
ಬೆಂಗಳೂರು (ಮೇ. 31): ಪೆಟ್ರೋಲ್ ದರ ಒಂದು ಪೈಸೆ ಇಳಿಕೆಯಾಗಿದ್ದರಿಂದ ಜನರಿಗೆ ಒಂದು ಪೈಸೆಯ ಮಹತ್ವ ಮನವರಿಕೆಯಾಗಿದೆ. ಹೀಗಾಗಿ ಒಂದು ಪೈಸೆ ಚಿಲ್ಲರೆಯನ್ನೂ ಕೊಡುವಂತೆ ಗ್ರಾಹಕರು ಕೇಳುತ್ತಿದ್ದಾರೆ. ಇದು ಪೆಟ್ರೋಲ್ ಬಂಕ್ ಮಾಲೀಕರನ್ನು ಚಿಂತೆಗೀಡುಮಾಡಿದೆ.
ಪೆಟ್ರೋಲ್ ದರವನ್ನು ಒಂದು ಪೈಸೆ ಏರಿಸಿದಾಗ ಮತ್ತು ಇಳಿಸಿದಾಗ ಚಿಲ್ಲರೆ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಿಂದ ಸರ್ಕಾರ ಒಂದು ಪೈಸೆ ನಾಣ್ಯವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಇನ್ನು ಒಂದೆರಡು ದಿನದಲ್ಲೇ ಒಂದು ಪೈಸೆ ನಾಣ್ಯಗಳು ಪ್ರತಿ ಪೆಟ್ರೋಲ್ ಬಂಕ್'ಗಳನ್ನು ತಲುಪಲಿವೆ. ಅಲ್ಲದೇ 2, 5 ಹಾಗೂ 10 ಪೈಸೆ ನಾಣ್ಯಗಳನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.