
ಬೆಂಗಳೂರು(ಅ.27): ಶಿವಾಜಿನಗರದಲ್ಲಿ ಹಾಡಹಗಲೇ ಕೊಲೆಯಾಗಿದ್ದ RSS ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಈ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕೊಲೆ ಹಿಂದಿನ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಈ ಕೊಲೆ ಆರೋಪಿಗಳು ಒಂದು ರಾಜಕೀಯ ಪಕ್ಷದ ಸಕ್ರಿಯ ಕಾರ್ಯಕರ್ತರೆಂಬುವುದು ಶಾಕಿಂಗ್ ನ್ಯೂಸ್.
ಈ ಕೊಲೆಯ ಹಿಂದೆ ಪ್ರಮುಖವಾಗಿ 4 ಆರೋಪಿಗಳು ಭಾಗಿಯಾಗಿದ್ದು, ಇವರಲ್ಲಿ ನವೀದ್, ನಜೀರ್ ಮತ್ತು ಮಜರ್ ಎಂಬವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇನ್ನು ಇದರ ಹಿಂದಿನ ಪ್ರಮುಖ ಸೂತ್ರದಾರ, 4ನೇ ಆರೋಪಿಗಾಗಿ ಪೊಲೀಸರ ಹುಡುಕಾಟ ಮುಂದುವರೆಸಿದ್ದಾರೆ.
ಅಕ್ಟೋಬರ್ 16ರಂದು RSS ಪಥಸಂಚಲನ ಮುಗಿಸಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಬೈಕ್'ನಲ್ಲಿ ಬಂದ ಆರೋಪಿಗಳು ರುದ್ರೇಶ್ ತಲೆ ಕತ್ತರಿಸಿದ್ದರು. ಆದರೆ ಇವೆಲ್ಲದರ ಬಳಿಕ ರುದ್ರೇಶ್ ಕೇವಲ RSS ಕಾರ್ಯಕರ್ತನಾಗಿರದೆ ಸಿವಿಲ್ ಕಾಂಟ್ರಾಕ್ಟರ್ ಕೂಡಾ ಆಗಿದ್ದ ಹೀಗಾಗಿ ಹಣ ಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಇವರ ಕೊಲೆ ನಡೆದಿರಬಹುದು ಎಂಬ ಅನುಮಾನ ಮೂಡಿತ್ತು. ಆದರೆ ಸುವರ್ಣ ನ್ಯೂಸ್'ಗೆ ಲಭ್ಯವಾದ ಮಾಹಿತಿ ಪ್ರಕಾರ ಈ ಕೊಲೆ ವೈಯುಕ್ತಿಕ ದ್ವೇಷದಿಂದ ನಡೆಯದೆ, ಸೈದ್ಧಾಂತಿಕ ಕಾರಣದಿಂದ ಕೊಲೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.