
ಚೆನ್ನೈ (ಡಿ.31): ಸೂಪರ್'ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶವನ್ನು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.
"ತಮಿಳುನಾಡಿನ ಬಗ್ಗೆ ರಜನಿಕಾಂತ್'ಗೆ ಯಾವುದೇ ದೃಷ್ಟಿಕೋನವಿಲ್ಲ. ರಜನಿಕಾಂತ್ ಒಬ್ಬ ಅನಕ್ಷರಸ್ಥ, ಗೊತ್ತುಗುರಿ ಇಲ್ಲದ ವ್ಯಕ್ತಿ. ತಮಿಳುನಾಡಿನ ಜನರು ಬುದ್ಧಿವಂತರು. ಯಾರಿಗೆ ಮತ ಹಾಕಬೇಕೆಂಬುದು ತಮಿಳು ಜನರಿಗೆ ಗೊತ್ತಿದೆ" ಎಂದು ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.
ಜಯಲಲಿತಾ ವಿಧಾನಸಭಾ ಕ್ಷೇತ್ರ ಆರ್ ಕೆ ನಗರದಿಂದ ಭಾರೀ ಗೆಲುವು ಸಾಧಿಸಿದ ಟಿಟಿವಿ ದಿನಕರನ್ ಕೂಡಾ ರಜನೀ ರಾಜಕೀಯ ಪ್ರವೇಶವನ್ನು ತಳ್ಳಿ ಹಾಕಿದ್ದಾರೆ. 'ಅಮ್ಮ'ನ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ. ಅಮ್ಮನ ಅಭಿಮಾನಿಗಳು, ಮತದಾರರ ಎದುರು ಯಾರೂ ಗೆಲ್ಲಲು ಸಾಧ್ಯವಿಲ್ಲ. ಜಯಲಲಿತಾ ಹಾಗೂ ಎಂಜಿಆರ್ ಇಬ್ಬರೇ ತಮಿಳುನಾಡು ರಾಜಕೀಯದಲ್ಲಿ ಇರಲು ಸಾಧ್ಯ ಎಂದು ದಿನಕರನ್ ಹೇಳಿದ್ದಾರೆ.
"ರಜನಿಯ ಸಾಮಾಜಿಕ ಕಳಕಳಿಗೆ ನನ್ನ ಸ್ವಾಗತ . ರಾಜಕೀಯಕ್ಕೆ ಸಹೋದರ ರಜನಿಗೆ ಸ್ವಾಗತ" ಎಂದು ನಟ ಕಮಲ್ ಹಾಸನ್ ಶುಭ ಕೋರಿದ್ದಾರೆ.
ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ತಮಿಳುನಾಡು ರಾಜ್ಯ ಬಿಜೆಪಿಯಿಂದ ಸ್ವಾಗತ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷಕ್ಕೆ ರಜನಿಕಾಂತ್ ಬೆಂಬಲಿಸುವ ವಿಶ್ವಾಸವಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷೆ ಡಾ.ತಮಿಳಿಸಾಯಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.