
ಕೊಳ್ಳೇಗಾಲ: ಮಾರಮ್ಮ ದೇವಿ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಲ್ಲಿ ಬಿದರಹಳ್ಳಿಯ ಬಾಲಕ ಪ್ರೀತಂ ಕೂಡ ಸೇರಿದ್ದಾನೆ. ಈತ ಪೋಷಕರ ಕಣ್ತಪ್ಪಿಸಿ ಪ್ರಸಾದ ಸೇವಿಸಿ ಈಗ ಇಹಲೋಕ ತ್ಯಜಿಸಿದ್ದಾನೆ!
ಪ್ರೀತಂ ತಂದೆ ಶೇಖರ್ ಮತ್ತು ತಾಯಿ ರೇಖಾ ಓಂ ಶಕ್ತಿ ದೇವಸ್ಥಾನಕ್ಕೆ ತೆರಳಲು ಮಾಲೆ ಧರಿಸಿದ್ದರು. ಶುಕ್ರವಾರ ಪ್ರೀತಂ ಹುಟ್ಟುಹಬ್ಬದ ದಿನವಾಗಿದ್ದ ಹಿನ್ನೆಲೆಯಲ್ಲಿ ಮಾರಮ್ಮನ ದೇವಸ್ಥಾನದಲ್ಲಿ ಶೇಖರ್ ದಂಪತಿ ಕುಟುಂಬ ಸಮೇತ ಪೂಜೆ ಸಲ್ಲಿಸಿದ್ದರು.
ಈ ವೇಳೆ ನೀಡಲಾದ ಪ್ರಸಾದ ಏನೋ ಘಾಟು ಹೊಡೆಯುತ್ತಿದ್ದುದರಿಂದ ಶೇಖರ್ ಅವರು ಪ್ರಸಾದ ಸೇವಿಸದಂತೆ ಮಕ್ಕಳಿಗೆ ತಾಕೀತು ಮಾಡಿದ್ದರು. ಆದರೂ ಮೂರನೇ ಮಗನಾದ ಪ್ರೀತಂ ಅಪ್ಪ-ಅಮ್ಮನ ಕಣ್ತಪ್ಪಿಸಿ ಪ್ರಸಾದ ಸೇವಿಸಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.