ಆರ್‌ಎಸ್‌ಎಸ್‌ ಸಭೆಗೆ ಬರ್ತಾರಾ ಪ್ರಣಬ್ ಮುಖರ್ಜಿ?

First Published May 28, 2018, 1:44 PM IST
Highlights

ಜೀವನದುದ್ದಕ್ಕೂ ಆರ್‌ಎಸ್‌ಎಸ್‌ ಸಿದ್ದಾಂತ ವಿರೋಧಿ ರಾಜಕಾರಣ ಮಾಡಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಆರ್‌ಎಸ್‌ಎಸ್‌ ನ ಪ್ರಮುಖ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದರೆ ಎಂಥವರೂ ಮೂಗು ಮುರಿಯಬಹುದು.

ಜೀವನದುದ್ದಕ್ಕೂ ಆರ್‌ಎಸ್‌ಎಸ್‌ ಸಿದ್ದಾಂತ ವಿರೋಧಿ ರಾಜಕಾರಣ ಮಾಡಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಆರ್ಎಸ್ಎಸ್ ನ ಪ್ರಮುಖ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದರೆ ಎಂಥವರೂ ಮೂಗು ಮುರಿಯಬಹುದು.

ಆದರೆ ಇದೇ ಜೂನ್ 7 ರಂದು ನಾಗ್ಪುರ್ದಲ್ಲಿರುವ ಆರ್ಎಸ್ಎಸ್ ಮುಖ್ಯಾಲಯದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದ್ದು, ಪ್ರಣಬ್ ಮುಖರ್ಜಿ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಕುರಿತು ಖುದ್ದು ಸಂಘದ ಮೂಲಗಳು ಮಾಹಿತಿ ನೀಡಿದ್ದು, ಜೂನ್ 7 ರ ಸಭೆಗೆ ಬರಲಿರುವ ಮಾಜಿ ರಾಷ್ಟ್ರಪತಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸಂಘದ ಸುಮಾರು 600 ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಂತೆ ಪ್ರಣಬ್ ಮುಖರ್ಜಿ ಅವರನ್ನು ಕೋರಿದಾಗ, ಅವರು ಸಂತೋಷದಿಂದ ಸಭೆಗೆ ಬರುವುದಾಗಿ ಹೇಳಿದ್ದಾರೆ ಎಂದು ಆರ್ಎಸ್ಎಸ್ ಮೂಲಗಳು ಸ್ಪಷ್ಟಪಡಿಸಿವೆ. 

ದೇಶದಲ್ಲಿ ಸರ್ವಾಧಿಕಾರಿ ಮನೋಭಾವನೆ ಹೆಚ್ಚಾಗುತ್ತಿದ್ದು, ಆರ್ಎಸ್ಎಸ್ ಸೈದ್ದಾಂತಿಕ ವಿರೋಧಿಗಳನ್ನು ಸಹಿಸುತ್ತಿಲ್ಲ ಎಂಬ ಆರೋಪದ ನಡುವೆಯೇ ಪ್ರಣಬ್ ಮುಖರ್ಜಿ ಅವರನ್ನು ಸಭೆಗೆ ಆಹ್ವಾನಿಸಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.  

click me!