ಸರ್ಕಾರಿ ಕಾಮಗಾರಿಗಳಲ್ಲಿ ಎಸ್ಸಿ, ಎಸ್ಟಿಮೀಸಲಿಗೆ ಅಸ್ತು : ಶೇ.24.10 ಮೀಸಲು

Published : Jun 26, 2017, 05:47 PM ISTUpdated : Apr 11, 2018, 01:02 PM IST
ಸರ್ಕಾರಿ ಕಾಮಗಾರಿಗಳಲ್ಲಿ ಎಸ್ಸಿ, ಎಸ್ಟಿಮೀಸಲಿಗೆ ಅಸ್ತು : ಶೇ.24.10 ಮೀಸಲು

ಸಾರಾಂಶ

ಪರಿಶಿಷ್ಟಪಂಗಡಗಳಿಗೆ ಇರಿಸಬೇಕಾಗುತ್ತದೆ. ಇದಕ್ಕೆ ಅವಕಾಶ ಸಿಗಲೆಂದು 1999ರ ಕರ್ನಾಟಕ ಸಾರ್ವಜನಿಕ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರ ವಿಧೇಯಕ ಮಂಡಿಸಿತ್ತು. ಉಭಯ ಸದನಗಳಲ್ಲಿ ಒಪ್ಪಿಗೆಯೂ ಸಿಕ್ಕಿತ್ತು. ಸಣ್ಣ ಮೊತ್ತದ ಸರ್ಕಾರಿ ಸಿವಿಲ್‌ ಕಾಮಗಾರಿಗಳಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಪ್ರಾತಿನಿಧ್ಯ ಕಲ್ಪಿಸುವ (ಮೀಸಲು) ರಾಜ್ಯ ಸರ್ಕಾರದ ವಿಧೇಯಕವನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅನುಮೋದಿಸಿದ್ದಾರೆ.

ಬೆಂಗಳೂರು(ಜೂ.26):  ಸರ್ಕಾರ ಕಲ್ಪಿಸಲಿರುವ ಈ ಮೀಸಲು ಸೌಲಭ್ಯ ಕೇವಲ 50 ಲಕ್ಷ ಮೊತ್ತದ ಕಾಮಗಾರಿಗಳಿಗೆ ಮಾತ್ರ. ಈ ಮೊತ್ತದ ಕಾಮಗಾರಿಗಳ ಪೈಕಿ ಶೇ.24.10ರಷ್ಟುಕೆಲಸಗಳನ್ನು ಪರಿಶಿಷ್ಟಜಾತಿ, ಪಂಗಡಗಳಿಗೆ ಮೀಸಲಿಡಬೇಕಾಗುತ್ತದೆ. ಅಂದರೆ ಶೇ.24.10ರಷ್ಟುಕಾಮಗಾರಿಗಳಿಗೆ ದಲಿತ ಸಮುದಾಯವೇ ಟೆಂಡರ್‌ ಹಾಕಬೇಕಾಗುತ್ತದೆ. ಇದರಲ್ಲಿ ಶೇ.17.15ರಷ್ಟುಕಾಮಗಾರಿಗಳನ್ನು ಪರಿಶಿಷ್ಟಜಾತಿಗಳಿಗೇ ಮೀಸಲಿಡಬೇಕು. ಶೇ.6.95ರಷ್ಟುಕಾಮಗಾರಿಗಳನ್ನು ಪರಿಶಿಷ್ಟಪಂಗಡಗಳಿಗೆ ಇರಿಸಬೇಕಾಗುತ್ತದೆ.

ಇದಕ್ಕೆ ಅವಕಾಶ ಸಿಗಲೆಂದು 1999ರ ಕರ್ನಾಟಕ ಸಾರ್ವಜನಿಕ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರ ವಿಧೇಯಕ ಮಂಡಿಸಿತ್ತು. ಉಭಯ ಸದನಗಳಲ್ಲಿ ಒಪ್ಪಿಗೆಯೂ ಸಿಕ್ಕಿತ್ತು. ಸಣ್ಣ ಮೊತ್ತದ ಸರ್ಕಾರಿ ಸಿವಿಲ್‌ ಕಾಮಗಾರಿಗಳಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಪ್ರಾತಿನಿಧ್ಯ ಕಲ್ಪಿಸುವ (ಮೀಸಲು) ರಾಜ್ಯ ಸರ್ಕಾರದ ವಿಧೇಯಕವನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅನುಮೋದಿಸಿದ್ದಾರೆ.
ಸರ್ಕಾರ ಕೈಗೊಳ್ಳುವ .50 ಲಕ್ಷ ಮೌಲ್ಯದ ಒಳಗಿನ ಕಾಮಗಾರಿಗಳಲ್ಲಿ ಪರಿಶಿಷ್ಟಜಾತಿ, ಪಂಗಡಗಳ ಗುತ್ತಿಗೆದಾರರಿಗೆ ಅವಕಾಶ ಕಲ್ಪಿಸಿಕೊಡಲು ಸರ್ಕಾರ ರೂಪಿಸಿದ್ದ ವಿಧೇಯಕವನ್ನು ರಾಜ್ಯಪಾಲರ ವಿ.ಆರ್‌.ವಾಲ ತಿರಸ್ಕರಿಸಿದ್ದರು. ಸರ್ಕಾರ ಎರಡನೇ ಬಾರಿ ಕಳುಹಿಸಿದಾಗ ರಾಜ್ಯಪಾಲರು ರಾಷ್ಟ್ರಪತಿ ಅವರ ಒಪ್ಪಿಗೆಗೆ ಕಳುಹಿಸಿದ್ದರು. ಈಗ ರಾಷ್ಟ್ರಪತಿಯವರು ಈ ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಬರಿಮಲೆ ದೇಗುಲದ ಬಂಗಾರ ಕಳವು ಪ್ರಕರಣ, ಬಳ್ಳಾರಿ ಚಿನ್ನದ ವ್ಯಾಪಾರಿ ಗೋವರ್ಧನ್ ಕೇರಳದಲ್ಲಿ ಬಂಧನ!
ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಬಿ. ನಾಗೇಂದ್ರನ ₹8 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ!