ಆರ್‌ಎಸ್‌ಎಸ್ ಕಾರ್ಯಕ್ರಮಕ್ಕಾಗಿ ನಾಗ್ಪುರಕ್ಕೆ ಬಂದಿಳಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

First Published Jun 6, 2018, 5:33 PM IST
Highlights

ವಿರೋಧದ ನಡುವೆಯೂ ಮಾಜಿ ರಾಷ್ಟ್ರಪತಿ ಪ್ರಣಬ್  ಮುಖರ್ಜಿ,ನಾಳೆ ನಡೆಯಲಿರುವ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಣಬ್ ಭಾಷಣ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ನಾಗ್ಪುರ(ಜೂನ್.6) ಹಲವು ಕಾಂಗ್ರೆಸ್ಸಿಗರ ತೀವ್ರ ವಿರೋಧದ ನಡುವೆಯೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾಗ್ಪುರಕ್ಕೆ ಬಂದಿಳಿದ್ದಾರೆ. 

ಆರ್‌ಎಸ್‌ಎಸ್ ಕೇಂದ್ರ ಕಛೇರಿ ನಾಗ್ಪುರದಲ್ಲಿ ನಾಳೆ(ಜೂನ್.7) ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಪಾಲ್ಗೊಳ್ಳಲಿದ್ದಾರೆ.  ಇದೇ ಮೊದಲ ಬಾರಿಗೆ ಪ್ರಣಬ್  ಮುಖರ್ಜಿ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆರ್‌ಎಸ್‌ಎಸ್ ಆಹ್ವಾನ ಒಪ್ಪಿಕೊಂಡ ಪ್ರಣಬ್ ಮುಖರ್ಜಿ ನಿರ್ದಾರಕ್ಕೆ ಕಾಂಗ್ರೆಸ್ಸಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

Latest Videos

 

RSS members welcome Former President of India Dr. Pranab Mukherjee on his arrival at Nagpur airport. He is the chief guest at a Rashtriya Swayamsevak Sangh (RSS) program tomorrow (Earlier visuals) pic.twitter.com/vmLg23M7ni

— ANI (@ANI)

 

ಅದೆಷ್ಟೇ ವಿರೋಧ ವ್ಯಕ್ತವಾದರೂ, ಪ್ರಣಬ್ ಮುಖರ್ಜಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಇಷ್ಟೇ ಅಲ್ಲ ಎಲ್ಲದಕ್ಕೂ ನಾಗ್ಪುರದಲ್ಲಿ ಉತ್ತರ ನೀಡಲಿದ್ದೇನೆ ಎಂದಿದ್ದರು. ಹಿಂದುತ್ವ ಸಂಘಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಮಾಜಿ ರಾಷ್ಟ್ರಪತಿ ಮುಖರ್ಜಿ ಭಾಷಣದ ಮೇಲೆ ಇದೀಗ ಎಲ್ಲರ ಚಿತ್ತ ನೆಟ್ಟಿದೆ. 
 

click me!