ಸುಧಾರಿಸಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಈಗಲೂ ನಗದು ಕೊರತೆ ಹಾಗೆಯೇ ಉಳಿದಿದೆ. ಅಂತೆಯೇ ಸರಕಾರ ಈಗ ಗ್ರಾಮೀಣ ಭಾಗಗಳಿಗೆ ಹೊಸ ನೋಟುಗಳ ಪೂರೈಕೆಗೆ ಆದ್ಯತೆ ನೀಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲೆಡೆ ಹೊಸ ನೋಟುಗಳ ಪರ್ಯಾಪ್ತ ಲಭ್ಯತೆಯು ಕಂಡುಬರಲಿದೆ; ನಗದು ಹಣ ಹಾಹಾಕಾರ ನಿವಾರಣೆಗೊಳ್ಳಲಿದೆ ಎಂದು ಸರಕಾರ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!