1ರೂ.ಗಳ 10 ಸಾವಿರ ನಾಣ್ಯ: 90 ನಿಮಿಷ ಎಣಿಸಿದ ಅಧಿಕಾರಿಗಳದ್ದೇ ಪುಣ್ಯ!

By Web DeskFirst Published Nov 9, 2018, 3:05 PM IST
Highlights

ಚುನಾವಣಾ ಠೇವಣಿಯಾಗಿ ೧ರೂ.ಗಳ ೧೦ ಸಾವಿರ ನಾಣ್ಯ ಕೊಟ್ಟ ಅಭ್ಯರ್ಥಿ! ನಾಣ್ಯಗಳನ್ನಜು ಎಣಿಸಲು ಬರೋಬ್ಬರಿ 90 ನಿಮಿಷ ಕಳೆದ ಚುನಾವಣಾ ಅಧಿಕಾರಿಗಳು! ಮಧ್ಯಪ್ರದೇಶದ ಇಂಧೋರ್-3 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ದೀಪಕ್ ಕುಮಾರ್! ಸ್ವರ್ಣಿಮ್ ಭಾರತ ಇಂಕ್ವಿಲಾಬ್ ಪಕ್ಷದ ಅಭ್ಯರ್ಥಿ ದೀಪಕ್ ಕುಮಾರ್! ಯಾರೂ ದೇಣಿಗೆ ನೀಡದ ಕಾರಣ ೧೦ ಸಾವಿರ ನಾಣ್ಯ ಕೊಟ್ಟ ದೀಪಕ್

ಇಂಧೋರ್(ನ.9): ಎದುರಿಗೆ ಕುಳಿತಿದ್ದ ಚುನಾವಣಾ ಅಧಿಕಾರಿಗಳ ಮುಂದೆ 1 ರೂ.ಗಳ 10 ಸಾವಿರ ನಾಣ್ಯಗಳ ಚೀಲ ಇಟ್ಟಾತ, 'ಮೇ ಭಿ ಕ್ಯಾಂಡಿಟೇಟ್' ಅಂದಿದ್ದ. ನಾಣ್ಯಗಳ ಚೀಲ ಎತ್ತಿಕೊಂಡ 5 ಜನ ಚುನಾವಣಾ ಅಧಿಕಾರಿಗಳು, 1 ರೂ.ಗಳ 10 ಸಾವಿರ ನಾಣ್ಯಗಳನ್ನು ಎಣಿಸಲು ಭರ್ತಿ ೯೦ ನಿಮಿಷ ತೆಗೆದುಕೊಂಡಿದ್ದಾರೆ.

ಹೌದು, ಮಧ್ಯಪ್ರದೇಶದಲ್ಲಿ ಇದೀಗ ವಿಧಾನಸಭೆ ಚುನಾವಣೆ ಕಾವು ಹೆಚ್ಚಾಗಿದ್ದು, ಇಂಧೋರ್-೩ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯೋರ್ವ ಚುನಾವಣಾ ಠೇವಣಿ ನೀಡಲು 1 ರೂ.ಗಳ 10 ಸಾವಿರ ನಾಣ್ಯಗಳನ್ನು ನೀಡಿದ ಘಟನೆ ನಡೆದಿದೆ.

ಇಲ್ಲಿನ ಸ್ವರ್ಣಿಮ್ ಭಾರತ ಇಂಕ್ವಿಲಾಬ್ ಪಾರ್ಟಿಯ ಅಭ್ಯರ್ಥಿ ದೀಪಕ್ ಕುಮಾರ್ 1 ರೂ.ಗಳ 10 ಸಾವಿರ ನಾಣ್ಯಗಳನ್ನು ಚುನಾವಣಾ ಠೇವಣಿಯಾಗಿ ನೀಡಿದ್ದಾರೆ. ದೀಪಕ್ ಪವಾರ್ ನೀಡಿದ ನಾಣ್ಯಗಳನ್ನು ಎಣಿಸಲು ೫ ಜನ ಚುನಾವಣಾ ಅಧಿಕಾರಿಗಳು ಬರೋಬ್ಬರಿ 90 ನಿಮಿಷ ವ್ಯಯ ಮಾಡಿದ್ದಾರೆ.

ಇದಕ್ಕೆ ಕಾರಣವನ್ನೂ ನೀಡಿರುವ ದೀಪಕ್ ಪವಾರ್, ಚುನಾವಣೆಗೆ ಸ್ಪರ್ಧಿಸಲು ತಮಗೆ ಯಾರೂ ದೇಣಿಗೆ ನೀಡದ ಕಾರಣ 1 ರೂ.ಗಳ 10 ಸಾವಿರ ನಾಣ್ಯಗಳನ್ನು ಸೇರಿಸಿದ್ದಾಗಿ ಹೇಳಿದ್ದಾರೆ.

ಇನ್ನು ದೀಪಕ್ ಕುಮಾರ್ ಚುನಾವಣಾ ಅರ್ಜಿ ಸ್ವೀಕರಿಸಿರುವ ಚುನಾವಣಾ ಆಯೋಗ ಇಂಧೊರ್-3 ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅನುಮತಿ ನೀಡಿದೆ.

click me!