ಗರ್ಭಾವಸ್ಥೆಯ ಬಗೆಗಿನ ಗೊಂದಲಗಳಿಗೆ ಇಲ್ಲಿದೆ ಪರಿಹಾರ..!

Published : Jan 12, 2018, 03:54 PM ISTUpdated : Apr 11, 2018, 12:45 PM IST
ಗರ್ಭಾವಸ್ಥೆಯ ಬಗೆಗಿನ ಗೊಂದಲಗಳಿಗೆ ಇಲ್ಲಿದೆ ಪರಿಹಾರ..!

ಸಾರಾಂಶ

ಓರ್ವ ಮಹಿಳೆ ಗರ್ಭಿಣಿಯಾದಾಗ ಏನು ಮಾಡಬೇಕು, ಏನು ಮಾಡಬಾರದು ಎನ್ನುವುದರ ಬಗ್ಗೆ ಹಲವು ರೀತಿಯ ಮಾತುಗಳು ಕೇಳಿಬರುತ್ತಲೇ ಇರುತ್ತವೆ.  ಅದರಲ್ಲಿ ಒಬ್ಬೊಬ್ಬರ ಮಾತುಗಳು ಒಂದೊಂದು ರೀತಿಯಾಗಿರುತ್ತದೆ. ಅನೇಕ ಪುಸ್ತಕ, ಮ್ಯಾಗಜಿನ್’ಗಳಲ್ಲಿಯೂ ಕೂಡ ಈ ಬಗ್ಗೆ ಸಾಕಷ್ಟು ರೀತಿಯ ವಿಚಾರಗಳನ್ನು ತಿಳಿಸಲಾಗುತ್ತದೆ. ಆದರೆ ಅದರಲ್ಲಿ ಯಾವುದು ನಿಜ, ಯಾವುದು ಅಲ್ಲ ಎನ್ನುವ ಗೊಂದಲಗಳು ಸಾಮಾನ್ಯ. ಇಂತಹ ಕೆಲ ಗೊಂದಲಗಳಿಗೆ ಇಲ್ಲಿದೆ ಪರಿಹಾರ

ಓರ್ವ ಮಹಿಳೆ ಗರ್ಭಿಣಿಯಾದಾಗ ಏನು ಮಾಡಬೇಕು, ಏನು ಮಾಡಬಾರದು ಎನ್ನುವುದರ ಬಗ್ಗೆ ಹಲವು ರೀತಿಯ ಮಾತುಗಳು ಕೇಳಿಬರುತ್ತಲೇ ಇರುತ್ತವೆ.  ಅದರಲ್ಲಿ ಒಬ್ಬೊಬ್ಬರ ಮಾತುಗಳು ಒಂದೊಂದು ರೀತಿಯಾಗಿರುತ್ತದೆ. ಅನೇಕ ಪುಸ್ತಕ, ಮ್ಯಾಗಜಿನ್’ಗಳಲ್ಲಿಯೂ ಕೂಡ ಈ ಬಗ್ಗೆ ಸಾಕಷ್ಟು ರೀತಿಯ ವಿಚಾರಗಳನ್ನು ತಿಳಿಸಲಾಗುತ್ತದೆ. ಆದರೆ ಅದರಲ್ಲಿ ಯಾವುದು ನಿಜ, ಯಾವುದು ಅಲ್ಲ ಎನ್ನುವ ಗೊಂದಲಗಳು ಸಾಮಾನ್ಯ. ಇಂತಹ ಕೆಲ ಗೊಂದಲಗಳಿಗೆ ಇಲ್ಲಿದೆ ಪರಿಹಾರ

ಗರ್ಭಾವಸ್ಥೆಯಲ್ಲಿ ಒತ್ತಡ ಒಳ್ಳೆಯದಲ್ಲ : ಈ ಬಗ್ಗೆ ಇತ್ತೀಚಿನ ಸಂಶೋಧನೆಗಳು ಹೇಳುವಂತೆ ಗರ್ಭಾವಸ್ಥೆಯಲ್ಲಿ ಅಲ್ಪ ಒತ್ತಡವು ಒಳ್ಳೆಯದಾಗಿರುತ್ತದೆ. ಗರ್ಭದ ನರ್ವ್ ವ್ಯವಸ್ಥೆ ಗಟ್ಟಿಗೊಳಿಸಲು ಸಹಕಾರಿಯಾಗಿರುತ್ತದೆ.

