ಮತ್ತೆ ಪ್ರಧಾನಿಯಾಗುತ್ತಾರಾ ದೇವೇಗೌಡ ..?

By Web DeskFirst Published Jul 25, 2018, 12:43 PM IST
Highlights

ಲೋಕಸಭಾ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಈಗಾಗಲೇ ರಾಜಕೀಯ ಪಕ್ಷಗಳೂ ಕೂಡ ಈ ನಿಟ್ಟಿನಲ್ಲಿ ಸಿದ್ಧತೆಯನ್ನು ಆರಂಭ ಮಾಡಿವೆ. ಆದರೆ ಮುಂದೆ ದೇಶಕ್ಕೆ ಯಾರು ಉತ್ತಮ ಪ್ರಧಾನಿಯಾಗಲಿದ್ದಾರೆ ಎನ್ನುವ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಲಾಗುತ್ತಿದೆ. ಇದರಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಹೆಸರೂ ಕೂಡ ಸೇರಿದೆ. 

ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷವೂ ಇಲ್ಲ, ಈ ನಡುವೆ ಮುಂದಿನ ಪ್ರಧಾನಿ ಯಾರಾಗಬಹುದು ಎಂಬ ಚರ್ಚೆ  ವ್ಯಾಪವಾಗಿದೆ. ಈ ನಿಟ್ಟಿನಲ್ಲಿ ಉತ್ತರ ಕಂಡುಕೊಳ್ಳಲು ರಾಜಕೀಯ ಪಕ್ಷಗಳಿಗೆ ತಂತ್ರಗಾರಿಕೆ ರೂಪಿಸುವ ಪ್ರಶಾಂತ್ ಕಿಶೋರ್ ಸಮೀಕ್ಷೆ ಹಮ್ಮಿಕೊಂಡಿದ್ದಾರೆ. ಆ ಸಮೀಕ್ಷೆಯಲ್ಲಿಮಾಜಿ ಪ್ರಧಾನಿ ದೇವೇಗೌಡ ಕೂಡಾ ಇದ್ದಾರೆ. 

ಪ್ರಶಾಂತ್ ಕಿಶೋರ್ ನೇತೃತ್ವದ ಭಾರತೀಯ ರಾಜಕೀಯ ಕ್ರಿಯಾ ಸಮಿತಿ (ಐ-ಪ್ಯಾಕ್) ಈ ಸಮೀಕ್ಷೆಗಾಗಿ ಆನ್‌ಲೈನ್ ವೇದಿಕೆ ಸಿದ್ಧಪಡಿಸಿದೆ. ನ್ಯಾಶನಲ್ ಅಜೆಂಡಾ ಫೋರಂ ವೆಬ್‌ಸೈಟ್‌ಗೆ ಲಾಗಿನ್ ಆಗಿ, ಅಲ್ಲಿ ನೀಡಲಾದ 10 ಅಂಶಗಳಲ್ಲಿ ಯಾವ ವಿಷಯಗಳನ್ನು ಆದ್ಯತೆಯ ಆಧಾರದಲ್ಲಿ ಪರಿಹರಿಸಬೇಕು ಎಂದು ಮತದಾನ ಮಾಡಬೇಕು. 

ಅದರ ಜೊತೆಗೆ ಈ ಎಲ್ಲ ವಿಷಯಗಳನ್ನು ಯಾರು ಪರಿಹರಿಸಬಲ್ಲರು ಎಂಬ ಆಧಾರದಲ್ಲಿ ತಮ್ಮ ಆಯ್ಕೆಯ ಮುಂದಿನ ಪ್ರಧಾನಿಗೆ ಮತದಾನ ಮಾಡಬಹುದು. ಆ. 14 ಕ್ಕೆ ಮತದಾನ ಅಂತ್ಯವಾಗಲಿದ್ದು, ಆ. 15 ರಂದು ಫಲಿತಾಂಶ ಪ್ರಕಟವಾಗಲಿದೆ. ದೇವೇಗೌಡ, ಅಖಿಲೇಶ್, ಕೇಜ್ರಿವಾಲ್, ಮಮತಾ, ಮಾಯಾವತಿ, ಮೋದಿ, ನವೀನ್ ಪಾಟ್ನಾಯಕ್, ನಿತೀಶ್, ರಾಹುಲ್, ಶರದ್ ಪವಾರ್, ಯೆಚೂರಿ ಮೊದಲಾದವರ ಹೆಸರಿದೆ.

click me!