
ಶಿವಮೊಗ್ಗ (ಮಾ30): ಶಿವಮೊಗ್ಗದಲ್ಲಿ ಬಿಎಸ್ವೈ-ಈಶ್ವರಪ್ಪ ಬಣಗಳ ನಡುವೆ ಜಿದ್ದಾಜಿದ್ದಿ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಶಿವಮೊಗ್ಗ ಇಂದು ಫ್ಲೆಕ್ಸ್ ಪಾಲಿಟಿಕ್ಸ್'ಗೆ ಸಾಕ್ಷಿಯಾಗಿದೆ.
ಈಶ್ವರಪ್ಪ ಯುವ ಬ್ರಿಗೇಡ್'ನ ಕಾರ್ಯಕರ್ತರು ಇಂದು ಮುಂಜಾನೆ ಬಿಜೆಪಿ ಮುಖಂಡರು ಹಾಕಿಕೊಂಡಿದ್ದ ಪೋಸ್ಟರ್'ಗಳನ್ನು ಹರಿದು ಹಾಕಿದ್ದಾರೆ. ನಗರದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶುಭಾಶಯ ಕೋರಿ ಹಾಕಲಾಗಿದ್ದ ಫ್ಲೆಕ್ಸ್'ಗಳಲ್ಲಿ ಈಶ್ವರಪ್ಪರ ಭಾವಚಿತ್ರ ಕಡೆಗಣಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ನಿನ್ನೆ ಎಚ್ಚರಿಕೆ ನೀಡಿದ್ದ ಯುವ ಬ್ರಿಗೇಡ್'ನ ಮುಖಂಡರು ಕೆಲವಾರು ಫ್ಲೆಕ್ಸ್'ಗಳಲ್ಲಿ ಈಶ್ವರಪ್ಪರ ಭಾವಚಿತ್ರ ಅಂಟಿಸಿದ್ದಲ್ಲದೆ, ಇನ್ನು ಕೆಲವು ಫ್ಲೆಕ್ಸ್'ನಲ್ಲಿದ್ದ ಆಯನೂರು ಮಂಜುನಾಥ್ ಅವರ ಭಾವಚಿತ್ರವನ್ನಷ್ಟೇ ಹರಿದು ಹಾಕಿದ್ದಾರೆ.
ಇನ್ನೂ ಕೆಲವು ಫ್ಲೆಕ್ಸ್ ಗಳು ಸಂಪೂರ್ಣವಾಗಿ ಕಿತ್ತು ಹಾಕಲಾಗಿದೆ. ಈ ಮೂಲಕ ಜಿಲ್ಲಾ ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.