ಗರ್ಭಾವಸ್ಥೆಯಲ್ಲಿ ಮಹಿಳೆಯರು ಸಿಹಿ ತಿನ್ನಬಾರದು : ಗರ್ಭಾವಸ್ಥೆಯಲ್ಲಿ ಮಹಿಳೆಯರು ಸಿಹಿಯನ್ನು ತಿನ್ನಬಾರದು ಎಂದು ಹಲವರ ವಾದವಾಗಿದೆ. ಆದರೆ ಪ್ರತಿದಿನ ಗರ್ಭಾವಸ್ಥೆಯಲ್ಲಿ ಚಾಕೊಲೇಟ್ ತಿಂದರೆ ಮಕ್ಕಳು ಹೆಚ್ಚು ನಗು ಹಾಗೂ ಕಡಿಮೆ ಹೆದರುವ ಗುಣವನ್ನು ಹೊಂದಿರುತ್ತವೆ ಎಂದು ಸಂಶೋಧನೆ ಮೂಲಕ ತಿಳಿದುಬಂದಿದೆ. ಅಲ್ಲದೇ ಮೂರು ತಿಂಗಳಿನ ನಂತರ ವಾರದಲ್ಲಿ5 ಚಾಕೊಲೇಟ್ ತಿಂದರೆರಕ್ತದೊತ್ತಡದ ಸಾಧ್ಯತೆಗಳು ಕಡಿಮೆ ಇರುತ್ತದೆ ಎನ್ನಲಾಗಿದೆ.

ಗರ್ಭಿಣಿಯರು ವ್ಯಾಯಾಮ ಮಾಡಬಾರದು : ಗರ್ಭಾವಸ್ಥೆಯಲ್ಲಿ ಮಹಿಳೆಯರು ವ್ಯಾಯಾಮ ಮಾಡುವುದರಿಂದ ಮಗುವಿಗೂ ಹೆಚ್ಚು ವ್ಯಾಯಾಮವಾಗುತ್ತದೆ.ಅಲ್ಲದೇ ಹೃದಯದ ಆರೋಗ್ಯವೂ ಕೂಡ ಸುಸ್ಥಿತಿಯಲ್ಲಿ ಇರುತ್ತದೆ ಎನ್ನಲಾಗಿದೆ. ಮಗುವು ಬೆಳೆದ ನಂತರ ಹೆಚ್ಚು ಬುದ್ದಿವಂತಿಕೆಯನ್ನು ಹೊಂದಿರುತ್ತದೆ ಎನ್ನಲಾಗುತ್ತದೆ.

ಗರ್ಭಿಣಿಯರು ಸಮುದ್ರ ಆಹಾರಗಳಿಂದ ದೂರ ಇರಬೇಕು : ಗರ್ಭಿಣಿಯರು ಸಮುದ್ರದ ಆಹಾರದಲ್ಲಿ ಒಮೆಗಾ -3 ಫ್ಯಾಟಿ ಆಸಿಡ್ ಇದ್ದು ಇದು ಉತ್ತಮವಾಗಿದೆ. ಇದರಿಂದ ಮಕ್ಕಳು ಹೆಚ್ಚು ಜಾಣರಾಗುತ್ತಾರೆ. ತಿನ್ನಬಾರದು ಎನ್ನುವುದು ಒಂದು ಹುಸಿ ನಂಬಿಕೆಯಾಗಿದೆ.

ಮಗುವು ಒಳಗೆ ಇರುವುದರಿಂದ ಹೊರಭಾಗದಲ್ಲಿ ಏನಾದರೂ ಮಗುವಿಗೆ ಯಾವುದೇ ಸಮಸ್ಯೆಯಾಗದು : ಆದರೆ ಇದು ತಪ್ಪು ನಂಬಿಕೆಯಾಗಿದೆ. ಗರ್ಭಾವಸ್ಥೆಯಲ್ಲಿ ಆಹಾರದ ಮೇಲೆ ನಿಗಾ ಇರಿಸಬೇಕಾಗುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ಮಾಡುವುದು ಮಗುವಿನ ಆರೋಗ್ಯಕ್ಕೆ ಮಾರಕವಾಗುತ್ತದೆ.ಪ್ಲಾಸ್ಟಿಕ್ ಕಂಟೈನರ್’ಗಳನ್ನು ಮೈಕ್ರೋವೇವ್’ನಲ್ಲಿರಿಸಿ ಉಪಯೋಗಿಸುವುದು ಈ ಸಂದರ್ಭದಲ್ಲಿ ಒಳ್ಳೆಯದಲ್ಲ

