
ಲಕ್ನೋ (ಫೆ.19): ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದೆ. 12 ಜಿಲ್ಲೆಗಳ 69 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಲಖನೌ, ಸಮಾಜವಾದಿ ಪಕ್ಷದ ಪ್ರಾಬಲ್ಯವಿರುವ ಕನ್ನೌಜ್, ಮೇನ್‌ಪುರಿ ಮತ್ತು ಇಟಾವಾಗಳಲ್ಲಿ ಮತದಾನ ನಡೆಯುತ್ತಿದೆ .
ಇಟಾವಾ, ಎಸ್‌ಪಿ ಸಂಸ್ಥಾಪಕ ಮಲಾಯಂ ಸಿಂಗ್ ಯಾದವ್ ಅವರ ತವರು ನೆಲ. 2012ರ ಚುನಾವಣೆಯಲ್ಲಿ ಈ 69 ಕ್ಷೇತ್ರಗಳ ಪೈಕಿ 55 ಕ್ಷೇತ್ರಗಳಲ್ಲಿ ಎಸ್‌ಪಿ ಜಯಗಳಿಸಿತ್ತು. ಬಿಎಸ್‌ಪಿ 6, ಬಿಜೆಪಿ 5 ಮತ್ತು ಕಾಂಗ್ರೆಸ್ 2 ಸ್ಥಾನಗಳನ್ನು ಗಳಿಸಿದ್ದವು.
ಇವತ್ತು 25,603 ಮತಗಟ್ಟೆಗಳಲ್ಲಿ ವೋಟಿಂಗ್ ನಡೆಯುತ್ತಿದ್ದು, 1.1 ಕೋಟಿ ಮಹಿಳೆಯರು, 1,026 ತೃತೀಯ ಲಿಂಗಿಗಳು ಸೇರಿದಂತೆ 2.41 ಕೋಟಿ ಮತದಾರರು ತಮ್ಮ ಅಧಿಕಾರ ಚಲಾಯಿಸಲಿದ್ದಾರೆ.
ಎಸ್‌ಪಿ ಮುಖಂಡ ನರೇಶ್ ಅಗರ್‌ವಾಲ್ ಮಗ ನಿತಿನ್ ಅಗರ್‌ವಾಲ್, ಬಿಎಸ್‌ಪಿ ತೊರೆದು ಬಿಜೆಪಿ ಸೇರಿರುವ ಬ್ರಿಜೇಶ್ ಪಾಠಕ್, ಕಾಂಗ್ರೆಸ್ ತ್ಯಜಿಸಿದ್ದ ರೀಟಾ ಬಹುಗುಣ ಜೋಶಿ, ಮುಲಾಯಂ ಸೊಸೆ ಅಪರ್ಣಾ ಯಾದವ್, ಎಸ್‌ಪಿ ಮುಖಂಡ ಶಿವಪಾಲ್, ಕಾಂಗ್ರೆಸ್ ಮುಖಂಡ ಪಿ.ಎಲ್. ಪುನಿಯಾ ಮಗ ತನುಜ್ ಪುನಿಯಾ ಕಣದಲ್ಲಿರುವ ಪ್ರಮುಖರು.
(ಚಿತ್ರ ಕೃಪೆ: ಏಐಅರ್)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.