ವಾಯೇಜರ್ ಡಿಸ್ಕ್ ಏಲಿಯನ್ ಪಾಲಾದರೆ ಸರ್ವನಾಶ?

Published : May 28, 2018, 01:15 PM ISTUpdated : May 28, 2018, 01:33 PM IST
ವಾಯೇಜರ್ ಡಿಸ್ಕ್ ಏಲಿಯನ್ ಪಾಲಾದರೆ ಸರ್ವನಾಶ?

ಸಾರಾಂಶ

ಸೌರ ಮಂಡಲದ ಅಧ್ಯಯನಕ್ಕಾಗಿ 1977 ರಲ್ಲಿ ಉಡಾವಣೆ ಮಾಡಿದ್ದ ವಾಯೇಜರ್ ಸರಣಿಯ ಎರಡೂ ನೌಕೆಗಳು ಇದೀಗ ನಮ್ಮ ಸೌರ ಮಂಡಲವನ್ನೇ ದಾಟಿ ಮುನ್ನುುಗ್ಗುತ್ತಿವೆ. ಮನುಷ್ಯ ನಿರ್ಮಿತ ಯಂತ್ರವೊಂದು ಸೌರವ್ಯೂಹದ ಗಡಿ ದಾಟಿ ಮತ್ತೊಂದು ಜಗತ್ತಿಗೆ ಕಾಲಿಡುತ್ತಿರುವುದು ಐತಿಹಾಸಿಕವೇ ಸರಿ.

ವಾಷಿಂಗ್ಟನ್(ಮೇ 28): ಸೌರ ಮಂಡಲದ ಅಧ್ಯಯನಕ್ಕಾಗಿ 1977 ರಲ್ಲಿ ಉಡಾವಣೆ ಮಾಡಿದ್ದ ವಾಯೇಜರ್ ಸರಣಿಯ ಎರಡೂ ನೌಕೆಗಳು ಇದೀಗ ನಮ್ಮ ಸೌರ ಮಂಡಲವನ್ನೇ ದಾಟಿ ಮುನ್ನುಗ್ಗುತ್ತಿವೆ. ಮನುಷ್ಯ ನಿರ್ಮಿತ ಯಂತ್ರವೊಂದು ಸೌರವ್ಯೂಹದ ಗಡಿ ದಾಟಿ ಮತ್ತೊಂದು ಜಗತ್ತಿಗೆ ಕಾಲಿಡುತ್ತಿರುವುದು ಐತಿಹಾಸಿಕವೇ ಸರಿ.

ಇನ್ನು ವಾಯೇಜರ್-1 ನೌಕೆಯಲ್ಲಿ ಗೋಲ್ಡನ್ ಡಿಸ್ಕ್ ವೊಂದನ್ನು ಅಳವಡಿಸಲಾಗಿದ್ದು, ಇದರಲ್ಲಿ ಮನುಷ್ಯನೂ ಸೇರಿದಂತೆ ಭೂಮಿಯ ಮೇಲೆ ವಾಸಿಸುವ ಎಲ್ಲ ಪ್ರಾಣಿ-ಪಕ್ಷಿಗಳ, ನೈಸರ್ಗಿಕ ಸಂಪತ್ತಿನ,[ಕಾಡು, ನದಿ, ಸಮುದ್ರ ಇತ್ಯಾದಿ] ವಿವಿಧ ನಾಗರಿಕತೆಗಳ ಸಂಸ್ಕೃತಿ, ಕಲೆ, ಸಂಗೀತ ಹೀಗೆ ವಿವಿಧ ಬಗೆಯ ಮಾಹಿತಿ ಒಳಗೊಂಡಿರುವ ಫೊಟೋ ಮತ್ತು ಆಡಿಯೋ ಮಾಹಿತಿ ಇದೆ.

ನಾಸಾ ಈ ಗೋಲ್ಡನ್ ಡಿಸ್ಕ್ ನಲ್ಲಿ ಈ ಎಲ್ಲ ಮಾಹಿತಿಗಳನ್ನು ಹಾಕಿರುವುದು  ಬ್ರಹ್ಮಾಂಡದಲ್ಲಿ ಇರಬಹುದಾದ ಏಲಿಯನ್ ಜಗತ್ತು ಈ ಮಾಹಿತಿ ಕಲೆ ಹಾಕಿ ಭೂಮಿಯನ್ನು ಸಂಪರ್ಕಿಸಲು ಸಾಧ್ಯವಾಗಲಿ ಎಂದು. ಅಂದರೆ ಒಂದು ವೇಳೆ ಅನ್ಯಗ್ರಹ ಜೀವಿಗಳು ಇರುವುದು ನಿಜವಾದರೆ, ಖಗೋಳದಲ್ಲಿ ಸಂಚರಿಸುತ್ತಿರುವ ವಾಯೇಜರ್-1 ನೌಕೆಯಲ್ಲಿರುವ ಈ ಮಾಹಿತಿ ಸಂಗ್ರಹಿಸಲಿವೆ.

ಆದರೆ ಬರೋಬ್ಬರಿ 42 ವರ್ಷಗಳ ಬಳಿಕ ನಾಸಾದ ಈ ಯೋಜನೆಗೆ ಇದೀಗ ಭಾರೀ ಅಪಸ್ವರ ಕೇಳಿ ಬರುತ್ತಿದೆ. ಕಾರಣ ಒಂದು ವೇಳೆ ಈ ಡಿಸ್ಕ್ ಪರಗ್ರಹ ಜೀವಿಗಳ ಪಾಲಾದರೆ ಬ್ರಹ್ಮಾಂಡದಲ್ಲಿ ಭೂಮಿಯ  ಸ್ಥಾನದ ಮಾಹಿತಿ ಪಡೆದು ಅವು ದಾಳಿ ನಡೆಸುವ ಸಾಧ್ಯತೆ ಹೆಚ್ಚು ಎಂದು ಕೆಲವು ಖಗೋಳ ವಿಜ್ಞಾನಿಗಳು ವಾದಿಸಿದ್ದಾರೆ. ಒಳ್ಳೆಯ ಉದ್ದೇಶಕ್ಕೆ ಈ ಡಿಸ್ಕ್ ಅಳವಡಿಸಲಾಗಿದೆಯಾದರೂ ಏಲಿಯನ್ ಜಗತ್ತು ಇದನ್ನು ನಕಾರಾತ್ಮಕ ರೀತಿಯಲ್ಲಿ ಸ್ವೀಕರಿಸಿದರೆ ಮಾನವ ಜನಾಂಗ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೊಂಟ ಹಾಗೂ ತಲೆಯ ಮೇಲೆ ತಲವಾರು ಇರಿಸಿಕೊಂಡು ಬಾಲೆಯ ಬೆಲ್ಲಿ ಡಾನ್ಸ್‌: ವೀಡಿಯೋ ಭಾರಿ ವೈರಲ್
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!