ಗರ್ಭಾವಸ್ಥೆಯಲ್ಲಿ ಎಲ್ಲಾ ಮಹಿಳೆಯರೂ ಕೂಡ ಖುಷಿಯಿಂದ ಇರುತ್ತಾರೆ : ಗರ್ಭಾವಸ್ಥೆಯಲ್ಲಿ ಎಲ್ಲಾ ಮಹಿಳೆಯರು ಸಂತೋಷವಾಗಿರುತ್ತಾರೆ ಎನ್ನುವುದು ಸುಳ್ಳಾಗಿರುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರಿಗೆ ಆಗಾಗ ಮನಸ್ಸಿನ ಆಲೋಚನಾ ರೀತಿಗಳು ಬದಲಾಗುತ್ತಿರುತ್ತವೆ. ಶೇ.20ರಷ್ಟು ಮಹಿಳೆಯರು ಈ ಸಂದರ್ಭದಲ್ಲಿ ಖಿನ್ನತೆಯನ್ನು ಅನುಭವಿಸುತ್ತಾರೆ.

ನೈಸರ್ಗಿಕ ವಿಕೋಪ, ವಿಪತ್ತು ಸಂದರ್ಭದಲ್ಲಿ ವಿಶೇಷ ಸಹಾಯ ಬೇಡ : ಆದರೆ ಇದೊಂದು ಸುಳ್ಳು ನಂಬಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಉಂಟಾಗುವ ಒತ್ತಡವು ಗರ್ಭದ ಮೇಲೆ ಮಾರಕ ಪರಿಣಾಮವನ್ನು ಉಂಟು ಮಾಡುತ್ತದೆ.

ಬಸುರಿಗೆ ಎದೆ ಉರಿಯಾದರೆ ಹುಟ್ಟೊ ಮಗುವಿಗೆ ಹೆಚ್ಚು ಕೂದಲಿರುತ್ತದೆ : ಎದೆ ಉರಿ ಎನ್ನೋದು ಗರ್ಭಿಣಿಯರಿಗೆ ಕಾಡುವ ಸಾಮಾನ್ಯವಾದ ಸಮಸ್ಯೆಯಾಗಿದೆ.

ಪ್ರಸವ ವೇದನೆ ವಂಶಪಾರಂಪರ್ಯ ಅಲ್ಲ : ಪ್ರಸವ ವೇದನೆ ವಂಶಪಾರಂಪರ್ಯವಲ್ಲ, ಅದು ಗರ್ಭದ ತೂಕ ಹಾಗೂ ಪಥ್ಯ ಗರ್ಭ ಇರುವ ಸ್ಥಾನದ ಮೇಲೆ ಅವಲಂಬಿಸಿರುತ್ತದೆ.

ಅಂಗಾತ ಮಲಗಿದರೆ ಮಗುವಿಗೆ ತೊಂದರೆ : ಗರ್ಭಿಣಿ ಅಂಗಾತ ಮಲಗಿದರೆ ಮಗುವಿಗೆತೊಂದರೆ ಎನ್ನೋ ನಂಬಿಕೆ ನಮ್ಮಲ್ಲಿದೆ. ಆದರೆ ಗರ್ಭಿಣಿ ತನಗೆ ಹೇಗೆ ಅನುಕೂಲವೋ ಹಾಗೆ ಮಲಗಬಹುದಾಗಿದೆ.

ಮೊದಲ ಮಗುವಿನ ಪ್ರಸವ ಲೇಟ್ ಆಗುತ್ತದೆ : ಮೊದಲ ಮಗುವಿನ ಪ್ರಸವ ಲೇಟ್ ಆಗುತ್ತದೆ ಎನ್ನಲಾಗುತ್ತದೆ. ಆದರೆ ಇದು ಸ್ವಲ್ಪ ಸತ್ಯಕ್ಕೆ ಹತ್ತಿರವಾದ ಸಂಗತಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂತ್ಯಸಂಸ್ಕಾರದ ವೇಳೆ ಅಚ್ಚರಿ, ಚಿತೆಯಿಂದ ಎದ್ದು ಬಂದು ಬರ್ತ್‌ಡೇ ಆಚರಿಸಿದ 103ರ ಹರೆಯದ ಅಜ್ಜಿ
ಬಿಗ್ ಬಾಸ್ ಪುಟುಗೋಸಿ ಶೋ, ಆಕ್ರೋಶಕ್ಕೆ ಗುರಿಯಾದ ಬೆಂಗಳೂರು ಕರವೇ ನಾಯಕನ ಹೇಳಿಕೆ