
ಬೆಂಗಳೂರು: ರಾಜಕೀಯ ಪ್ರವೇಶಿಸಿ ಜನಸೇವೆ ಮಾಡಲು ಗಣ್ಯ ವ್ಯಕ್ತಿಯೊಬ್ಬರು ರೆಡಿಯಾಗಿದ್ದಾರೆ.
ಈ ಬಗ್ಗೆ ತನ್ನ ಮನದಾಳವನ್ನು ಆಪ್ತರೊಂದಿಗೆ ಹಂಚಿಕೊಂಡಿರುವ ಮೈಸೂರು ರಾಜವಂಶದ ರಾಜಮಾತೆ ಪ್ರಮೋದಾದೇವಿಯವರು, ಜನಸೇವೆ ಮಾಡಲು ರಾಜಕೀಯ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಸುವರ್ಣನ್ಯೂಸ್’ಗೆ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಸುವರ್ಣ ನ್ಯೂಸ್’ಗೆ ಸಿಕ್ಕರುವ EXCLUSIVE ಮಾಹಿತಿ ಪ್ರಕಾರ, ರಾಜಕೀಯ ಸೇರಿದರೆ ಹೇಗೆ ಎಂದು ಆಪ್ತರೊಂದಿಗೆ ಚರ್ಚಿಸಿರುವ ಪ್ರಮೋದಾದೇವಿ, ಯಾವ ಪಕ್ಷಕ್ಕೆ ಸೇರಿದರೆ ಉತ್ತಮವೆಂದು ಲೆಕ್ಕಾಚಾರ ಹಾಕಿದ್ದಾರೆನ್ನಲಾಗಿದೆ.
ಯಾವ ಪಕ್ಷ ಸೇರ್ತಾರೆ ರಾಜಮಾತೆ..?
ರಾಜಕೀಯಕ್ಕೆ ಬರುವ ಹಿಂದೆ ಜನಸೇವೆ ಹಾಗೂ ಮೈಸೂರು ರಾಜಮನೆತನದ ಆಸ್ತಿರಕ್ಷಣೆಯ ಲೆಕ್ಕಾಚಾರವಿದೆ ಎನ್ನಲಾಗಿದೆ. ಆದುದರಿಂದ ಯಾವಾಗ, ಯಾವ ರಾಜಕೀಯ ಪಕ್ಷ ಸೇರಬೇಕೆಂದು ಚರ್ಚೆಯನ್ನು ಅವರು ನಡೆಸಿದ್ದಾರೆ.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಸೇರ್ಪಡೆ ಕುರಿತಾಗಿ ಚರ್ಚೆ ನಡೆಸಿದ್ದು, ಯಾವ ಪಕ್ಷ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂಬ ಲೆಕ್ಕಾಚಾರ ಹಾಕಿದ್ದಾರೆನ್ನಲಾಗಿದೆ. ಇತ್ತೀಚೆಗೆ ಅಧಿಕೃತವಾಗಿ ಯಾವ ಪಕ್ಷವೂ ಆಹ್ವಾನಿಸಿದ ಮಾಹಿತಿ ಇಲ್ಲ.
ರಾಜಮಾತೆಗೆ JDS ಹಾಗೂ BJP ಗಾಳ..!
ರಾಜ ಮಾತೆ ಪ್ರಮೋದಾ ದೇವಿ ಪಕ್ಷಕ್ಕೆ ಸೇರಿಸಿಕೊಳ್ಳಲು ಪಕ್ಷಗಳು ಗಾಳ ಹಾಕುತ್ತಿವೆ. ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಯತ್ನಿಸುತ್ತಿದ್ದಾರೆ.
2013ರ ಡಿಸೆಂಬರ್ ನಲ್ಲಿ ಮಹಾರಾಜ ನಿಧನಾನಂತರ ರಾಜಕೀಯಕ್ಕೆ ಬರಲ್ಲವೆಂದಿದ್ದರು ಪ್ರಮೋದಾ ದೇವಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.