ಬೆಂಗಳೂರಿನಲ್ಲಿ ಬೇರೆಯವರ ಕಾಳು ಬೇಯಲು ಬಿಡಬಾರದು: ಪ್ರಕಾಶ್ ರೈ

Published : Dec 31, 2017, 12:12 PM ISTUpdated : Apr 11, 2018, 01:10 PM IST
ಬೆಂಗಳೂರಿನಲ್ಲಿ ಬೇರೆಯವರ ಕಾಳು ಬೇಯಲು ಬಿಡಬಾರದು: ಪ್ರಕಾಶ್ ರೈ

ಸಾರಾಂಶ

ಖ್ಯಾತ ನಟ ಪ್ರಕಾಶ್ ರೈ ಗೆ ಪ್ರೆಸ್'ಕ್ಲಬ್'ನಲ್ಲಿ  ವರ್ಷದ ವ್ಯಕ್ತಿ ಗೌರವ ನೀಡಿ ಸನ್ಮಾನಿಸಲಾಯಿತು.ಜೊತೆಗೆ 10 ಮಂದಿ ಪತ್ರಕರ್ತರಿಗೂ ಗೌರವ ನೀಡಲಾಯಿತು.

ಬೆಂಗಳೂರು (ಡಿ.31): ಖ್ಯಾತ ನಟ ಪ್ರಕಾಶ್ ರೈ ಗೆ ಪ್ರೆಸ್'ಕ್ಲಬ್'ನಲ್ಲಿ  ವರ್ಷದ ವ್ಯಕ್ತಿ ಗೌರವ ನೀಡಿ ಸನ್ಮಾನಿಸಲಾಯಿತು.ಜೊತೆಗೆ 10 ಮಂದಿ ಪತ್ರಕರ್ತರಿಗೂ ಗೌರವ ನೀಡಲಾಯಿತು.

ಪ್ರಶಸ್ತಿ  ಸ್ವೀಕರಿಸಿದ ಪ್ರಕಾಶ್ ರೈ, ಪತ್ರಕರ್ತರ ಜೊತೆ ಬಹಳ ಹಿಂದಿನಿಂದಲೂ ನನಗೆ ಒಡನಾಟ ಇದೆ. ಪತ್ರಕರ್ತರೇ ನಡೆಸಿದ್ದ ನಾಟಕದಲ್ಲಿ ಕೂಡಾ ನಾನು ಅಭಿನಯಿಸಿದ್ದೆ. ನಾನು ಪತ್ರಕರ್ತನಲ್ಲ, ಆದರೆ ಲಂಕೇಶ್ ಒಡನಾಟ ನನಗೆ ಸಾಕಷ್ಟು ಅನುಭವಗಳನ್ನು ಕೊಟ್ಟಿದೆ. ಇವತ್ತಿನ ದಿನಗಳಲ್ಲಿ ನನ್ನ ಮತ್ತು ಪತ್ರಕರ್ತರ ಸಂಬಂಧ ಬೇರೆ ರೂಪ ಪಡೆದುಕೊಳ್ಳುತ್ತಿದೆ ಎಂದರು.

ಗೌರಿ ಲಂಕೇಶ್ ಹತ್ಯೆ ನನ್ನನ್ನು ಬಹಳ ಕಾಡಿತು. ನಾನು ಗೌರಿ ಹತ್ಯೆ ವೇಳೆ ದನಿ ಎತ್ತಿದಾಗ , ಸಾಕಷ್ಟು ಸಂಚಲನ ಮೂಡಿಸಿತು. ನನ್ನ ಜವಾಬ್ದಾರಿ ಹೆಚ್ಚಾಗಿದೆ. ದೇಶವನ್ನು ಕಾಡುತ್ತಿರುವ  ಮತೀಯ ರಾಜಕೀಯ ಹಿಟ್ಲರ್ ಕಾಲದಲ್ಲಿ ಇತ್ತು. ಇದರ ವಿರುದ್ದ ದನಿ ಎತ್ತಬೇಕಿದೆ.  ಎಲ್ಲವನ್ನೂ ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಎಲ್ಲವೂ ಎಲ್ಲರಿಗೂ ಅರ್ಥವಾಗುತ್ತದೆ. ಯಾವ ಪತ್ರಿಕೆ ಯಾವ ಪಕ್ಷದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ದನಿ ಎತ್ತುವ ಪತ್ರಕರ್ತರ ದನಿ ಅಡಗಿಸುವ ತಂತ್ರಗಳು ನಡೆಯುತ್ತಿವೆ ಎಂದರು.

ನಾನು ಇನ್ನೂ ಗಟ್ಟಿಯಾಗಿ ಮಾತನಾಡಬೇಕಿದೆ. ಬೆಂಗಳೂರಿನ ಮೂಲ ಹೆಸರು ಬೆಂದಕಾಳೂರು. ಇಲ್ಲಿ ಬೇರೆಯವರ ಕಾಳು ಬೇಯಲು ಬಿಡಬಾರದು. ನಮ್ಮ  ಶಾಂತಿ ಕದಡುವ ಎಲ್ಲ ಶಕ್ತಿ ಗಳ ವಿರುದ್ಧ  ಹೋರಾಡಬೇಕಿದೆ ಎಂದು ಪ್ರಕಾಶ್ ರೈ ಮಾರ್ಮಿಕವಾಗಿ ಮಾತನಾಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜನವರಿ 1ರಿಂದ ಬೆಂಗಳೂರು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ
ಸೆಲ್ಫಿ ವಿಡಿಯೋ ಮಾಡಿ ಪ್ರಾಣಬಿಟ್ಟ ಮಹಿಳೆ ಕೇಸಿಗೆ ಟ್ವಿಸ್ಟ್; ಗಂಡನ ಬಿಟ್ಟು ಬಂದರೂ ನರಕ ತೋರಿಸಿದ್ದ ಪ್ರೇಮಿ!