ರಾಮದಾಸ್ ಮನೆ ಮುಂದೆ ಆತ್ಮಹತ್ಯೆಗೆ ಪ್ರೇಮಕುಮಾರಿ ಯತ್ನ!

Published : Jul 21, 2018, 07:35 PM IST
ರಾಮದಾಸ್ ಮನೆ ಮುಂದೆ ಆತ್ಮಹತ್ಯೆಗೆ ಪ್ರೇಮಕುಮಾರಿ ಯತ್ನ!

ಸಾರಾಂಶ

ರಾಮದಾಸ್ ಮನೆ ಮುಂದೆ ಆತ್ಮಹತ್ಯೆಗೆ ಪ್ರೇಮಾ ಯತ್ನ ವೇಲ್​ನಿಂದ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನ ಮನೆ ಮುಂದೆ ನೆಲಕ್ಕುರುಳಿ ಗೋಳಾಡಿದ ಪ್ರೇಮಕುಮಾರಿ ಚುನಾವಣೆ ಸಂದರ್ಭ ನೀಡಿದ್ದ ಮಾತು ತಪ್ಪಿದ ರಾಮದಾಸ್​? ಪೊಲೀಸರ ಮನವೊಲಿಕೆಗೆ ಬಗ್ಗದ ಪ್ರೇಮಕುಮಾರಿ ವಿದ್ಯಾರಣ್ಯಪುರಂ ಪೊಲೀಸರ ವಶದಲ್ಲಿರುವ ಪ್ರೇಮಕುಮಾರಿ 

ಮೈಸೂರು(ಜು.21): ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಅವರ ಮನೆ ಮುಂದೆ ಇಂದು ಹೈಡ್ರಾಮಾ ನಡೆದಿದೆ.  ಶಾಸಕ ಎಸ್​.ಎ. ರಾಮದಾಸ್​ ಮನೆ ಮುಂದೆ ಈವತ್ತು ಪ್ರೇಮಕುಮಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆ ಯತ್ನ ತಡೆಯಲು ಹೋದಾಗ ರಾಮದಾಸ್ ಮನೆ ಮುಂದೆ ನೆಲಕ್ಕುರುಳಿ ಗೋಳಾಡಿದ ಪ್ರೇಮಕುಮಾರಿ, ರಾಮದಾಸ್​ ನಂಬಿಕೆ ದ್ರೋಹ ಮಾಡುತ್ತಿದ್ದಾರೆ ಅಂತಾ ಗೋಳಾಡಿದ್ದಾರೆ.

ನಾನು ಈವತ್ತು ಯಾವ ಕಾರಣಕ್ಕೂ ಬದುಕುವುದಿಲ್ಲ, ನನ್ನನ್ನು ಸಾಯಲು ಬಿಡಿ ಅಂತಾ ಪೊಲೀಸರ ಮುಂದೆ ಅಂಗಲಾಚಿದ್ದಾರೆ. ನಾಲ್ಕು ದಿನಗಳ ಹಿಂದೆ ಪ್ರೇಮಕುಮಾರಿ ತಾಯಿ ಲೀಲಾವತಿ ಮೇಲೆ ರಾಮದಾಸ್​ ಬೆಂಬಲಿಗರು ಹಲ್ಲೆ ಮಾಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಕೆ.ಆರ್​. ಕ್ಷೇತ್ರದಿಂದ ಕಣಕ್ಕಿಳಿಯಲು ಪ್ರೇಮಕುಮಾರಿ ಸಿದ್ಧತೆ ನಡೆಸಿದ್ದರು. 

ಆಗ ಸುವರ್ಣಮ್ಮ ಎಂ ಮಧ್ಯವರ್ತಿ ಮೂಲಕ ಪ್ರೇಮಕುಮಾರಿಯನ್ನು ಸಂಪರ್ಕಿಸಿದ್ದ ರಾಮದಾಸ್​, ಚುನಾವಣೆ ಮುಗಿದ ಮೇಲೆ ಸಮಾಜದ ಎದುರು ನಿನ್ನನ್ನು ಪತ್ನಿಯನ್ನಾಗಿ ಸ್ವೀಕರಿಸುತ್ತೇನೆಂದು ವಾಗ್ದಾನ ಮಾಡಿದ್ದರೆಂಬುದು ಪ್ರೇಮಕುಮಾರಿ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ನಡೆದ ಮಾತುಕತೆಯ ಆಡಿಯೋವನ್ನು ಕೂಡ ಅವರು ರಿಲೀಸ್ ಮಾಡಿದ್ದರು. 

ಈವತ್ತು ವೇಲ್​​ನಿಂದ ಕುತ್ತಿಗೆ ಬಿಗಿದುಕೊಳ್ಳಲು ಹೋದ ಅವರನ್ನು ಪೊಲೀಸರ ತಡೆದು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಪೊಲೀಸರ ಮನವೊಲಿಕೆಗೆ ಪ್ರೇಮಕುಮಾರಿ ಒಪ್ಪುತ್ತಿಲ್ಲ. ಬಿಡುಗಡೆ ಮಾಡಿದರೆ ಮತ್ತೆ ಅವರ ನಿವಾಸದ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆ ಹಾಕುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?