25 ನಿಮಿಷ ಸಿಕ್ಕಿಬಿದ್ದಿದ್ದ ಪೋಪ್‌ ಫ್ರಾನ್ಸಿಸ್‌!

Published : Sep 02, 2019, 01:05 PM IST
25 ನಿಮಿಷ ಸಿಕ್ಕಿಬಿದ್ದಿದ್ದ  ಪೋಪ್‌ ಫ್ರಾನ್ಸಿಸ್‌!

ಸಾರಾಂಶ

ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರು ವಿದ್ಯುತ್‌ ವ್ಯತ್ಯಯದಿಂದಾಗಿ 25 ನಿಮಿಷಗಳ ಕಾಲ ಲಿಫ್ಟ್‌ನಲ್ಲೇ ಸಿಕ್ಕಿಹಾಕಿಕೊಂಡಿದ್ದ ಆತಂಕಕಾರಿ ಘಟನೆ ನಡೆದಿದೆ. 

ವ್ಯಾಟಿಕನ್‌ ಸಿಟಿ (ಸೆ. 02):  ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರು ವಿದ್ಯುತ್‌ ವ್ಯತ್ಯಯದಿಂದಾಗಿ 25 ನಿಮಿಷಗಳ ಕಾಲ ಲಿಫ್ಟ್‌ನಲ್ಲೇ ಸಿಕ್ಕಿಹಾಕಿಕೊಂಡಿದ್ದ ಆತಂಕಕಾರಿ ಘಟನೆ ನಡೆದಿದೆ.

ಸಾಯಂಕಾಲದ ಪ್ರಾರ್ಥನೆಗೆಂದು ಪೋಪ್‌ ಫ್ರಾನ್ಸಿಸ್‌ ಅವರು ಲಿಫ್ಟ್‌ನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಹೀಗಾಗಿ ಅವರು 25 ನಿಮಿಷಗಳ ಅದರಲ್ಲೇ ಸಿಕ್ಕಿಹಾಕಿಕೊಂಡಿದ್ದರು. ಬಳಿಕ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಪೋಪ್‌ ಅವರನ್ನು ರಕ್ಷಿಸಿದರು.

ಈ ಘಟನೆಯಿಂದಾಗಿ ಪೋಪ್‌ ಅವರು ಭಾನುವಾರದ ಪ್ರಾರ್ಥನೆಗೆ ಪೂರ್ವನಿಗದಿಯಾದ ಸಮಯಕ್ಕಿಂತ 7 ನಿಮಿಷ ತಡವಾಗಿ ಆಗಮಿಸಿದರು. ಈ ಸಂಬಂಧ ಅವರು ಸಾರ್ವಜನಿಕರಲ್ಲೇ ಕ್ಷಮೆಯಾಚಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!